Women’s Asia Cup 2024 : ದಾಂಬುಲ (ಶ್ರೀಲಂಕಾ): ಭಾರತ ಮಹಿಳಾ ಕ್ರಿಕೆಟ್ ತಂಡ ಶ್ರೀಲಂಕಾದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಆಡಿರುವ ಮೂರೂ ಲೀಗ್ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಸೆಮಿಫೈನಲ್’ಗೆ ಲಗ್ಗೆ ಇಟ್ಟಿದೆ. ರಣಗಿರಿ ದಾಂಬುಲ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಮಂಗಳವಾರ ನಡೆದ ಎ ಗುಂಪಿನ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ನೇಪಾಳ ತಂಡವನ್ನು 82 ರನ್’ಗಳಿಂದ ಭರ್ಜರಿಯಾಗಿ ಮಣಿಸಿದ ಭಾರತ ಮಹಿಳೆಯರ ಕ್ರಿಕೆಟ್ ತಂಡ (Indians Womens Cricket Team) ಟೂರ್ನಿಯಲ್ಲಿ ಸತತ 3ನೇ ಗೆಲುವು ದಾಖಲಿಸಿತು.

ಹರ್ಮನ್ ಪ್ರೀತ್ ಕೌರ್ ವಿಶ್ರಾಂತಿ ಬಯಸಿದ್ದರಿಂದ ನೇಪಾಳ ವಿರುದ್ಧ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಉಪನಾಯಕಿ ಸ್ಮೃತಿ ಮಂಧನ ಭಾರತಕ್ಕೆ ಸುಲಭ ಗೆಲುವು ತಂದು ಕೊಟ್ಟರು. ಮೊದಲು ಬ್ಯಾಟಿಂಗ್ ನಡೆಸಿದ ಭಾರತ ನಿಗದಿತ 20 ಓವರ್’ಗಳಲ್ಲಿ 3 ವಿಕೆಟ್ ನಷ್ಟಕ್ಕೆ 178 ರನ್ ಕಲೆ ಹಾಕಿತು. ಈ ಪಂದ್ಯದಲ್ಲಿ ನಾಯಕಿ ಸ್ಮೃತಿ ಮಂಧನ ತಮ್ಮ ಆರಂಭಿಕ ಆಟಗಾರ್ತಿಯ ಸ್ಥಾನವನ್ನು ದಯಾಳನ್ ಹೇಮಲತಾ ಅವರಿಗೆ ಬಿಟ್ಟು ಕೊಟ್ಟರು.

ಇದನ್ನೂ ಓದಿ : Gautam Gambhir Coaching Staff: ಗೌತಮ್ ಗಂಭೀರ್ ಕೋಚಿಂಗ್ ಸ್ಟಾಫ್’ನಲ್ಲಿ ಇಬ್ಬರು ಸ್ವದೇಶಿ, ಇಬ್ಬರು ವಿದೇಶಿ
ಭಾರತದ ಇನ್ನಿಂಗ್ಸ್ ಆರಂಭಿಸಿದ ಶೆಫಾಲಿ ವರ್ಮಾ ಮತ್ತು ದಯಾಳನ್ ಹೇಮಲತಾ ಜೋಡಿ ಮೊದಲ ವಿಕೆಟ್’ಗೆ 14 ಓವರ್’ಗಳಲ್ಲಿ 122 ರನ್ ಸೇರಿಸಿ ತಂಡಕ್ಕೆ ಭರ್ಜರಿ ಅಡಿಪಾಯ ಹಾಕಿಕೊಟ್ಟರು. ಸ್ಫೋಟಕ ಆಟವಾಡಿದ ಶೆಫಾಲಿ ವರ್ಮಾ 48 ಎಸೆತಗಳಲ್ಲಿ 12 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 81 ರನ್ ಗಳಿಸಿ ಔಟಾಗಿ ಶತಕ ವಂಚಿತರಾದರು. ಹೇಮಲತಾ 42 ಎಸೆತಗಳಲ್ಲಿ 47 ರನ್ ಗಳಿಸಿದರು.

ಇದನ್ನೂ ಓದಿ : Nostush Kenjige: ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದಾನೆ ಚಿಕ್ಕಮಗಳೂರಿನ ಪ್ರತಿಭೆ
ನಂತರ ಕಠಿಣ ಗುರಿ ಬೆನ್ನಟ್ಟಿದ ನೇಪಾಳ ವನಿತಾ ಪಡೆ, 20 ಓವರ್’ಗಳಲ್ಲಿ 9 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಲಷ್ಟೇ ಶಕ್ತವಾಗಿ 82 ರನ್’ಗಳ ಭಾರೀ ಅಂತರದ ಸೋಲು ಕಂಡಿತು. ಭಾರತ ಪರ ದೀಪ್ತಿ ಶರ್ಮಾ 3 ವಿಕೆಟ್ ಪಡೆದರೆ, ಅರುಂಧತಿ ರೆಡ್ಡಿ ಮತ್ತು ರಾಧಾ ಯಾದವ್ ತಲಾ 2 ವಿಕೆಟ್ ಉರುಳಿಸಿದರು. ಭಾರತ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 7 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿತ್ತು. 2 ಲೀಗ್ ಪಂದ್ಯದಲ್ಲಿ 78 ರನ್’ಗಳ ಜಯಭೇರಿ ಬಾರಿಸಿತ್ತು.
ಇದನ್ನೂ ಓದಿ : Rahul Dravid IPL 2025: ಐಪಿಎಲ್ 2025 ಕ್ಕೆ ತಮ್ಮ ಹಳೇ ತಂಡದ ಕೋಚ್ ಆಗಲಿದ್ದಾರಂತೆ ರಾಹುಲ್ ದ್ರಾವಿಡ್
Women’s Asia Cup 2024 India Women Cricket Team enter semi-finals unbeaten