ಟೀಂ ಇಂಡಿಯಾ ನಾಯಕ ವಿರಾಟ್ ಕೊಯ್ಲಿ ಮೂರು ಮಾದರಿಯ ಕ್ರಿಕೆಟ್ ನಲ್ಲೂ ಯಶಸ್ಸನ್ನು ಕಂಡಿದ್ದಾರೆ. ನಾಯಕತ್ವದ ಜೊತೆಗೆ ಬ್ಯಾಟಿಂಗ್ ನಲ್ಲಿಯೂ ಮಿಂಚುಹರಿಸುತ್ತಿದ್ದಾರೆ.

ಈ ನಡುವಲ್ಲೇ ಟೀಂ ಇಂಡಿಯಾಕ್ಕೆ ಪರ್ಯಾಯ ನಾಯಕರ ಹೆಸರುಗಳು ಕೇಳಿಬರುತ್ತಿದ್ದು, ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾ ಸರಣಿ ನಡೆಯಲಿದ್ದು, ಇದೇ ವೇಳೆಯಲ್ಲಿಯೇ ಭಾರತ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಬೇಕಿದೆ.

ಈ ಸಮಯದಲ್ಲಿ ಎರಡು ತಂಡಗಳನ್ನು ಕಳುಹಿಸುವ ಕುರಿತು ಬಿಸಿಸಿಐ ಚಿಂತೆನ ನಡೆಸಿದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ನಾಯಕತ್ವಕ್ಕೆ ಹಲವು ಹೆಸರುಗಳು ಕೇಳಿಬಂದಿತ್ತು.

ಅಲ್ಲದೇ ಟೀಂ ಇಂಡಿಯಾಕ್ಕೆ ಟೆಸ್ಟ್, ಏಕದಿನ ಹಾಗೂ ಟಿ 20 ತಂಡಗಳಿಗೆ ಪ್ರತ್ಯೇಕ ನಾಯಕರನ್ನು ನೇಮಿಸುವ ಕುರಿತು ಚಿಂತನೆಗಳು ನಡೆದಿದೆ ಎನ್ನಲಾಗುತ್ತಿದೆ.

ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕತ್ವವನ್ನು ವಿರಾಟ್ ಕೊಯ್ಲಿ, ಏಕದಿನ ತಂಡದ ನಾಯಕತ್ವವನ್ನು ರೋಹಿತ್ ಶರ್ಮಾ ಹಾಗೂ ಟಿ 20 ತಂಡದ ನಾಯಕತ್ವವನ್ನು ಭವಿಷ್ಯದ ದೃಷ್ಟಿಯಿಂದ ಕೆ.ಎಲ್.ರಾಹುಲ್ ಅವರಿಗೆ ವಹಿಸುವ ಕುರಿತು ಹಲವು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಆದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಯ್ಲಿ ಮೂರು ಮಾದರಿಯಲ್ಲಿಯೂ ಮಿಂಚುತ್ತಿದ್ದಾರೆ. ಇನ್ನೂ ಹಲವು ವರ್ಷಗಳ ಕಾಲ ಅವರೇ ನಾಯಕರಾಗಿ ಮುಂದುವರಿಯುವುದು ಒಳಿತು.

ಭವಿಷ್ಯದಲ್ಲಿ ಬೇಕಾದ್ರೆ ಮೂರು ಮಾದರಿಗಳಿಗೆ ಮೂರು ನಾಯಕರನ್ನು ಆಯ್ಕೆ ಮಾಡಲಿ. ಆದರೆ ಸದ್ಯದ ಮಟ್ಟಿಗೆ ವಿರಾಟ್ ಕೊಯ್ಲಿ ಅವರೇ ನಾಯಕರಾಗಿ ಮುಂದುವರಿಯಲಿ ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.