Malpe Beach – Udupi : ಮಲ್ಪೆ ಬೀಚ್‌ನಲ್ಲಿ ಪತ್ತೆಯಾಯ್ತು ನೂಡಲ್ಸ್‌ ಮಾದರಿಯ ವಸ್ತುಗಳು : ಅಧ್ಯಯನಕ್ಕಾಗಿ ಮಾದರಿ ಕೊಚ್ಚಿ, ಗೋವಾಕ್ಕೆ ರವಾನೆ

ಉಡುಪಿ : (Malpe Beach – Udupi) ಮಲ್ಪೆ ಕಡಲತೀರದಲ್ಲಿ ನೂಡಲ್ಸ್‌ ಮಾದರಿಯ ವಸ್ತುಗಳು ಪತ್ತೆಯಾಗಿವೆ. ಬಿಪರ್‌ ಜೋಯ್‌ ಚಂಡ ಮಾರುತದ ಬೆನ್ನಲ್ಲೇ ಈ ವಿಚಿತ್ರ ವಸ್ತುಗಳು ಪತ್ತೆಯಾಗಿರುವುದು ಮೀನುಗಾರರ ಆತಂಕಕ್ಕೆ ಕಾರಣವಾಗಿತ್ತು. ಈ ಕುರಿತು ವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದರು. ಅಲ್ಲದೇ ಇದೀಗ ಮಾದರಿಯನ್ನು ಹೆಚ್ಚಿನ ಅಧ್ಯಯನಕ್ಕಾಗಿ ಮಾದರಿಯನ್ನು ಗೋವಾಕ್ಕೆ ರವಾನಿಸಿದ್ದಾರೆ.

ಮಲ್ಪೆ ಮಾತ್ರವಲ್ಲದೇ ಉಡುಪಿ ಜಿಲ್ಲೆಯ ಸುಮಾರು 15 ಕಿ.ಮೀ. ಕಡಲ ತೀರದಲ್ಲಿ ವ್ಯಾಪಿಸಿಕೊಂಡಿರುವ ನೂಡಲ್ಸ್‌ ಮಾದರಿಯ ಈ ವಸ್ತುಗಳಿಂದ ಯಾವುದೇ ಹಾನಿಯಿಲ್ಲ ಎಂದು ಮೀನುಗಾರಿಕಾ ಜಂಟಿ ನಿರ್ದೇಶಕ ವಿವೇಕ್‌ ಅವರು ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಈ ವಸ್ತುಗಳು ಪೋಷಕಾಂಶಗಳಿಂದ ಸಮೃದ್ದವಾಗಿದ್ದು, ಇವುಗಳನ್ನು ಗುಂಡಿಯನ್ನು ಹೂಳುವ ಬದಲು ಗೊಬ್ಬರವಾಗಿ ಪರಿವರ್ತಿಸಬಹುದು. ಅಲ್ಲದೇ ಸಮುದ್ರಕ್ಕೆ ತಳ್ಳುವುದರಿಂದ ಇತರ ಜೀವಿಗಳಿಗೆ ಆಹಾರವಾಗಲಿವೆ ಎಂದಿದ್ದಾರೆ.

ಇದನ್ನೂ ಓದಿ : Kaukradi PDO Mahesh G.N. : ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಕೌಕ್ರಾಡಿ ಪಿಡಿಒ

ಇದನ್ನೂ ಓದಿ : Heavy rain alert in Karnataka : ಉಡುಪಿ, ದ‌.ಕ, ಉತ್ತರ ಕನ್ನಡ ಜಿಲ್ಲೆಯಲ್ಲಿಂದು ಭಾರೀ ಮಳೆ

ಕಡಲತೀರದಲ್ಲಿ ಪತ್ತೆಯಾಗಿರುವ ಈ ವಸ್ತುಗಳನ್ನು ಹೆಚ್ಚಿನ ಸಂಶೋಧನೆಗಾಗಿ ಗೋವಾದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಓಷಿಯಾನೋಗ್ರಫಿ, ಕೊಚ್ಚಿಯಲ್ಲಿರುವ ಸೆಂಟ್ರಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫಿಶರೀಸ್‌ ಟೆಕ್ನಾಲಜಿ ಮತ್ತು ಕೊಚ್ಚಿಯ ಸೆಂಟ್ರಲ್‌ ಮೆರೈನ್‌ ಫಿಶರೀಸ್‌ ರಿಸರ್ಚ್‌ ಇನ್ಸ್ಟಿಟ್ಯೂಟ್‌ಗೆ ಕಳುಹಿಸಿಕೊಡಲಾಗಿದೆ. ಈಗಾಗಲೇ ಮಂಗಳೂರಿನ ಮೀನುಗಾರಿಕಾ ಕಾಲೇಜು ಮತ್ತು ಮಂಗಳೂರಿನ ಕೇಂದ್ರೀಯ ಸಾಗರ ಮೀನುಗಾರಿಕಾ ಶಂಶೋಧನಾ ಸಂಸ್ಥೆಯ ವಿಜ್ಞಾನಿಗಳ ತಂಡ ಈಗಾಗಲೇ ಪರಿಶೀಲನೆಯನ್ನು ನಡೆಸಿದೆ. ಅಲ್ಲದೇ ಈ ವಸ್ತುಗಳು ಸಮುದ್ರ ಜೀವಿಗಳ ಚಿಪ್ಪುಗಳಾದ್ದಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದರು.

Malpe Beach – Udupi : Noodles type material found at Malpe Beach : Sample sent to Kochi, Goa for study

Comments are closed.