ಬುಧವಾರ, ಏಪ್ರಿಲ್ 30, 2025
HomeSportsCricketVirat Kohli : ಕಿಂಗ್ ಕೊಹ್ಲಿಗೆ ಕ್ರಿಕೆಟ್’ನಿಂದ 2 ವಾರ ಬ್ರೇಕ್, ಬೆಂಗಳೂರಿಗೆ ಬರಲಿದ್ದಾರೆ ವಿರಾಟ್;...

Virat Kohli : ಕಿಂಗ್ ಕೊಹ್ಲಿಗೆ ಕ್ರಿಕೆಟ್’ನಿಂದ 2 ವಾರ ಬ್ರೇಕ್, ಬೆಂಗಳೂರಿಗೆ ಬರಲಿದ್ದಾರೆ ವಿರಾಟ್; ಕಾರಣ ಗೊತ್ತೇ?

- Advertisement -

ಬೆಂಗಳೂರು: ವೆಸ್ಟ್ ಇಂಡೀಸ್ ಪ್ರವಾಸದ ನಂತರ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಕ್ರಿಕೆಟ್’ನಿಂದ ಎರಡು ವಾರ ಬ್ರೇಕ್ ಪಡೆದಿದ್ದಾರೆ. ವಿರಾಟ್ ಕೊಹ್ಲಿ (Virat Kohli) ಜೊತೆ ನಾಯಕ ರೋಹಿತ್ ಶರ್ಮಾಗೂ (Rohit Sharma) ಕೂಡ ಕ್ರಿಕೆಟ್’ನಿಂದ ಎರಡು ವಾರ ಬ್ರೇಕ್ ಸಿಕ್ಕಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಆಡಿದ್ದರು. ಆದರೆ 5 ಪಂದ್ಯಗಳ ಟಿ20 ಸರಣಿಯಲ್ಲಿ ಆಡುತ್ತಿರುವ ತಂಡದಿಂದ ಇಬ್ಬರನ್ನೂ ಕೈಬಿಡಲಾಗಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಬಾರಿಸಿದ್ದರು. ಆದರೆ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರಿಗೆ ಬ್ಯಾಟಿಂಗ್ ಅವಕಾಶ ಸಿಕ್ಕಿರಲಿಲ್ಲ. ಎರಡು ಹಾಗೂ 3ನೇ ಏಕದಿನ ಪಂದ್ಯಗಳಿಗೆ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ರೋಹಿತ್ ಮತ್ತು ಕೊಹ್ಲಿ ವೆಸ್ಟ್ ಇಂಡೀಸ್’ನಿಂದ ಭಾರತಕ್ಕೆ ವಾಪಸ್ಸಾಗಿದ್ದು, 2 ವಾರಗಳ ವಿಶ್ರಾಂತಿ ಪಡೆದಿದ್ದಾರೆ. ವಿಶ್ರಾಂತಿಯ ನಂತರ ಇಬ್ಬರೂ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಗೆ ಆಗಮಿಸಲಿದ್ದಾರೆ. ಏಷ್ಯಾ ಕಪ್ ಟೂರ್ನಿಗೆ ಭಾರತ ತಂಡದ ಪೂರ್ವಸಿದ್ಧತಾ ಶಿಬರ ಆಗಸ್ಟ್ 24ರಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಆರಂಭವಾಗಲಿದೆ.

ಇದನ್ನೂ ಓದಿ : Maharaja Trophy T20 : ಮಹಾರಾಜ ಟ್ರೋಫಿ ಟಿ20 ಟೂರ್ನಿಯ ವೇಳಾಪಟ್ಟಿ ಪ್ರಕಟ, ಉದ್ಘಾಟನಾ ಪಂದ್ಯದಲ್ಲಿ ಗುಲ್ಬರ್ಗ Vs ಬೆಂಗಳೂರು ಮುಖಾಮುಖಿ

ಏಷ್ಯಾ ಕಪ್ ಟೂರ್ನಿ (Asia Cup 2023) ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಸೆಪ್ಟೆಂಬರ್ 22ರಿಂದ 27ವರೆಗೆ ನಡೆಯಲಿದೆ. ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ತಂಡಗಳು ಭಾಗವಹಿಸಲಿವೆ.

ಏಷ್ಯಾ ಕಪ್ 2023 ಟೂರ್ನಿಯ ಲೀಗ್ ಪಂದ್ಯಗಳ ವೇಳಾಪಟ್ಟಿ (Asia Cup 2023 schedule)

  • ಆಗಸ್ಟ್ 30: ಪಾಕಿಸ್ತಾನ Vs ನೇಪಾಳ (ಬೆಳಗ್ಗೆ 10ಕ್ಕೆ, ಮುಲ್ತಾನ್)
  • ಆಗಸ್ಟ್ 31: ಶ್ರೀಲಂಕಾ Vs ಬಾಂಗ್ಲಾದೇಶ (ಬೆಳಗ್ಗೆ 9.30ಕ್ಕೆ, ಪಲ್ಲೆಕೆಲೆ)
  • ಸೆಪ್ಟೆಂಬರ್ 2: ಭಾರತ Vs ಪಾಕಿಸ್ತಾನ (ಬೆಳಗ್ಗೆ 9.30ಕ್ಕೆ, ಪಲ್ಲೆಕೆಲೆ)
  • ಸೆಪ್ಟೆಂಬರ್ 3: ಅಫ್ಘಾನಿಸ್ತಾನ Vs ಬಾಂಗ್ಲಾದೇಶ (ಬೆಳಗ್ಗೆ 9.30ಕ್ಕೆ, ಲಾಹೋರ್)
  • ಸೆಪ್ಟೆಂಬರ್ 4: ಭಾರತ Vs ನೇಪಾಳ (ಬೆಳಗ್ಗೆ 9.30ಕ್ಕೆ, ಪಲ್ಲೆಕೆಲೆ)
  • ಸೆಪ್ಟೆಂಬರ್ 5: ಅಫ್ಘಾನಿಸ್ತಾನ Vs ಶ್ರೀಲಂಕಾ (ಬೆಳಗ್ಗೆ 9.30ಕ್ಕೆ, ಲಾಹೋರ್)

Virat Kohli: 2 weeks break from cricket for King Kohli, Virat will come to Bangalore; Do you know the reason?

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular