Indian Women Cricket team enter asia cup finals : ದಾಂಬುಲ: ಭಾರತ ಮಹಿಳಾ ತಂಡ ದಾಖಲೆಯ 9 ಬಾರಿ ಏಷ್ಯಾ ಕಪ್ ಟೂರ್ನಿಯಲ್ಲಿ ಫೈನಲ್’ಗೆ ಲಗ್ಗೆ ಇಟ್ಟಿದೆ. ದಾಂಬುಲದ ರಣಗಿರಿ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಏಷ್ಯಾ ಕಪ್ ಟಿ20 (Women’s Asia Cup T20) ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ, ಬಾಂಗ್ಲಾದೇಶ ವಿರುದ್ಧ 10 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ವನಿತಾ ಪಡೆ, ಭಾರತದ ಬಲಗೈ ಸ್ವಿಂಗ್ ಬೌಲರ್ ರೇಣುಕಾ ಸಿಂಗ್ ಠಾಕೂರ್ ಅವರ ಮಾರಕ ದಾಳಿಗೆ ತತ್ತರಿಸಿತು. ಭಾರತೀಯ ಬೌಲರ್’ಗಳ ಸಂಘಟಿತ ದಾಳಿಗೆ ನಲುಗಿದ ಬಾಂಗ್ಲಾದೇಶ ನಿಗದಿತ 20 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 80 ರನ್ ಗಳಿಸಲಷ್ಟೇ ಶಕ್ತವಾಯಿತು.
https://x.com/BCCIWomen/status/1816790794302554593
ಮಾರಕ ದಾಳಿ ಸಂಘಟಿಸಿದ ರೇಣುಕಾ ಸಿಂಗ್ ಠಾಕೂರ್ (Renuka Thakur), 4 ಓವರ್’ಗಳಲ್ಲಿ 1 ಓವರ್ ಮೇಡನ್ ಮಾಡಿ ಕೇವಲ 10 ರನ್ ಬಿಟ್ಟು ಕೊಟ್ಟು 3 ವಿಕೆಟ್ ಉರುಳಿಸಿ ಬಾಂಗ್ಲಾದೇಶಕ್ಕೆ ಆಘಾತ ನೀಡಿದರು. ಎಡಗೈ ಸ್ಪಿನ್ನರ್ ರಾಧಾ ಯಾದವ್ (Radha Yadav) 14 ರನ್ನಿಗೆ 3 ವಿಕೆಟ್ ಕಬಳಿಸಿದರು. ನಂತರ ಸುಲಭ ಗುರಿ ಬೆನ್ನಟ್ಟಿದ ಭಾರತ 11 ಓವರ್’ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 83 ರನ್ ಗಳಿಸುವ ಮೂಲಕ 10 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿತು.

ಉಪನಾಯಕಿ ಸ್ಮೃತಿ ಮಂಧನ (Smriti Mandhana) 39 ಎಸೆತಗಳಲ್ಲಿ 9 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅಜೇಯ 55 ರನ್ ಸಿಡಿಸಿದರೆ, ಶೆಫಾಲಿ ವರ್ಮಾ (Shefali Verma) 28 ಎಸೆತಗಳಲ್ಲಿ 26 ರನ್ ಗಳಿಸಿ ಅಜೇಯರಾಗುಳಿದರು. ಟೂರ್ನಿಯ ಫೈನಲ್ ಪಂದ್ಯ ಭಾನುವಾರ ನಡೆಯಲಿದೆ.
https://x.com/ICC/status/1816791323665387928
ಇದನ್ನೂ ಓದಿ : ಮಹಾರಾಜ ಟ್ರೋಫಿ ಟಿ20 ಟೂರ್ನಿ: ಯಾವ ಆಟಗಾರ, ಯಾವ ತಂಡಕ್ಕೆ ಇಲ್ಲಿದೆ ಸಂಪೂರ್ಣ ಮಾಹಿತಿ
ಮಹಿಳಾ ಏಷ್ಯಾಕಪ್: ಭಾರತದ ಸಾಧನೆ
2004 (ಏಕದಿನ): ಭಾರತ ಚಾಂಪಿಯನ್ (ರನ್ನರ್ಸ್ ಅಪ್: ಶ್ರೀಲಂಕಾ)
2005-06 (ಏಕದಿನ): ಭಾರತ ಚಾಂಪಿಯನ್ (ರನ್ನರ್ಸ್ ಅಪ್: ಶ್ರೀಲಂಕಾ)
2006 (ಏಕದಿನ): ಭಾರತ ಚಾಂಪಿಯನ್ (ರನ್ನರ್ಸ್ ಅಪ್: ಶ್ರೀಲಂಕಾ)
2008 (ಏಕದಿನ): ಭಾರತ ಚಾಂಪಿಯನ್ (ರನ್ನರ್ಸ್ ಅಪ್: ಶ್ರೀಲಂಕಾ)
2012 (ಟಿ20): ಭಾರತ ಚಾಂಪಿಯನ್ (ರನ್ನರ್ಸ್ ಅಪ್: ಪಾಕಿಸ್ತಾನ)
ಇದನ್ನೂ ಓದಿ : Samit Dravid : ಮಹಾರಾಜ ಟ್ರೋಫಿ ಮೈಸೂರು ವಾರಿಯರ್ಸ್ ತಂಡ ಸೇರಿದ ರಾಹುಲ್ ದ್ರಾವಿಡ್ ಪುತ್ರ
2016 (ಟಿ20): ಭಾರತ ಚಾಂಪಿಯನ್ (ರನ್ನರ್ಸ್ ಅಪ್: ಪಾಕಿಸ್ತಾನ)
2018 (ಟಿ20): ಬಾಂಗ್ಲಾದೇಶ ಚಾಂಪಿಯನ್ (ರನ್ನರ್ಸ್ ಅಪ್: ಭಾರತ)
2022: (ಟಿ20) ಭಾರತ ಚಾಂಪಿಯನ್ (ರನ್ನರ್ಸ್ ಅಪ್: ಪಾಕಿಸ್ತಾನ)
2024 (ಟಿ20): ಭಾರತ ಫೈನಲ್’ಗೆ (ಭಾನುವಾರ ಫೈನಲ್)
Women’s Asia Cup 2024: Indian Women Cricket team enter asia cup finals in 9th Time
News Next ಡಿಜಿಟಲ್‌ನಲ್ಲಿ ಹೊಸ ಕಾಮಿಡಿ ಶೋ ಆರಂಭಗೊಳ್ಳುತ್ತಿದೆ. ನಿಮ್ಮ ಪ್ರೋತ್ಸಾಹವೇ ನಮಗೆ ಶ್ರೀರಕ್ಷೆ. ನಮ್ಮ ವಾಹಿನಿಯನ್ನು Subscribe ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ
News Next Digital Youtube Channel Link : https://www.youtube.com/@newsnextdigital