ಸೋಮವಾರ, ಏಪ್ರಿಲ್ 28, 2025
HomeSportsCricketWomen’s Asia Cup 2024 : ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಮಹಿಳೆಯರ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

Women’s Asia Cup 2024 : ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಮಹಿಳೆಯರ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

- Advertisement -

Women’s Asia Cup 2024 IND VS PAK Indiaದಾಂಬುಲ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 7 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿದ ಭಾರತ ತಂಡ, ಮಹಿಳಾ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಗೆಲುವಿನೊಂದಿಗೆ ತನ್ನ ಅಭಿಯಾನ ಆರಂಭಿಸಿದೆ. ದಾಂಬುಲ ರಣಗಿರಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಸಾರಥ್ಯದ ಭಾರತ ತಂಡ ಪಾಕಿಸ್ತಾನ ವಿರುದ್ಧ ಏಕಪಕ್ಷೀಯ ಗೆಲುವು ದಾಖಲಿಸಿತು.

Women's Asia Cup 2024 IND VS PAK India has a huge victory against Pakistan women in the Asia Cup
Image Credit : BCCI

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಮಹಿಳಾ ತಂಡ ಭಾರತೀಯ ವನಿತೆಯರ ಮಾರಕ ದಾಳಿಗೆ ತತ್ತರಿಸಿ 19.2 ಓವರ್’ಗಳಲ್ಲಿ ಕೇವಲ 108 ರನ್’ಗಳಿಗೆ ಆಲೌಟಾಯಿತು. ಭಾರತ ಪರ ಮಧ್ಯಮ ವೇಗಿಗಳಾದ ರೇಣುಕಾ ಸಿಂಗ್ ಠಾಕೂರ್ 14ಕ್ಕೆ 2, ಪೂಜಾ ವಸ್ತ್ರಕಾರ್ 31ಕ್ಕೆ 2, ಆಫ್ ಸ್ಪಿನ್ನರ್’ಗಳಾದ ದೀಪ್ತಿ ಶರ್ಮಾ 20ಕ್ಕೆ 3 ಹಾಗೂ ಕನ್ನಡತಿ ಶ್ರೇಯಾಂಕದ ಪಾಟೀಲ್ 14 ರನ್ನಿಗೆ 2 ವಿಕೆಟ್ ಕಬಳಿಸಿದರು.

ಇದನ್ನೂ ಓದಿ : KL Rahul : ಟೀಮ್ ಇಂಡಿಯಾದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್‌ಗೆ ಮತ್ತೆ ಅನ್ಯಾಯ 

ನಂತರ ಸುಲಭ ಗುರಿ ಬೆನ್ನಟ್ಟಿದ ಭಾರತಕ್ಕೆ ಓಪನರ್’ಗಳಾದ ಸ್ಮೃತಿ ಮಂಧನ ಮತ್ತು ಶೆಫಾಲಿ ವರ್ಮಾ ಮೊದಲ ವಿಕೆಟ್’ಗೆ 9.3 ಓವರ್’ಗಳಲ್ಲಿ 85 ರನ್ ಸೇರಿಸಿ ಭರ್ಜರಿ ಆರಂಭ ಒದಗಿಸಿದರು. ಸ್ಮೃತಿ ಮಂಧನ 31 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ 45 ರನ್ ಗಳಿಸಿದರೆ, ಶೆಫಾಲಿ ವರ್ಮಾ 29 ಎಸೆತಗಳಲ್ಲಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 40 ರನ್ ಗಳಿಸಿ ಔಟಾದರು. ಅಂತಿಮವಾಗಿ ಭಾರತ 14.1 ಓವರ್’ಗಳಲ್ಲಿ 3 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿ ಸುಲಭ ಜಯ ದಾಖಲಿಸಿತು. ಭಾನುವಾರ ನಡೆಯುವ ತನ್ನ 2ನೇ ಲೀಗ್ ಪಂದ್ಯದಲ್ಲಿ ಭಾರತ ತಂಡ ಯುಎಇ ಸವಾಲನ್ನು ಎದುರಿಸಲಿದೆ.

Women's Asia Cup 2024 IND VS PAK India has a huge victory against Pakistan women in the Asia Cup
Image Credit : BCCI

ಇದನ್ನೂ ಓದಿ : Suryakumar Yadav: ಸೂರ್ಯನಿಗೆ ಭಾರತ ತಂಡದ ನಾಯಕ ಪಟ್ಟ, ನಿಜವಾಯ್ತು ಕಾಪು ಮಾರಿಕಾಂಬ ಅರ್ಚಕರ ವಾಣಿ

ಸ್ಮೃತಿ ಮಂದಾನ, ಶೆಫಾಲಿ ವರ್ಮಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್‌, ರೇಣುಕಾ ಸಿಂಗ್‌ ಸೇರಿದಂತೆ ಭಾರತ ಮಹಿಳೆಯರ ಕ್ರಿಕೆಟ್‌ ತಂಡದ ಹಲವು ಆಟಗಾರ್ತಿಯರು ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿ ಭರ್ಜರಿ ಆಟದ ಪ್ರದರ್ಶನ ನೀಡಿರುವ ಭಾರತ ಮಹಿಳಾ ತಂಡ ಇದೀಗ ಏಷ್ಯಾ ಕಪ್‌ನಲ್ಲಿಯೂ ಗೆಲುವಿನ ಅಭಿಯಾನ ಮುಂದುವರಿಸಿದೆ. ಏಷ್ಯಾಕಪ್‌ನ ಮೊದಲ ಪಂದ್ಯದಲ್ಲಿಯೇ ಸಾಂಪ್ರದಾಯಿಕ ಎದುರಾಳಿಯನ್ನು ಮಣಿಸಿರುವ ಭಾರತ ಏಷ್ಯಾ ಕಪ್‌ ಗೆಲ್ಲುವ ನಿರೀಕ್ಷೆ ಹುಟ್ಟಿಸಿದೆ.

Women's Asia Cup 2024 IND VS PAK India has a huge victory against Pakistan women in the Asia Cup
Image Credit : BCCI

ಇದನ್ನೂ ಓದಿ : Indian Cricket Team : ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್ ನಾಯಕ, ಏಕದಿನ ಸರಣಿಗೆ ರೋಹಿತ್ ಕ್ಯಾಪ್ಟನ್

Women’s Asia Cup 2024 IND VS PAK India has a huge victory against Pakistan women in the Asia Cup

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular