Illegal Buildings : ಬಿಬಿಎಂಪಿ ವ್ಯಾಪ್ತಿಯಲ್ಲಿ 2 ಲಕ್ಷ ಅಕ್ರಮ ಕಟ್ಟಡ ಪತ್ತೆ

ಬೆಂಗಳೂರು : ಕರ್ನಾಟಕ ರಾಜ್ಯ ಹೈಕೋರ್ಟ್ ಒತ್ತಡದ ಬಳಿಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿ ಅಕ್ರಮ ಕಟ್ಟಡಗಳ ಸರ್ವೇ ಕಾರ್ಯ ಚುರುಕು ಗೊಳಿಸಿದೆ. ಬಿಬಿಎಂಪಿ ದಾಖಲೆಗಳ ಪ್ರಕಾರ ಅಕ್ರಮ ಕಟ್ಟಡಗಳ ಸರ್ವೇಕಾರ್ಯ ಅಂದಾಜು ಎಂಟು ವರ್ಷದಿಂದ ನಡೆಯುತ್ತಿದೆ. ಆದರೂ ಸರ್ವೇ ಕಾರ್ಯದ ವರದಿ ಸಲ್ಲಿಸಲು ಬಿಬಿಎಂಪಿಯಿಂದ ಸಾಧ್ಯವಾಗಿರಲಿಲ್ಲ. ಆದರೆ ಈಗ ಒಂದು ಹಂತದಲ್ಲಿ ಅಕ್ರಮ ಕಟ್ಟಡಗಳನ್ನು ಬಿಬಿಎಂಪಿ ಗುರುತಿಸಿದ್ದು, 2 ಲಕ್ಷ ಕಟ್ಟಡಗಳಿವೆ (Illegal Buildings) ಎಂಬುದು ಗೊತ್ತಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂದಾಜು ಎರಡು ಲಕ್ಷ ಅಕ್ರ‌ಮ ಹಾಗೂ ಮೂಲ ನಕ್ಷೆ ಉಲ್ಲಂಘಿಸಿದ ಕಟ್ಟಡಗಳಿವೆ ಎಂದು ಬಿಬಿಎಂಪಿ ವರದಿ ಉಲ್ಲೇಖಿಸಿದೆ. ಈ ಕುರಿತು ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ಪಿ‌.ಎನ್ ಮಾಹಿತಿ ನೀಡಿದ್ದು, ನಗರದಲ್ಲಿ ಮೂಲ ನಕ್ಷೆ ಉಲ್ಲಂಘಿಸಿ ನಿರ್ಮಿಸಿರುವ 16,086 ಕಟ್ಟಡಗಳನ್ನು ಪಾಲಿಕೆ ಗುರುತಿಸಿದೆ. ಅದೇ ರೀತಿ ಬಿ ಖಾತಾ ಅಡಿಯಲ್ಲಿ ಬರುವ 1,81,236 ಕಟ್ಟಡಗಳನ್ನು ‌ಗುರುತಿಸಲಾಗಿದೆ. ಬಿ ಖಾತಾ ಅಡಿಯಲ್ಲಿ ಬರುವ ಕಟ್ಟಡಗಳು ಅನಧಿಕೃತ ಅಥವಾ ಅಕ್ರಮವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸದ್ಯ ಹೈಕೋರ್ಟ್ ಒತ್ತಡದ ಹಿನ್ನೆಲೆಯಲ್ಲಿ ಸರ್ವೇ ಕಾರ್ಯ ಚುರುಕುಗೊಂಡಿರೋದರಿಂದ ಅನಧಿಕೃತ ಕಟ್ಟಡಗಳ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ. ಅಲ್ಲದೇ ಸರ್ವೇಯನ್ನು ನಾವು ಪೂರ್ಣಗೊಳಿಸುತ್ತೇವೆ. ಆಬಳಿಕ ಮತ್ತಷ್ಟು ವಿವರಗಳು ಲಭ್ಯವಾಗಲಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತರು ಮಾಹಿತಿ ನೀಡಿದ್ದಾರೆ.

ಬಿ ಖಾತಾ ಆಸ್ತಿ ಮತ್ತು ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಾಣದ ವಿಚಾರ ಹೈಕೋರ್ಟ್ ಮತ್ತು ಸುಪ್ರೀಂ‌ಕೋರ್ಟ್ ನಲ್ಲಿದೆ. ಪಾಲಿಕೆ ಸದ್ಯ ತ್ವರಿತಗತಿಯಲ್ಲಿ ಈ ರೀತಿಯ ಕಟ್ಟಡಗಳ ಸರ್ವೇ ನಡೆಸುತ್ತಿದೆ . ಮುಂದೇ ನ್ಯಾಯಾಲಯದ ತೀರ್ಪನ್ನು ಅನುಸರಿಸಿ ಇಂಥ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಮಾಹಿತಿ ‌ನೀಡಿದ್ದಾರೆ. ಇನ್ನೂ ಈಗಾಗಲೇ ಗುರುತಿಸಲಾಗಿರುವ ಮನೆಗಳ ಮಾಲೀಕರಿಗೆ ಬಿಬಿಎಂಪಿ ಕಳೆದ ಮಾರ್ಚ್ ನಲ್ಲೇ ನೊಟೀಸ್ ರವಾನಿಸಿದೆ.

ಅಲ್ಲದೇ ನಿಗದಿನ ಸಮಯದಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಇಲ್ಲದಿದ್ದರೇ ತಮ್ಮ ಆಸ್ತಿಯನ್ನು ಅನಧಿಕೃತ ಎಂದು ಘೋಷಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ನಗರದ ಅಧಿಕೃತ ಮನೆಗಳ ಮಾಲೀಕರಿಗೆ ಬಿಬಿಎಂಪಿ ನಡುಕ ಮೂಡಿಸಿದೆ.

ಇದನ್ನೂ ಓದಿ : ಮದ್ಯಪ್ರಿಯರಿಗೆ ಗುಡ್‌ ನ್ಯೂಸ್‌ : ಶೇ. 35-60ರಷ್ಟು ಇಳಿಕೆಯಾಗಲಿದೆ ಮದ್ಯದ ದರ

ಇದನ್ನೂ ಓದಿ : Masturbation Breaks: ಸಿಬ್ಬಂದಿಗೆ ಕಚೇರಿಯಲ್ಲಿ ಹಸ್ತ ಮೈಥುನಕ್ಕೆ ವಿರಾಮ ನೀಡ್ತಿದ್ದಾರೆ ಈ ಬಾಸ್​

2 lakh illegal buildings under BBMP

Comments are closed.