( Unknown facts about indian Shutter PV Sindhu ): ಪುಸರ್ಲಾ ವೆಂಕಟ ಸಿಂಧು ( Pusarla Venkata Sindhu) ಒಬ್ಬ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ (Badminton player).ಭಾರತದ ಅತ್ಯಂತ ಯಶಸ್ವಿ ಕ್ರೀಡಾಪಟುಗಳಲ್ಲಿ ಇವರು ಒಬ್ಬರು. ಒಲಂಪಿಕ್ ಯಲ್ಲಿ(Olympic) ಎರಡು ಬಾರಿ ವಿಜೇತರಾಗಿರುವ ಪಿವಿ ಸಿಂಧು, ಇದೀಗ ಸೆಮಿಫೈನಲ್‌ನಲ್ಲಿ (Semi final ) ಸ್ಥಾನ ಕಾಯ್ದಿರಿಸಲು 2022 ರ ಥೈಲ್ಯಾಂಡ್ (Thailand )ಓಪನ್ ನಿಂದ ಅಕಾನೆ ಯಮಗುಚಿಯನ್ನು ಸೋಲಿಸಿದರು.ಅವರ ಖುಷಿಯನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅವುಗಳನ್ನು ಕೆಳಗೆ ಓದಿ :
1. ಒಮ್ಮೆ ಸಿಂಧು (PV Sindhu ) ಟೂರ್ನಮೆಂಟ್‌ಗಾಗಿ ತನ್ನ ಸಹೋದರಿಯ ಮದುವೆಯನ್ನು ಬಿಟ್ಟು ಹಾಕಿದರು!!
ನಮಗೆ ಗೊತ್ತಿರುವ ಹಾಗೆ ಸೆಲೆಬ್ರಿಟಿ ಅಥವಾ ಖ್ಯಾತ ಆಟಗಾರರು ತಮ್ಮ ಕುಟುಂಬದವರಿಗೆ ಒಟ್ಟಿಗೆ ಸಮಯ ಉಳಿಯುವುದು ತೀರಾ ಕಡಿಮೆ. ಆದ್ರೆ ಪಿವಿ ಸಿಂಧು ಕೊಂಚ ವಿಭಿನ್ನ ಅವರು ತನ್ನ ಬ್ಯಾಡ್ಮಿಂಟನ್ ವೃತ್ತಿಜೀವನದ ಮುಂದೆ ಏನನ್ನೂ ಬರಲು ಬಿಡಲಿಲ್ಲ. ಅವರು 2012 ರಲ್ಲಿ ಲಕ್ನೋದ ಸೈಯದ್ ಮೋದಿ ಇಂಟರ್ನ್ಯಾಷನಲ್ ಇಂಡಿಯಾ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ನಲ್ಲಿ ಆಡುತ್ತಿದ್ದ ಕಾರಣ ತನ್ನ ಅಕ್ಕ ಪಿ ದಿವ್ಯಾಳ ಮದುವೆಯನ್ನು ತಪ್ಪಿಸಿಕೊಂಡರು.
ಆ ಸಮಯದಲ್ಲಿ ಸಿಂಧೂ ಅವರಿಗೆ ಬರಿ 17 ವರ್ಷ ಅಷ್ಟೇ.
2. ಸಿಂಧು (PV Sindhu) ತರಬೇತಿಗಾಗಿ 120 ಕಿ.ಮೀ ಪ್ರಯಾಣಿಸುತ್ತಿದ್ದಳು
ಸಿಂಧು ಕಠಿಣ ಪರಿಶ್ರಮಿಯಾಗಿದ್ದು, ಬಾಲ್ಯದಿಂದಲೂ ಈ ಗುಣ ಅವಳಲ್ಲಿದೆ. ಬೆಳಗ್ಗೆ ಮೂರು ಗಂಟೆಗೆ ಎದ್ದು, ತನ್ನ ಮನೆಯಿಂದ 60 ಕಿಮೀ ದೂರದಲ್ಲಿರುವ ಪುಲ್ಲೇಲ ಗೋಪಿಚಂದ್ ಅಕಾಡೆಮಿಗೆ ಹೋಗುತ್ತಾರೆ. ಆ ಮೂಲಕ ತರಬೇತಿಗಾಗಿ ಪ್ರತಿದಿನ 120 ಕಿ.ಮೀ ಪ್ರಯಾಣಿಸುತ್ತಿದ್ದಳು. ಸಾಧಿಸೋ ಛಲ ಇದ್ದರೆ, ಇಂತಹ ಕಷ್ಟಗಳು ಇದ್ದರು ಕೂಡ ಹೂಗಳು ಕಷ್ಟವೆಂದು ಎನಿಸುವುದಿಲ್ಲ.
3. ಸಿಂಧುವಿನ (PV Sindhu) ತಂದೆ ತಾಯಿ ಇಬ್ಬರೂ ಕ್ರೀಡಾಪಟುಗಳು
ಪಿವಿ ಸಿಂಧು ಜುಲೈ 5, 1995 ರಂದು ಪಿವಿ ರಮಣ ಮತ್ತು ಪಿ ವಿಜಯಾ ದಂಪತಿಗೆ ಜನಿಸಿದರು. ಅನೇಕರಿಗೆ ತಿಳಿದಿಲ್ಲ ಆದರೆ ಕ್ರೀಡೆಯು ಅವಳ ರಕ್ತದಲ್ಲಿದೆ, ಅಕ್ಷರಶಃ ಹೌದು, ಅವರ ತಂದೆ ತಾಯಿಯರಿಬ್ಬರೂ ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರರಾಗಿದ್ದರು. ಆಕೆಯ ತಂದೆ 2000 ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹೀಗಾಗಿ ಅವರಿಗೆ ಕ್ರೀಡಾಕ್ಷೇತ್ರದಲ್ಲಿ ಬಹಳಷ್ಟು ಆಸಕ್ತಿ ಮೂಡಿರಬಹುದು.
4.ಆಹಾರ ಪ್ರಿಯೆ PV Sindhu
ಅನೇಕ ಕ್ರೀಡಾಪಟುಗಳು ತಮ್ಮ ದೈನಂದಿನ ಜೀವನದಲ್ಲಿ ಡಯಟಿಂಗ್ ರೂಟಿನಲ್ಲಿ ಅಳವಡಿಸಿರುತ್ತಾರೆ. ಆದ್ರೆ ಸಿಂಧು ಶುದ್ಧ ಆಹಾರ ಪ್ರಿಯೆ, ಅನೇಕರಿಗೆ ತಿಳಿದಿಲ್ಲ ಆದರೆ ಸಿಂಧುಗೆ ಐಸ್ ಕ್ರೀಮ್ ಅಂದರೆ ಅಚ್ಚುಮೆಚ್ಚು.ಇನ್ನೂ ಮೊಸರಿಗೆ ಸಕ್ಕರೆ ಹಾಕಿ ತಿನ್ನುವುದೆಂದರೆ ಮತ್ತಷ್ಟು ಇಷ್ಟ.
5.ಒಮ್ಮೆ ಮೂರು ತಿಂಗಳು ಕಾಲ ಫೋನ್ ಇಲ್ಲ
2016ರ ರಿಯೋ ಒಲಿಂಪಿಕ್ಸ್‌ಗೂ ಮುನ್ನ ಕೋಚ್ ಪುಲ್ಲೇಲ ಗೋಪಿಚಂದ್ ಆಕೆಯ ಫೋನ್ ತೆಗೆದುಕೊಂಡು ಹೋಗಿ 3 ತಿಂಗಳ ಕಾಲ ಆಕೆಗೆ ವಾಪಸ್ ನೀಡಿರಲಿಲ್ಲ. ಏಕೆಂದರೆ ಅವಳ ಸಂಪೂರ್ಣ ಗಮನ ತರಬೇತಿಯಲ್ಲಿ ಇರಲಿ ಎಂದು ಕೋಚ್ ಹಾಗೆ ಮಾಡಿದ್ದರು.
ಇದನ್ನೂ ಓದಿ : Cabinet Expansion : ಸದ್ಯಕ್ಕಿಲ್ಲ ಸಂಪುಟ ವಿಸ್ತರಣೆ Or ಪುನಾರಚನೆ : ಗ್ರೀನ್ ಸಿಗ್ನಲ್ ನಿರಾಕರಿಸಿದ BJP ಹೈಕಮಾಂಡ್