women’s Asia cup 2024 : ದಾಂಬುಲ: ಏಷ್ಯಾ ಕಪ್ ಮಹಿಳಾ ಟಿ20 (Women’s Asia Cup T20) ಟೂರ್ನಿಯ ಫೈನಲ್ ಪಂದ್ಯ ಇಂದು (ಭಾನುವಾರ) ನಡೆಯಲಿದ್ದು, ಹರ್ಮನ್ ಪ್ರೀತ್ ಕೌರ್ ಮುಂದಾಳತ್ವದ ಭಾರತೀಯ ವನಿತೆಯರು ದಾಖಲೆಯ 8ನೇ ಬಾರಿ ಏಷ್ಯಾ ಕಪ್ ಎತ್ತಿ ಹಿಡಿಯಲು ಸಜ್ಜಾಗಿದ್ದಾರೆ. ಫೈನಲ್ ಪಂದ್ಯದಲ್ಲಿ ಭಾರತಕ್ಕೆ ಆತಿಥೇಯ ಶ್ರೀಲಂಕಾ ವನಿತೆಯರ ಸವಾಲು ಎದುರಾಗಿದೆ.

ದಾಂಬುಲದ ರಣಗಿರಿ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ, ಬಾಂಗ್ಲಾದೇಶ ವಿರುದ್ಧ 10 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿ ದಾಖಲೆಯ 9ನೇ ಬಾರಿ ಮಹಿಳಾ ಏಷ್ಯಾ ಕಪ್’ನಲ್ಲಿ ಫೈನಲ್ ತಲುಪಿತ್ತು. ಈ ಮೂಲಕ ಆಡಿದ ಎಲ್ಲಾ ಏಷ್ಯಾ ಕಪ್ ಟೂರ್ನಿಗಳಲ್ಲಿ ಭಾರತ ತಂಡ ಫೈನಲ್ ತಲುಪಿದ ಸಾಧನೆ ಮಾಡಿತ್ತು.
ಟೂರ್ನಿಯ 2ನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 3 ವಿಕೆಟ್’ಗಳಿಂದ ಮಣಿಸಿದ ಆತಿಥೇಯ ಶ್ರೀಲಂಕಾ 5ನೇ ಬಾರಿ ಏಷ್ಯಾ ಕಪ್’ನಲ್ಲಿ ಫೈನಲ್ ಪ್ರವೇಶಿಸಿದೆ. ಆ ಹಿಂದೆ ನಾಲ್ಕು ಬಾರಿ ಏಷ್ಯಾ ಕಪ್ ಫೈನಲ್’ಗೆ ಲಗ್ಗೆ ಇಟ್ಟಿದ್ದ ಶ್ರೀಲಂಕಾ ನಾಲ್ಕು ಬಾರಿಯೂ ಭಾರತದ ವಿರುದ್ಧ ಸೋಲು ಕಂಡಿದೆ.
ಇದನ್ನೂ ಓದಿ : KL Rahul: ಪೈಲಟ್ ಆದ ಕ್ರಿಕೆಟರ್, ಸ್ಟಂಟ್ ಜೆಟ್ ಓಡಿಸಿದ ಕೆಎಲ್ ರಾಹುಲ್
ಮಹಿಳಾ ಏಷ್ಯಾಕಪ್: ಭಾರತ Vs ಶ್ರೀಲಂಕಾ ಫೈನಲ್
ಪಂದ್ಯ ಆರಂಭ: ಸಂಜೆ 7ಕ್ಕೆ
ಸ್ಥಳ: ರಣಗಿರಿ ದಾಂಬುಲ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ದಾಂಬುಲ; ಕ್ಯಾಂಡಿ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ ಹಾಟ್ ಸ್ಟಾರ್
ಇದನ್ನೂ ಓದಿ : Rahul Dravid Best Coach: ಭಾರತ ಕಂಡ ಕೋಚ್‌ಗಳಲ್ಲಿ ಮಹಾಗುರು ದ್ರಾವಿಡ್ ಅವರೇ ಬೆಸ್ಟ್
ಮಹಿಳಾ ಏಷ್ಯಾಕಪ್ ಫೈನಲ್ಸ್ (Women’s Asia Cup Finals)
2004 (ಏಕದಿನ): ಭಾರತ Vs ಶ್ರೀಲಂಕಾ- ಭಾರತ ಚಾಂಪಿಯನ್
2005-06 (ಏಕದಿನ): ಭಾರತ Vs ಶ್ರೀಲಂಕಾ- ಭಾರತ ಚಾಂಪಿಯನ್
2006 (ಏಕದಿನ): ಭಾರತ Vs ಶ್ರೀಲಂಕಾ- ಭಾರತ ಚಾಂಪಿಯನ್
2008 (ಏಕದಿನ): ಭಾರತ Vs ಶ್ರೀಲಂಕಾ- ಭಾರತ ಚಾಂಪಿಯನ್
2012 (ಟಿ20): ಭಾರತ Vs ಪಾಕಿಸ್ತಾನ- ಭಾರತ ಚಾಂಪಿಯನ್
ಇದನ್ನೂ ಓದಿ : Nostush Kenjige: ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದಾನೆ ಚಿಕ್ಕಮಗಳೂರಿನ ಪ್ರತಿಭೆ
2016 (ಟಿ20): ಭಾರತ Vs ಪಾಕಿಸ್ತಾನ- ಭಾರತ ಚಾಂಪಿಯನ್
2018 (ಟಿ20): ಭಾರತ Vs ಬಾಂಗ್ಲಾದೇಶ- ಭಾರತ ಚಾಂಪಿಯನ್
2022: (ಟಿ20) ಭಾರತ Vs ಪಾಕಿಸ್ತಾನ- ಭಾರತ ಚಾಂಪಿಯನ್
2024 (ಟಿ20): ಭಾರತ Vs ಶ್ರೀಲಂಕಾ- -ಭಾನುವಾರ ಫೈನಲ್
Women’s Asia Cup 2024 Final India vs Sri Lanka but Indian cricket team is favorite team