21 killed in school : ಟೆಕ್ಸಾಸ್​ ಶಾಲೆಯಲ್ಲಿ ಯುವಕನಿಂದ ಫೈರಿಂಗ್​ : 21 ಮಂದಿ ಸಾವು, ಬಂದೂಕುಧಾರಿಯ ಹತ್ಯೆ

21 killed in school : ಅಮೆರಿಕದ ಟೆಕ್ಸಾಸ್​ನ ಪ್ರಾಥಮಿಕ ಶಾಲೆಯಲ್ಲಿ 18ರ ಹರೆಯದ ಯುವಕನೊಬ್ಬ ಅಮಾನವೀಯವಾಗಿ ಗುಂಡಿನ ದಾಳಿ ನಡೆಸಿದ್ದು ಈ ಗುಂಡಿನ ದಾಳಿಯಲ್ಲಿ 18 ಮಂದಿ ವಿದ್ಯಾರ್ಥಿಗಳು ಮತ್ತು ಓರ್ವ ಶಿಕ್ಷಕ ಸೇರಿದಂತೆ ಒಟ್ಟು 21 ಮಂದಿ ಮೃತಪಟ್ಟಿದ್ದಾರೆ. ಅಲ್ಲದೇ ಬಂದೂಕುಧಾರಿ ಯುವಕನನ್ನು ಪೊಲೀಸರು ಹತ್ಯೆ ಮಾಡಿದ್ದಾರೆ ಎಂದು ಟೆಕ್ಸಾಸ್​​​ನ ಗವರ್ನರ್​​ ಗ್ರೆಗ್​​​ ಅಬಾಟ್​ ಈ ಘಟನೆಯ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ.


2012ರಕ್ಕು ಕನೆಕ್ಟಿಕಟ್​​ನ ನ್ಯೂಟೌನ್​ನಲ್ಲಿರುವ ಸ್ಯಾಂಡಿ ಹುಕ್​ ಎಲಿಮಂಟರಿ ಶಾಲೆಯಲ್ಲಿ ಇದೇ ಮಾದರಿಯಲ್ಲಿ ಭೀಕರವಾದ ಗುಂಡಿನ ದಾಳಿ ನಡೆದಿತ್ತು. ಇದಾದ ಬಳಿಕ ನಡೆದ ಅತ್ಯಂತ ದೊಡ್ಡ ದುರ್ಘಟನೆ ಈ ಘಟನೆಯಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಟೆಕ್ಸಾಸ್​ನ ಗವರ್ನರ್​​ ಗ್ರೆಗ್​ ಅಬಾಟ್​ಗೆ ಫೋನಾಯಿಸಿದ ಅಮೆರಿಕದ ಅಧ್ಯಕ್ಷ ಜೋ ಬೈಡನ್​​ ದುರ್ಘಟನೆಯ ಬಗ್ಗೆ ಇಂಚಿಂಚೂ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಅಲ್ಲದೇ ಈ ಸಂದರ್ಭದಲ್ಲಿ ಟೆಕ್ಸಾಸ್​ಗೆ ಬೇಕಾದ ಎಲ್ಲಾ ಅಗತ್ಯ ನೆರವನ್ನು ಸರ್ಕಾರ ನೀಡಲಿದೆ ಎಂದು ಜೋ ಬೈಡನ್​​ ಗ್ರೆಗ್​ ಅಬಾಟ್​​ಗೆ ಅಭಯ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.


ಕೆಲವು ಸಮಯದ ಹಿಂದೆ ನ್ಯೂಯಾರ್ಕ್​ನ ಬಫೆಲೋ ನಗರದಲ್ಲಿರುವ ಸೂಪರ್​ ಮಾರ್ಕೆಟ್​​ನಲ್ಲಿ ಬಂಧೂಕುದಾರಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ ಪರಿಣಾಮ 10 ಮಂದಿ ನಾಗರಿಕರು ಸಾವನ್ನಪ್ಪಿದ್ದರು. ಈ ಘಟನೆ ನಡೆದು ಕೇವಲ ಎರಡು ವಾರಗಳ ಒಳಗಾಗಿ ಇದೀಗ ಮತ್ತೆ ಗುಂಡಿನ ದಾಳಿಯ ಪ್ರಕರಣ ನಡೆದಿರುವುದು ಅಮೆರಿಕದಲ್ಲಿ ಆತಂಕ ಹೆಚ್ಚಲು ಕಾರಣವಾಗಿದೆ. ಈ ಹಿಂದೆ ನ್ಯೂಯಾರ್ಕ್​ನ ಭಫೆಲೋ ನಗರದಲ್ಲಿ ನಡೆದ ಗುಂಡಿನ ದಾಳಿಯನ್ನು ಜನಾಂಗೀಯ ಪ್ರೇರಿತ ಸಾಮೂಹಿಕ ಗುಂಡಿನ ದಾಳಿ ಎಂದು ವ್ಯಾಖ್ಯಾನಿಸಲಾಗಿತ್ತು.

ಇದನ್ನು ಓದಿ : KL Rahul Captain : IND vs SA ENG ಸರಣಿಗೆ ಟೀಂ ಇಂಡಿಯಾ ಆಯ್ಕೆ : T20 ಸರಣಿಗೆ ಕನ್ನಡಿಗ ರಾಹುಲ್‌ ನಾಯಕ

ಇದನ್ನೂ ಓದಿ : Harshal Patel injured : ಆರ್‌ಸಿಬಿ ತಂಡಕ್ಕೆ ಬಿಗ್‌ ಶಾಕ್‌ : ಖ್ಯಾತ ಬೌಲರ್‌ ಹರ್ಷಲ್‌ ಪಟೇಲ್‌ಗೆ ಗಾಯ

texas governor 21 killed in school shooting gunman dead

Comments are closed.