Shreyanka Patil : ಬೆಂಗಳೂರು: ಜುಲೈ 19ರಿಂದ ಶ್ರೀಲಂಕಾದಲ್ಲಿ ನಡೆಯಲಿರುವ ಮಹಿಳಾ ಟಿ20 ಏಷ್ಯಾ ಕಪ್ ಟೂರ್ನಿಗೆ (Women’s Asia Cup T20) ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಕರ್ನಾಟಕದ ಆಲ್ರೌಂಡರ್ ಶ್ರೇಯಾಂಕ ಪಾಟೀಲ್ ಸ್ಥಾನ ಪಡೆದಿದ್ದಾರೆ. ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಹರ್ಮನ್ ಪ್ರೀತ್ ಕೌರ್ ಮುನ್ನಡೆಸಲಿದ್ದು, ಆರ್’ಸಿಬಿ ಮಹಿಳಾ ತಂಡದ ಸಾರಥಿ ಸ್ಮೃತಿ ಮಂಧನ ಉಪನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಗ್ರೂಪ್ ಎ ನಲ್ಲಿ ಸ್ಥಾನ ಪಡೆದಿರುವ ಭಾರತ ತಂಡ ಜುಲೈ 19ರಂದು ದಾಂಬುಲದ ರಣಗಿರಿ ದಾಂಬುಲ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ : Mohammad Siraj: ವಿಶ್ವಕಪ್ ಪದಕವನ್ನು ತಾಯಿಯ ಕೊರಳಿಗೆ ತೊಡಿಸಿದ ಮೊಹಮ್ಮದ್ ಸಿರಾಜ್
ಏಷ್ಯಾ ಕಪ್ ಟಿ20 ಟೂರ್ನಿಗೆ ಭಾರತ ಮಹಿಳಾ ತಂಡ ಹೀಗಿದೆ: ಹರ್ಮನ್ ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನ (ಉಪನಾಯಕಿ), ಶೆಫಾಲಿ ವರ್ಮಾ, ಜೆಮಿಮಾ ರಾಡ್ರಿಗ್ಸ್, ರಿಚಾ ಘೋಷ್ (ವಿಕೆಟ್ ಕೀಪರ್), ದಯಾಳನ್ ಹೇಮಲತಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಕಾರ್, ರಾಧಾ ಯಾದವ್, ಆಶಾ ಶೋಭನಾ, ರೇಣುಕಾ ಸಿಂಗ್ ಠಾಕೂರ್, ಆರುಂಧತಿ ರೆಡ್ಡಿ, ಶ್ರೇಯಾಂಕದ ಪಾಟೀಲ್, ಉಮಾ ಛೆಟ್ರಿ (ವಿಕೆಟ್ ಕೀಪರ್), ಸಜಾನಾ ಸಜೀವನ್.
ಮೀಸಲು ಆಟಗಾರ್ತಿಯರು: ಸೈಕಾ ಇಶಾಕ್, ಶ್ರೇತಾ ಸೆಹ್ರಾವತ್, ತನುಜಾ ಕನ್ವರ್, ಮೇಘನಾ ಸಿಂಗ್.
ಇದನ್ನೂ ಓದಿ : Virat Kohli: ನಿವೃತ್ತಿಯ ನಂತರ ಭಾರತ ತೊರೆಯಲಿದ್ದಾರೆ ಕಿಂಗ್ ವಿರಾಟ್ ಕೊಹ್ಲಿ
ಏಷ್ಯಾ ಕಪ್ ಮಹಿಳಾ ಟಿ20 ಟೂರ್ನಿ: ಭಾರತ ತಂಡದ ಲೀಗ್ ಪಂದ್ಯಗಳ ವೇಳಾಪಟ್ಟಿ: ಜುಲೈ 19: ಭಾರತ Vs ಪಾಕಿಸ್ತಾನ (ರಣಗಿರಿ ದಾಂಬುಲ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದಾಂಬುಲ)

ಜುಲೈ 21: ಭಾರತ Vs ಯುಎಇ (ರಣಗಿರಿ ದಾಂಬುಲ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದಾಂಬುಲ)
ಜುಲೈ 23: ಭಾರತ Vs ನೇಪಾಳ (ರಣಗಿರಿ ದಾಂಬುಲ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದಾಂಬುಲ)
ಇದನ್ನೂ ಓದಿ : Abhishek Sharma: ಸಿಡಿಲಬ್ಬರದ ಶತಕ ಬಾರಿಸಿ ರೋಹಿತ್ ಶರ್ಮಾ ಜಾಗ ತುಂಬಲು ಬಂದ ಅಭಿಷೇಕ್ ಶರ್ಮಾ
Women T20 Asia Cup Karnataka Player Shreyanka Patil in Indian Women’s cricket squad