ಸೋಮವಾರ, ಏಪ್ರಿಲ್ 28, 2025
HomeSportsCricketWill Jacks : ಒಂದೇ ಓವರ್‌ನಲ್ಲಿ ಸತತ ಐದು ಸಿಕ್ಸರ್ ಬಾರಿಸಿದ ಆರ್‌ಸಿಬಿ ಆಟಗಾರ

Will Jacks : ಒಂದೇ ಓವರ್‌ನಲ್ಲಿ ಸತತ ಐದು ಸಿಕ್ಸರ್ ಬಾರಿಸಿದ ಆರ್‌ಸಿಬಿ ಆಟಗಾರ

- Advertisement -

ಲಂಡನ್ : (Will Jacks) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore – RCB) ತಂಡ ಸತತ 16 ವರ್ಷಗಳಿಂದ ಐಪಿಎಲ್ ಟ್ರೋಫಿ ಗೆಲ್ಲಲು ವಿಫಲವಾಗುತ್ತಾ ಬಂದಿದೆ. “ಈ ಸಲ ಕಪ್ ನಮ್ದೇ” ಅನ್ನೋ ಘೋಷವಾಕ್ಯದ ಮಧ್ಯೆಯೂ ಐಪಿಎಲ್ ಕಪ್ ಆರ್‌ಸಿಬಿಗೆ ಒಲಿಯುತ್ತಲೇ ಇಲ್ಲ.

ಕಪ್ ಗೆಲ್ಲದಿದ್ದರೇನಂತೆ, ಐಪಿಎಲ್‌ನ ಬಹುತೇಕ ದಾಖಲೆಗಳು ಆರ್‌ಸಿಬಿ ಆಟಗಾರರ ಹೆಸರಲ್ಲೇ ಇವೆ. ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರನೊಬ್ಬ ಒಂದೇ ಓವರ್‌ನಲ್ಲಿ ಐದು ಸಿಕ್ಸರ್‌ಗಳನ್ನು ಬಾರಿಸಿ ಗಮನ ಸೆಳೆದಿದ್ದಾನೆ. ಆತನ ಹೆಸರು ವಿಲ್ ಜೇಕ್ಸ್ (Will Jacks).

ಇಂಗ್ಲೆಂಡ್‌ನ ವಿಲ್ ಜೇಕ್ಸ್ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್ ಟೂರ್ನಿಯಲ್ಲಿ ಒಂದೇ ಓವರ್‌ನಲ್ಲಿ ಐದು ಸಿಕ್ಸರ್ ಬಾರಿಸಿದ್ದಾರೆ. ಸರ್ರೆ ತಂಡದ ಪರ ಆಡುವ ಬಲಗೈ ಬ್ಯಾಟ್ಸ್‌ಮನ್ ವಿಲ್ ಜೇಕ್ಸ್, ಮಿಡಲ್‌ಸೆಕ್ಸ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.

ಮಿಡಲ್‌ಸೆಕ್ಸ್‌ನ ಲೆಗ್‌ಸ್ಪಿನ್ನರ್ ಲ್ಯೂಕ್ ಹಾಲ್‌ಮನ್ ಎಸೆದ 11ನೇ ಓವರ್‌ನ ಮೊದಲ ಐದೂ ಎಸೆತಗಳನ್ನು ವಿಲ್ ಜೇಕ್ಸ್ ಸಿಕ್ಸರ್‌ಗಟ್ಟಿದರು. ಆದರೆ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಲು ವಿಫಲರಾಗಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಬಾರಿಸಿದ ಅಪರೂಪದ ದಾಖಲೆಯಿಂದ ವಂಚಿತರಾದರು. ವಿಲ್ ಜೇಕ್ಸ್ ಅವರ ಐದು ಸಿಕ್ಸರ್‌ಗಳ ಪರಾಕ್ರಮದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ : Mayank Agarwal : ಟೀಮ್ ಇಂಡಿಯಾ ಕಂಬ್ಯಾಕ್‌ಗೆ ಕನ್ನಡಿಗನ ಕಸರತ್ತು, ಕಾಂಕ್ರೀಟ್ ಪಿಚ್‌ನಲ್ಲಿ ನೀರು, ಪ್ಲಾಸ್ಟಿಕ್ ಚೆಂಡಿನಲ್ಲಿ ಬ್ಯಾಟಿಂಗ್ ಅಭ್ಯಾಸ

ಇದನ್ನೂ ಓದಿ : ಮೊಣಕಾಲಿನ ಗಾಯದ ನಡುವಲ್ಲೂ CSK ಪರ IPL 2024 ಆಡ್ತಾರೆ ಎಂಎಸ್‌ ಧೋನಿ

24 ವರ್ಷದ ವಿಲ್ ಜೇಕ್ಸ್ 45 ಎಸೆತಗಳಲ್ಲಿ ಬಾರಿಸಿದ ಸಿಡಿಲಬ್ಬರದ 96 ರನ್‌ಗಳ ನೆರವಿನಿಂದ ಸರ್ರೆ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 252 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಮಿಡಲ್‌ಸೆಕ್ಸ್ 19.2 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಒಪ್ಪಿಸಿ 254 ರನ್ ಗಳಿಸಿರುವ ಮೂಲಕ ಭರ್ಜರಿ ಗೆಲುವು ದಾಖಲಿಸಿತು. ಐಪಿಎಲ್-2023 ಟೂರ್ನಿಗೂ ಮುನ್ನ ವಿಲ್ ಜೇಕ್ಸ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 3.2 ಕೋಟಿ ರೂ. ಮೊತ್ತಕ್ಕೆ ಖರೀದಿಸಿತ್ತು. ಆದರೆ ಟೂರ್ನಿ ಆರಂಭಕ್ಕೂ ಮೊದಲೇ ಗಾಯಗೊಂಡ ಕಾರಣ ಐಪಿಎಲ್‌ನಲ್ಲಿ ಆಡಲು ಸಾಧ್ಯವಾಗಿರಲಿಲ್ಲ.

Will Jacks: RCB player who hit five consecutive sixes in a single over

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular