ಬೆಂಗಳೂರು: “ಕಿಂಗ್” ಬಿರುದಾಂಕಿತ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ (Virat Kohli’s test debut) ಕಾಲಿಟ್ಟು ಇವತ್ತಿಗೆ (ಜೂನ್ 20) ಭರ್ತಿ 12 ವರ್ಷ. ಟೀಮ್ ಇಂಡಿಯಾದ ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ತಮ್ಮ 21ನೇ ವಯಸ್ಸಿನಲ್ಲಿ ಭಾರತ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 2011ರ ಜೂನ್ 20ರಂದು ವೆಸ್ಟ್ ಇಂಡೀಸ್ ವಿರುದ್ಧ ಕಿಂಗ್‌ಸ್ಟನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ಮೂಲಕ ವಿರಾಟ್ ಟೆಸ್ಟ್ ಡೆಬ್ಯೂ ಮಾಡಿದ್ದರು.
ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವಾಡಿದ್ದ ವಿರಾಟ್ ಕೊಹ್ಲಿ, ತಮ್ಮ ಪದಾರ್ಪಣೆಯ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು ಪ್ರಥಮ ಇನ್ನಿಂಗ್ಸ್‌ನಲ್ಲಿ ಕೇವಲ 4 ರನ್ನಿಗೆ ಔಟಾಗಿದ್ದರು. ದ್ವಿತೀಯ ಇನ್ನಿಂಗ್ಸ್‌ನಲ್ಲೂ 5ನೇ ಕ್ರಮಾಂಕದಲ್ಲಿ ಆಡಿದ್ದ ವಿರಾಟ್ ಕೊಹ್ಲಿ 15 ರನ್ನಿಗೆ ವಿಕೆಟ್ ಒಪ್ಪಿಸಿದ್ದರು. ಭಾರತದ 2ನೇ ಇನ್ನಿಂಗ್ಸ್‌ನಲ್ಲಿ ಅಮೋಘ ಶತಕ ಬಾರಿಸಿದ್ದ ಟೀಮ್ ಇಂಡಿಯಾ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಭಾರತದ ಗೆಲುವಿಗೆ ಕಾರಣರಾಗಿದ್ದರು.
2011ರಲ್ಲಿ ಟೆಸ್ಟ್ ಪದಾರ್ಪಣೆಯ ನಂತರ ಕಳೆದ 12 ವರ್ಷಗಳಲ್ಲಿ ಭಾರತ ಪರ 109 ಟೆಸ್ಟ್ ಪಂದ್ಯಗಳನ್ನಾಡಿರುವ ಕಿಂಗ್ ಕೊಹ್ಲಿ, 48.72ರ ಸರಾಸರಿಯಲ್ಲಿ 8479 ರನ್ ಕಲೆ ಹಾಕಿದ್ದಾರೆ. ಈ 12 ವರ್ಷಗಳಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟ್‌ನಿಂದ 28 ಶತಕಗಳು ಹಾಗೂ 28 ಅರ್ಧಶತಕಗಳು ಸಿಡಿದಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ಗಳ ಗಡಿ ದಾಟಲು ವಿರಾಟ್ ಕೊಹ್ಲಿ ಅವರಿಗೆ ಬೇಕಿರುವುದಿನ್ನು 1521 ರನ್ ಮಾತ್ರ.
ವಿರಾಟ್ ಕೊಹ್ಲಿ ಟೆಸ್ಟ್ ಸಾಧನೆ
ಪಂದ್ಯ: 109
ಇನ್ನಿಂಗ್ಸ್: 185
ರನ್: 8,479
ಸರಾಸರಿ: 48.72
ಶತಕ: 28
ಅರ್ಧಶತಕ: 28
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (ICC World test championship final – WTC final 2023) ನಂತರ ಭಾರತ ತಂಡದ ಆಟಗಾರರು ಕ್ರಿಕೆಟ್‌ನಿಂದ ಒಂದು ತಿಂಗಳು ವಿರಾಮ ಪಡೆದಿದ್ದು, ಬಹುತೇಕರು ಕುಟುಂಬ ಸದಸ್ಯರ ಜೊತೆ ವಿದೇಶ ಪ್ರವಾಸದಲ್ಲಿದ್ದಾರೆ. WTC ಫೈನಲ್ ಪಂದ್ಯದ ನಂತರ ಕಿಂಗ್ ಕೊಹ್ಲಿ ಖ್ಯಾತಿಯ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹಾಗೂ ಪುತ್ರಿ ವಾಮಿಕಾ ಕೊಹ್ಲಿ ಜೊತೆ ಲಂಡನ್‌ನಲ್ಲೇ ಉಳಿದುಕೊಂಡಿದ್ದಾರೆ.
ಇದನ್ನೂ ಓದಿ : Tilak Naidu BCCI ಬಿಸಿಸಿಐ ಕಿರಿಯರ ಆಯ್ಕೆ ಸಮಿತಿ (BCCI Junior Cricket Committee) ಮುಖ್ಯಸ್ಥರಾಗಿ ಕನ್ನಡಿಗ ತಿಲಕ್ ನಾಯ್ಡು ನೇಮಕ
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 14 ರನ್ ಗಳಿಸಿದ್ದ ವಿರಾಟ್ ಕೊಹ್ಲಿ, 2ನೇ ಇನ್ನಿಂಗ್ಸ್‌ನಲ್ಲಿ 49 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಪರಿಣಾಮ ಭಾರತ ತಂಡ ಸತತ 2ನೇ ಬಾರಿ WTC ಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸಿತ್ತು.
Virat Kohli’s Test Debut: Virat Kohli’s Test Debut turned 12, King Kohli made his Test debut on June 20.