Cabinet Expansion : ಸದ್ಯಕ್ಕಿಲ್ಲ ಸಂಪುಟ ವಿಸ್ತರಣೆ Or ಪುನಾರಚನೆ : ಗ್ರೀನ್ ಸಿಗ್ನಲ್ ನಿರಾಕರಿಸಿದ BJP ಹೈಕಮಾಂಡ್

ಬೆಂಗಳೂರು : ರಾಜ್ಯದಲ್ಲಿ ಸುರಿಯುತ್ತಿರುವ ಅಕಾಲಿಕ‌ ಮಳೆಗಿಂತಲೂ ಹೆಚ್ಚು ಸದ್ದು ಮಾಡ್ತಿರೋದು ಬಿಜೆಪಿ ಸಚಿವ ಸಂಪುಟ ವಿಸ್ತರಣೆ (Cabinet Expansion) . ಆದರೆ ಇನ್ನೇನು ತಿಂಗಳಾಂತ್ಯಕ್ಕೆ ವಿಸ್ತರಣೆಯಾಗಲಿದೆ ಸಂಪುಟ ಎಂದುಕೊಂಡು ಸಂಭ್ರಮದಲ್ಲಿದ್ದ ಶಾಸಕರಿಗೆ ಈಗ ಮತ್ತೊಮ್ಮೆ ಶಾಕ್ ಎದುರಾಗಿದ್ದು ಈ ಭಾರಿಯೂ ಸಂಪುಟ ವಿಸ್ತರಣೆ ಅನುಮಾನ ಎನ್ನಲಾಗ್ತಿದೆ.

ಎಲ್ಲ ಅಂದುಕೊಂಡಂತೆ ಆಗಿದ್ದರೇ, ಈ ತಿಂಗಳ 20 ರೊಳಗೆ ಸಿಎಂ ಸಂಪುಟ ವಿಸ್ತರಣೆ ಪೂರ್ಣಗೊಳಿಸಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಎರಡೆರಡು ಭಾರಿ ರಾಜ್ಯಕ್ಕೆ ಬಂದರೂ ಅಮಿತ್ ಶಾ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ತೋರಿಸಲಿಲ್ಲ. ಈ ಮಧ್ಯೆ ಸಿಎಂ ದಾವೋಸ್ ಗೆ ತೆರಳುವ ಮುನ್ನ ಸಂಪುಟ ವಿಸ್ತರಣೆಯಾಗಲಿದೆ ಎಂದು ನೀರಿಕ್ಷಿಸಲಾಗಿತ್ತು. ಆದರೆ ಈಗ ಮೂಲಗಳಿಂದ ಸಿಗ್ತಿರೋ ಮಾಹಿತಿ ಪ್ರಕಾರ ಸದ್ಯ ಸಂಪುಟ ವಿಸ್ತರಣೆ ಮಾಡೋ ಯಾವುದೇ ಯೋಚನೆ ಬಿಜೆಪಿ ಹೈಕಮಾಂಡ್ ಬಳಿ ಇಲ್ಲ. ಹೀಗಾಗಿ ಹೈಕಮಾಂಡ್ ಯಾವುದೇ ಅಡೆತಡೆಯಿಲ್ಲದೇ ಸಿಎಂ ಬೊಮ್ಮಾಯಿಗೆ ವಿದೇಶ ಪ್ರವಾಸಕ್ಕೆ ಗ್ರೀನ್ ಸಿಗ್ನಲ್ ನೀಡಿದೆಯಂತೆ.

ಈ ಹಿಂದೆ ಸಂಪುಟ ವಿಸ್ತರಣೆ ಕಾರಣಕ್ಕೆ ಬೊಮ್ಮಾಯಿ ವಿದೇಶ ಪ್ರವಾಸ ರದ್ದಾಗಲಿದೆ ಎನ್ನಲಾಗಿತ್ತು. ಆದರೆ ಈಗ ಬೊಮ್ಮಾಯಿ ವಿದೇಶಕ್ಕೆ ತೆರಳುವ ಕಾರ್ಯಕ್ರಮ ಯಾವುದೇ ಅಡ್ಡಿಯಿಲ್ಲದೇ ನಿರಾತಂಕವಾಗಿ ನಡೆಯಲಿದ್ದು ಈಗಾಗಲೇ ಟಿಪಿ ಕೂಡ ಬಿಡುಗಡೆಗೊಂಡಿದೆ. ಇನ್ನೇನು ಜೂನ್ ಆರಂಭದಲ್ಲಿ ಅಂದ್ರೇ ಮೂರನೇ ತಾರೀಕು ರಾಜ್ಯದಲ್ಲಿ ಎಂಎಲ್ ಸಿ ಚುನಾವಣೆ ನಡೆಯಲಿದೆ. ಅದಾದ ಬಳಿಕ ರಾಜ್ಯಸಭೆ ಚುನಾವಣೆ ಜೂನ್ 10 ರಂದು ನಡೆಯಲಿದೆ.

ಈ ಎಲ್ಲ ಚುನಾವಣೆ ಮಧ್ಯೆ ಹೈಕಮಾಂಡ್ ಸಂಪುಟ ವಿಸ್ತರಣೆಗೆ ಅವಕಾಶ ನೀಡೋದು ಅನುಮಾನ. ಹೀಗಾಗಿ ಬಿಜೆಪಿ ಹೈಕಮಾಂಡ್ ಒಂದಾದ ಮೇಲೊಂದು ಕಾರಣ ನೀಡಿ ಸಂಪುಟ ವಿಸ್ತರಣೆಯನ್ನು ಮುಂದೂಡುತ್ತಲೇ ಸಾಗಲಿದ್ದು ಸದ್ಯ ಸಚಿವರಾಗೋ ಶಾಸಕರು ಕನಸು ಈಡೇರೋದು ಅನುಮಾನ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಸದ್ಯ ಸಿಎಂ‌ ದೆಹಲಿಯಲ್ಲೇ ಬೀಡು ಬಿಟ್ಟಿದ್ದರೂ ಹೈಕಮಾಂಡ್ ಬಿಜೆಪಿ ಎಂಎಲ್ ಸಿ ಮತ್ತು ರಾಜ್ಯಸಭಾ ಸದಸ್ಯರ ಆಯ್ಕೆ ಬಗ್ಗೆ ಚರ್ಚೆ ನಡೆಸಲಿದ್ದು, ಇಲ್ಲಿ ಸಂಪುಟ ಪುನಾರಚನೆ ಅಥವಾ ವಿಸ್ತರಣೆಯ ಬಗ್ಗೆ ಚರ್ಚೆಯಾಗೋದು ಬಹುತೇಕ ಅನುಮಾನ ಎನ್ನಲಾಗ್ತಿದೆ. ಹೀಗಾಗಿ ಸದ್ಯ ಸಂಪುಟ ಸೇರೊ ಕನಸಿನಲ್ಲಿರೋ ಶಾಸಕರು ಸೈಲೆಂಟಾಗೇ ತಮ್ಮ ಅಸಮಧಾನ ತೋಡಿಕೊಳ್ತಿದ್ದು, ಪಕ್ಷದಲ್ಲಿ ನಮ್ಮನ್ನು ನಡೆಸಿಕೊಳ್ತಿರೋ ರೀತಿನೇ ಸರಿಯಿಲ್ಲ ಎಂದು ನೊಂದುಕೊಳ್ತಿದ್ದಾರಂತೆ.

ಇದನ್ನೂ ಓದಿ : ಶಾಸಕರು ಗೋಣಿಚೀಲದಲ್ಲಿ ಹಣ ತರ್ತಾರೆ ! ಹರೀಶ್‌ ಪೂಂಜಾಗೆ ಮುಳುವಾಗುತ್ತಾ ಇಡಿ(ED)ಯ ಪಿಎಂಎಲ್‌ಎ ಕಾಯ್ಡೆ ?

ಇದನ್ನು ಓದಿ : Incharge Ministers fight : ಮಳೆ‌ ನಡುವೆ ಮತ್ತೆ ಉಸ್ತುವಾರಿ ಫೈಟ್ : ಬೆಂಗಳೂರಿನ ಹೊಣೆ ಯಾರಿಗೆ ನೀಡ್ತಾರೆ ಸಿಎಂ

BJP High Command Rejecting Cabinet Expansion Reconstruction

Comments are closed.