ಮಂಗಳವಾರ, ಏಪ್ರಿಲ್ 29, 2025
HomeSportsCricketVirat Kohli net worth : ವಿರಾಟ್ ಕೊಹ್ಲಿ 1050 ಕೋಟಿಗಳ ಸರದಾರ, ಇಲ್ಲಿದೆ ಕುಬೇರ...

Virat Kohli net worth : ವಿರಾಟ್ ಕೊಹ್ಲಿ 1050 ಕೋಟಿಗಳ ಸರದಾರ, ಇಲ್ಲಿದೆ ಕುಬೇರ ಕೊಹ್ಲಿ ಸಂಪತ್ತಿನ ಅಸಲಿ ಗುಟ್ಟು!

- Advertisement -

ಬೆಂಗಳೂರು: ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli net worth) ಕ್ರಿಕೆಟ್ ಮೈದಾನದಲ್ಲಿ ರನ್ ಮಷಿನ್. ಹಾಗೇ ಮೈದಾನದ ಹೊರಗೆ ಕಿಂಗ್ ಕೊಹ್ಲಿ ಸಾವಿರ ಕೋಟಿಗಳ ಕುಬೇರ.

34 ವರ್ಷದ ವಿರಾಟ್ ಕೊಹ್ಲಿ ಅವರ ಸಂಪತ್ತಿನ ಒಟ್ಟು ಮೌಲ್ಯ 1050 ಕೋಟಿ. 2008ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಕಿಂಗ್ ಕೊಹ್ಲಿ ಕಳೆದ 15 ವರ್ಷಗಳಿಂದ ಟೀಮ್ ಇಂಡಿಯಾ ಪರ ಆಡುತ್ತಿದ್ದಾರೆ. 16 ವರ್ಷಗಳಿಂದ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಕ್ರಿಕೆಟ್ ಜಗತ್ತಿನ ಶ್ರೇಷ್ಠ ಬ್ಯಾಟ್ಸ್‌ ಮನ್‌ಗಳಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ ಸಾವಿರ ಕೋಟಿಗಳ ಸಂಪತ್ತಿನ ಒಡೆಯ. ಕ್ರಿಕೆಟ್‌ನಿಂದಲೇ ಕೊಹ್ಲಿ ಕೋಟಿಗಳ ಕೋಟೆಯನ್ನು ಕಟ್ಟಿಕೊಂಡಿದ್ದಾರೆ. ಬೆಂಗಳೂರು ಮೂಲಕ ಸ್ಟಾಕ್’ಗ್ರೊ (StockGro) ಎಂಬ ಟ್ರೇಡಿಂಗ್ ಮತ್ತು ಇನ್ವೆಸ್ಟಿಂಗ್ ಕಂಪನಿ ವಿರಾಟ್ ಕೊಹ್ಲಿ ಅವರ ಸಂಪತ್ತಿನ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ಬಿಚ್ಚಿಟ್ಟಿದೆ.

ವಿರಾಟ್ ಕೊಹ್ಲಿ ಸಂಪತ್ತಿನ ಸಂಪೂರ್ಣ ಮಾಹಿತಿ

  • ಭಾರತ ತಂಡದ ಸಂಬಳ:
  • ಗ್ರೇಡ್ ಎ+ಆಟಗಾರ: 7 ಕೋಟಿ (ವಾರ್ಷಿಕ)
  • ಟೆಸ್ಟ್ ಪಂದ್ಯ: 15 ಲಕ್ಷ (ಪ್ರತೀ ಪಂದ್ಯಕ್ಕೆ)
  • ಏಕದಿನ ಪಂದ್ಯ: 6 ಲಕ್ಷ (ಪ್ರತೀ ಪಂದ್ಯಕ್ಕೆ)
  • ಐಪಿಎಲ್: 15 ಕೋಟಿ (ಆರ್’ಸಿಬಿ ಪರ, ಪ್ರತೀ ವರ್ಷ)

ಸಾಮಾಜಿಕ ಜಾಲತಾಣದಲ್ಲಿ ಮಾಡುವ ಪೋಸ್ಟ್’ಗಳಿಗೆ ಪಡೆಯುವ ಮೊತ್ತ

  • ಇನ್’ಸ್ಟಾಗ್ರಾಂ: 8.9 ಕೋಟಿ
  • ಟ್ವಿಟರ್: 2.5 ಕೋಟಿ

ವಿರಾಟ್ ಕೊಹ್ಲಿ ಒಡೆತನದ ಆಸ್ತಿ:

  • ಮುಂಬೈನಲ್ಲಿ: 34 ಕೋಟಿ ಮೌಲ್ಯದ ಆಸ್ತಿ
  • ಗುರುಗ್ರಾಮ್: 80 ಕೋಟಿ ಮೌಲ್ಯದ ಆಸ್ತಿ
  • ಒಟ್ಟು: 110 ಕೋಟಿ ಮೌಲ್ಯದ ಆಸ್ತಿ

ವಿರಾಟ್ ಕೊಹ್ಲಿ ಹೊಂದಿರುವ ಕಾರುಗಳು
Audi R8 V10 Plus, R8 LMX, A8 L, Q8, Q7, RS 5, S5, Bentley

ವಿರಾಟ್ ಕೊಹ್ಲಿ ಅವರ ಬ್ರಾಂಡ್ ಎಂಡೋರ್ಸ್‌ಮೆಂಟ್‌ಗಳು

  • Vivo, Myntra, MRF and Tissot ಸೇರಿದಂತೆ ಒಟ್ಟು 26 ಬ್ರ್ಯಾಂಡ್’ಗಳಿಗೆ ವಿರಾಟ್ ಕೊಹ್ಲಿ ರಾಯಭಾರಿ.
  • ಪತೀ ಜಾಹೀರಾತು ಶೂಟಿಂಗ್’ಗೆ 7.5ರಿಂದ 10 ಕೋಟಿ ಪಡೆಯುವ ಕೊಹ್ಲಿ.

ವಿರಾಟ್ ಕೊಹ್ಲಿ ಒಡೆತನ ಸ್ಪೋರ್ಟ್ಸ್ ಟೀಮ್’ಗಳು

  • ಎಫ್’ಸಿ ಗೋವಾ (FC Goa): ಫುಟ್ಬಾಲ್
  • ಯುಎಇ ರಾಯಲ್ಸ್ (UAE Royals): ಟೆನಿಸ್
  • ಬೆಂಗಳೂರು ಯೋಧಾಸ್ (Bengaluru Yodhas): ಕುಸ್ತಿ

ಇದನ್ನೂ ಓದಿ : Shubman Gill : ಪ್ಯಾರಿಸ್’ನಲ್ಲಿದ್ದಾರೆ ಶುಭಮನ್ ಗಿಲ್, ಟೀಮ್ ಇಂಡಿಯಾ ಪ್ರಿನ್ಸ್’ಗೆ ನಂ.7 ಗಿಫ್ಟ್ ಕೊಟ್ಟ PSG

ವಿರಾಟ್ ಕೊಹ್ಲಿ ಒಡೆತನದ ಸ್ಟಾರ್ಟಪ್’ಗಳು

  • One8 Commune – Restaurant
  • Nueva – Dining bar and restaurant
  • One8 by Virat Kohli – Athleisure brand
  • Wrogn: Clothing brand
  • Stepathlon: Kids lifestyle brand

ವಿರಾಟ್ ಕೊಹ್ಲಿ ಹಣ ಹೂಡಿಕೆ ಮಾಡಿರುವ ಸ್ಟಾರ್ಟಪ್’ಗಳು
Race Coffee, Blue Tribe, MPL, CHISEL

Virat Kohli net worth: Virat Kohli is worth 1050 crores, here is the real secret of Kubera Kohli’s wealth!

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular