ಬುಧವಾರ, ಏಪ್ರಿಲ್ 30, 2025
HomeSportsCricketರಣಜಿ ಟ್ರೋಫಿಯಲ್ಲಿ ಶತಕ ಬಾರಿಸಿದ ಪಶ್ಚಿಮ ಬಂಗಾಳ ಮಿನಿಸ್ಟರ್ !

ರಣಜಿ ಟ್ರೋಫಿಯಲ್ಲಿ ಶತಕ ಬಾರಿಸಿದ ಪಶ್ಚಿಮ ಬಂಗಾಳ ಮಿನಿಸ್ಟರ್ !

- Advertisement -

ಬೆಂಗಳೂರು: ಕ್ರಿಕೆಟಿಗರು ಶತಕ ಬಾರಿಸುವುದನ್ನು ನೀವು ನೋಡಿದ್ದೀರಿ, ಕೇಳಿದ್ದೀರಿ. ಆದ್ರೆ ಸರ್ಕಾರದ ಒಬ್ಬ ಮಂತ್ರಿ (Manoj Tiwary) ಶತಕ ಬಾರಿಸಿದ್ದನ್ನು ಎಲ್ಲಾದರೂ ಕೇಳಿದ್ದೀರಾ..? ಅದೂ ದೇಶದ ಪ್ರತಿಷ್ಠಿತ ಕ್ರಿಕೆಟ್ ಟೂರ್ನಿಯಾಗಿರುವ ರಣಜಿ ಟ್ರೋಫಿಯಲ್ಲಿ..? ಬಂಗಾಳ ಮತ್ತು ಜಾರ್ಖಂಡ್ (Bengal Vs Jharkhand Ranji Trophy Q/F) ನಡುವಿನ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯ ಇಂಥದ್ದೊಂದು ಅಪರೂಪದ ಘಟನೆಗೆ ಸಾಕ್ಷಿಯಾಗಿದೆ.

ಬೆಂಗಳೂರಿನ ಹೊರವಲಯಲ್ಲಿರುವ ಜಸ್ಟ್ ಕ್ರಿಕೆಟ್ ಮೈದಾನದಲ್ಲಿ ನಡೆದ ಬಂಗಾಳ Vs ಜಾರ್ಖಂಡ್ ರಣಜಿ ಕ್ವಾರ್ಟರ್ ಫೈನಲ್ ಪಂದ್ಯ (Ranji Trophy) ಹಲವಾರು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಬಂಗಾಳ ತಂಡದ ಪ್ರಥಮ ಇನ್ನಿಂಗ್ಸ್’ನಲ್ಲಿ ಒಂದರಿಂದ 9ನೇ ಕ್ರಮಾಂಕದ ಆಟಗಾರರವರೆಗೆ ಎಲ್ಲರೂ 50+ ರನ್ ಗಳಿಸಿ ವಿಶ್ವದಾಖಲೆ ಬರೆದಿದ್ದರು.

2ನೇ ಇನ್ನಿಂಗ್ಸ್’ನಲ್ಲಿ ಬಂಗಾಳದ ತಂಡದ ಮಾಜಿ ನಾಯಕ ಮನೋಜ್ ತಿವಾರ್ (Manoj Tiwar) ಭರ್ಜರಿ ಶತಕ ಬಾರಿಸಿದ್ದಾರೆ. 37 ವರ್ಷದ ಅನುಭವೀ ಆಟಗಾರ ತಿವಾರಿ 185 ಎಸೆತಗಳಲ್ಲಿ 19 ಬೌಂಡರಿ ಮತ್ತು 2 ಸಿಕ್ಸರ್ಸ್ ನೆರವಿನಿಂದ 136 ರನ್ ಗಳಿಸಿದ್ದಾರೆ. ಅಂದ ಹಾಗೆ ಮನೋಜ್ ತಿವಾರಿ ಪಶ್ಚಿಮ ಬಂಗಾಳದ (West Bengal) ಮಮತಾ ಬ್ಯಾನರ್ಜಿಯವರ (Mamata Banarjee) ಟಿಎಂಸಿ (TMC) ಸರ್ಕಾರದಲ್ಲಿ ಕ್ರೀಡಾ ಸಚಿವರೂ ಹೌದು.

2021ರ ಫೆಬ್ರವರಿಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ ಸೇರಿದ್ದ ಮನೋಜ್ ತಿವಾರಿ, ಮಾರ್ಚ್-ಏಪ್ರಿಲ್ ತಿಂಗಳಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಶಿಬ್”ಪುರ್ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅಷ್ಟೇ ಅಲ್ಲ, ಬಿಜೆಪಿ ಅಭ್ಯರ್ಥಿಯನ್ನು 32 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲಿಸಿ ಮೊದಲ ಪ್ರಯತ್ನದಲ್ಲೇ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಕ್ರೀಡಾ ಮಂತ್ರಿಯೂ ಆದ್ರು.

ರಾಜಕೀಯ ಇನ್ನಿಂಗ್ಸ್ ಶುರು ಮಾಡಿದ ಬಳಿಕವೂ ಕ್ರಿಕೆಟ್”ನಲ್ಲಿ ಮುಂದುವರಿದಿರುವ ಮನೋಜ್ ತಿವಾರಿ, ಬಂಗಾಳದ ತಂಡದ ಮಧ್ಯಮ ಕ್ರಮಾಂಕದ ಆಧಾರಸ್ತಂಭ. ಬಂಗಾಳದ ಪರ 129 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ತಿವಾರಿ 50ರ ಸರಾಸರಿಯಲ್ಲಿ 28 ಶತಕಗಳ ಸಹಿತ 9289 ರನ್ ಕಲೆ ಹಾಕಿದ್ದಾರೆ. ಭಾರತ ತಂಡಕ್ಕೂ ಆಯ್ಕೆಯಾಗಿದ್ದ ತಿವಾರಿ ಟೀಮ್ ಇಂಡಿಯಾ ಪರ 12 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಿದ್ದಾರೆ. ತಮ್ಮ 18 ವರ್ಷಗಳ ವೃತ್ತಿಜೀವನದಲ್ಲಿ ಪ್ರಥಮದರ್ಜೆ, ಲಿಸ್ಟ್ ‘ಎ’ ಹಾಗೂ ಟಿ20 ಸೇರಿ ಒಟ್ಟು 475 ಪಂದ್ಯಗಳನ್ನು ಆಡಿರುವ ಮನೋಜ್ ತಿವಾರಿ 18 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

ಇದನ್ನೂ ಓದಿ : KL Rahul‌ : ಟೀಮ್ ಇಂಡಿಯಾದಿಂದ ಹೊರ ಬಿದ್ದ ಕೆ.ಎಲ್.ರಾಹುಲ್ ಬಾವುಕ ಸಂದೇಶ

ಇದನ್ನೂ ಓದಿ : Star Sports ನಲ್ಲಿ ಪ್ರಸಾರವಾಗಲ್ಲ ಐಪಿಎಲ್ ! ಹೊಸ ಬ್ರಾಡ್ ಕಾಸ್ಟಿಂಗ್ ರೈಟ್ಸ್ ರೇಟ್ ಕೇಳಿದ್ರೆ ಬೆಚ್ಚಿ ಬೀಳ್ತೀರಿ

West Bengal Minster Manoj Tiwary score century in Ranji Trophy

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular