USA Cricket team : ಟಿ20 ವಿಶ್ವಕಪ್’ನಿಂದ ಪಾಕ್ ಔಟ್, ಸೂಪರ್-8 ತಲುಪಿ ಇತಿಹಾಸ ನಿರ್ಮಿಸಿದ ಅಮೆರಿಕ

ICC T 20 World Cup 2024 Super-8  :ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC t20 World Cup 2024) ಸೂಪರ್-8 ಹಂತಕ್ಕೆ ಲಗ್ಗೆ ಇಟ್ಟಿದೆ. ಫ್ಲೋರಿಡಾದ ಲಾಡರ್’ಹಿಲ್ ಮೈದಾನದಲ್ಲಿ ಶುಕ್ರವಾರ ನಡೆಯಬೇಕಿದ್ದ ಅಮೆರಿಕ (USA Cricket Team) ಹಾಗೂ ಐರ್ಲೆಂಡ್ (USA vs Ireland) ನಡುವಿನ ಪಂದ್ಯ ಒಂದೂ ಎಸೆತ ಕಾಣದೆ ಮಳೆಯಿಂದ ರದ್ದುಗೊಂಡಿತು.

ICC T 20 World Cup 2024 Super-8  : ಫ್ಲೋರಿಡಾ: ಆತಿಥೇಯ ಅಮೆರಿಕ ತಂಡ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC t20 World Cup 2024) ಸೂಪರ್-8 ಹಂತಕ್ಕೆ ಲಗ್ಗೆ ಇಟ್ಟಿದೆ. ಫ್ಲೋರಿಡಾದ ಲಾಡರ್’ಹಿಲ್ ಮೈದಾನದಲ್ಲಿ ಶುಕ್ರವಾರ ನಡೆಯಬೇಕಿದ್ದ ಅಮೆರಿಕ (USA Cricket Team) ಹಾಗೂ ಐರ್ಲೆಂಡ್ (USA vs Ireland) ನಡುವಿನ ಪಂದ್ಯ ಒಂದೂ ಎಸೆತ ಕಾಣದೆ ಮಳೆಯಿಂದ ರದ್ದುಗೊಂಡಿತು. ಹೀಗಾಗಿ ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕ ಹಂಚಲಾಯಿತು.

USA Cricket team Create history by reaching the ICC T 20 World Cup 2024 Super-8 after being knocked out of the T20 World Cup
Image Credit to Original Source

ಇದರೊಂದಿಗೆ ‘ಎ’ ಗುಂಪಿನಲ್ಲಿ ಆಡಿದ 4 ಪಂದ್ಯಗಳಿಂದ 2 ಗೆಲುವು, ಒಂದು ಸೋಲಿನೊಂದಿಗೆ ಒಟ್ಟು 5 ಅಂಕ ಕಲೆ ಹಾಕಿದ ಅಮೆರಿಕ ಎ ಗುಂಪಿನಿಂದ 2ನೇ ತಂಡವಾಗಿ ಸೂಪರ್-8 ಹಂತಕ್ಕೇರಿತು. ಭಾರತ ತಂಡ ಆಡಿರುವ ಮೂರೂ ಪಂದ್ಯಗಳನ್ನು ಗೆದ್ದು ಎ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಸೂಪರ್-8 ಹಂತ ಪ್ರವೇಶಿಸಿದೆ.

ಇದನ್ನೂ ಓದಿ : Mayank Agarwal : ಕರಾವಳಿಯ ದೈವೀಶಕ್ತಿ, ಪ್ರಕೃತಿ ಸೌಂದರ್ಯಕ್ಕೆ ಮನಸೋತ ಟೀಮ್ ಇಂಡಿಯಾ ಕ್ರಿಕೆಟರ್

ಇಂದು (ಶನಿವಾರ) ಫ್ಲೋರಿಡಾದ ಲಾಡರ್’ಹಿಲ್ ಮೈದಾನದಲ್ಲಿ ನಡೆಯಲಿರುವ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ರೋಹಿತ್ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ ಕೆನಡಾ ತಂಡವನ್ನು ಎದುರಿಸಲಿದೆ. ಅಮೆರಿಕ ಮತ್ತು ಐರ್ಲೆಂಡ್ ನಡುವಿನ ಪಂದ್ಯ ಮಳೆಯಿಂದ ರದ್ದಾಗುವುದರೊಂದಿಗೆ ಪಾಕಿಸ್ತಾನ ತಂಡದ ಸೂಪರ್-8 ಕನಸು ನುಚ್ಚುನೂರುಗೊಂಡಿತು.

ಇದನ್ನೂ ಓದಿ : IPL Brand Value: ಐಪಿಎಲ್ ಟೂರ್ನಿಯನ್ನೇ ಖರೀದಿ ಮಾಡಲು ಎಷ್ಟು ದುಡ್ಡು ಬೇಕು ಗೊತ್ತಾ?

ಪಾಕಿಸ್ತಾನದ ಸೂಪರ್-8 ಕನಸು ಜೀವಂತವಾಗಿರಬೇಕಿದ್ದರೆ ಐರ್ಲೆಂಡ್ ವಿರುದ್ಧ ಅಮೆರಿಕ ಸೋಲಬೇಕಿತ್ತು. ಆದರೆ ಪಂದ್ಯ ರದ್ದಾಗುವುದರೊಂದಿಗೆ ಅಮೆರಿಕ ಒಂದು ಪಾಯಿಂಟ್ ಗಳಿಸಿ ಮುಂದಿನ ಹಂತಕ್ಕೆ ಅರ್ಹತೆ ಪಡೆಯುತು. ಲೀಗ್ ಹಂತದಲ್ಲಿ ಅಮೆರಿಕ ವಿರುದ್ಧ ಸೂಪರ್ ಓವರ್’ನಲ್ಲಿ ಸೋಲು ಕಂಡದ್ದು ಪಾಕಿಸ್ತಾನ ತಂಡಕ್ಕೆ ಮಾರಕವಾಗಿ ಪರಿಣಮಿಸಿತು.

USA Cricket team Create history by reaching the ICC T 20 World Cup 2024 Super-8 after being knocked out of the T20 World Cup
Image Credit to Original Source

ಮತ್ತೊಂದೆಡೆ ಶನಿವಾರ ವೆಸ್ಟ್ ಇಂಡೀಸ್’ನ ಕಿಂಗ್ ಸ್ಟನ್ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಕ್ರಿಕೆಟ್ ಶಿಶು ನೇಪಾಳ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ 1 ರನ್ನಿಂದ ವೀರೋಚಿತ ಸೋಲು ಅನುಭವಿಸಿತು. ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್’ಗಳಲ್ಲಿ 7 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿತ್ತು.

ಇದನ್ನೂ ಓದಿ : Exclusive: ಕರ್ನಾಟಕ ಕ್ರಿಕೆಟ್ ತಂಡಕ್ಕೆ ಯರೇ ಗೌಡ ಕೋಚ್, ಪಿ.ವಿ ಶಶಿಕಾಂತ್‌ಗೆ ಗೇಟ್‌ಪಾಸ್!

ಗುರಿ ಬೆನ್ನಟ್ಟಿದ ನೇಪಾಳ ಕೊನೆಯ ಎಸೆತದಲ್ಲಿ ಮಾಡಿದ ಎಡವಟ್ಟಿನಿಂದಾಗಿ ನಿಗದಿತ 20 ಓವರ್’ಗಳಲ್ಲಿ 7 ವಿಕೆಟ್ ನಷ್ಟಕ್ಕೆ 114 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಇದರೊಂದಿಗೆ ಡಿ ಗುಂಪಿನಲ್ಲಿ ಆಡಿದ ನಾಲ್ಕೂ ಪಂದ್ಯಗಳನ್ನು ಗೆದ್ದಿರುವ ದಕ್ಷಿಣ ಆಫ್ರಿಕಾ ಅಜೇಯವಾಗಿ ಸೂಪರ್-8 ಹಂತಕ್ಕೆ ಲಗ್ಗೆ ಇಟ್ಟಿದೆ.

USA Cricket team Create history by reaching the ICC T 20 World Cup 2024 Super-8 after being knocked out of the T20 World Cup

Comments are closed.