ಸೋಮವಾರ, ಏಪ್ರಿಲ್ 28, 2025
HomeSportsCricketYashwasvi Jaiswal : ವೆಸ್ಟ್ ಇಂಡೀಸ್‌ನಲ್ಲಿ ಟೆಸ್ಟ್ ಪದಾರ್ಪಣೆ ಮಾಡಲಿದ್ದಾನೆ ಟೀಮ್ ಇಂಡಿಯಾದ ಪಾನಿಪೂರಿ ಹುಡುಗ

Yashwasvi Jaiswal : ವೆಸ್ಟ್ ಇಂಡೀಸ್‌ನಲ್ಲಿ ಟೆಸ್ಟ್ ಪದಾರ್ಪಣೆ ಮಾಡಲಿದ್ದಾನೆ ಟೀಮ್ ಇಂಡಿಯಾದ ಪಾನಿಪೂರಿ ಹುಡುಗ

- Advertisement -

ಬೆಂಗಳೂರು : (Yashwasvi Jaiswal) ಮುಂಬೈನ ಬೀದಿಯಲ್ಲಿ ಪಾನಿಪೂರಿ ಮಾರುತ್ತಲೇ ಕ್ರಿಕೆಟ್ ಆಡಿ, ಜೀವನದಲ್ಲಿ ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಂತು ಕ್ರಿಕೆಟ್ ಬದುಕು ಕಟ್ಟಿಕೊಂಡಿರುವ ಯುವ ಎಡಗೈ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ವೆಸ್ಟ್ ಇಂಡೀಸ್‌ನಲ್ಲಿ ಟೆಸ್ಟ್ ಪದಾರ್ಪಣೆಗೆ ಸಜ್ಜಾಗಿದ್ದಾರೆ.

ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಿರುವ ಭಾರತ ತಂಡದಲ್ಲಿ ಅನುಭವಿ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಅವರನ್ನು ಕೈ ಬಿಡಲಾಗಿದ್ದು, ಅವರ ಬದಲು ಯಶಸ್ವಿ ಜೈಸ್ವಾಲ್ ಅವಕಾಶ ಪಡೆದಿದ್ದಾರೆ. ಹೀಗಾಗಿ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಮೂರನ ಕ್ರಮಾಂಕದಲ್ಲಿ ಆಡುವ ಸಾಧ್ಯತೆಗಳಿವೆ. ದೇಶೀಯ ಕ್ರಿಕೆಟ್‌ನಲ್ಲಿ ತೋರಿದ ಅಮೋಘ ಪ್ರದರ್ಶನ ಯಶಸ್ವಿ ಜೈಸ್ವಾಲ್ ಅವರಿಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಕಲ್ಪಿಸಿಕೊಟ್ಟಿದೆ. ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಅಬ್ಬರಿಸಿರುವ ಯಶಸ್ವಿ ಜೈಸ್ವಾಲ್ 2022ರ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅಮೋಘ ದ್ವಿಶತಕ (265 ರನ್) ಬಾರಿಸಿ ಪಶ್ಚಿಮ ವಲಯ ತಂಡಕ್ಕೆ ಚಾಂಪಿಯನ್‌ಶಿಪ್ ಗೆಲ್ಲಿಸಿಕೊಟ್ಟಿದ್ದರು.

ಈ ವರ್ಷದ ಮಾರ್ಚ್‌ನಲ್ಲಿ ನಡೆದ ಮಧ್ಯಪ್ರದೇಶ ವಿರುದ್ಧದ ಇರಾನಿ ಕಪ್ ಪಂದ್ಯದಲ್ಲೂ ಮಿಂಚಿದ್ದ ಯಶಸ್ವಿ ಜೈಸ್ವಾಲ್ ಪ್ರಥಮ ಇನ್ನಿಂಗ್ಸ್‌ನಲ್ಲಿ 213 ರನ್ ಬಾರಿಸಿದ್ರೆ, 2ನೇ ಇನ್ನಿಂಗ್ಸ್‌ನಲ್ಲಿ ಸ್ಫೋಟಕ 144 ರನ್ ಸಿಡಿಸಿದ್ದರು. ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಇದುವರೆಗೆ 15 ಪಂದ್ಯಗಳನ್ನಾಡಿರುವ ಯಶಸ್ವಿ ಜೈಸ್ವಾಲ್ 80.21ರ ಅಮೋಘ ಸರಾಸರಿಯಲ್ಲಿ 9 ಶತಕ ಹಾಗೂ 2 ಅರ್ಧಶತಕಗಳ ಸಹಿತ 1845 ರನ್ ಗಳಿಸಿದ್ದಾರೆ. ಐಪಿಎಲ್-2023 ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕನಾಗಿ ಅಮೋಘ ಪ್ರದರ್ಶನ ತೋರಿದ್ದ 21 ವರ್ಷದ ಯಶಸ್ವಿ ಜೈಸ್ವಾಲ್ 14 ಪಂದ್ಯಗಳಿಂದ ಒಂದು ಶತಕ ಹಾಗೂ 5 ಅರ್ಧಶತಕಗಳ ನೆರವಿನಿಂದ 163.61ರ ಸ್ಟ್ರೈಕ್‌ರೇಟ್‌ನಲ್ಲಿ 625 ರನ್ ಕಲೆ ಹಾಕಿದ್ದರು.

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಕೆ.ಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜೈದೇವ್ ಉನಾದ್ಕಟ್, ನವದೀಪ್ ಸೈನಿ.

ಭಾರತದ ವೆಸ್ಟ್ ಇಂಡೀಸ್ ಪ್ರವಾಸದ ವೇಳಾಪಟ್ಟಿ (India tour of West Indies 2023 Fixtures)

ಟೆಸ್ಟ್ ಸರಣಿ:
ಪ್ರಥಮ ಟೆಸ್ಟ್: ಜುಲೈ12-16 (ವಿಂಡ್ಸರ್ ಪಾರ್ಕ್, ಡೊಮಿನಿಕಾ)
ದ್ವಿತೀಯ ಟೆಸ್ಟ್: ಜುಲೈ 20-24 (ಕ್ವೀನ್ಸ್ ಪಾರ್ಕ್ ಓವಲ್, ಟ್ರಿನಿಡಾಡ್)

ಏಕದಿನ ಸರಣಿ:
ಮೊದಲ ಏಕದಿನ: ಜುಲೈ 27 (ಕೆನ್ನಿಂಗ್ಟನ್ ಓವಲ್, ಬಾರ್ಬೆಡೋಸ್)
ಎರಡನೇ ಏಕದಿನ: ಜುಲೈ 29 (ಕೆನ್ನಿಂಗ್ಟನ್ ಓವಲ್, ಬಾರ್ಬೆಡೋಸ್)
ಮೂರನೇ ಏಕದಿನ: ಆಗಸ್ಟ್ 01 (ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ, ಟ್ರಿನಿಡಾಡ್)

ಇದನ್ನೂ ಓದಿ : Asian Games 2023 : 2023ರ ಏಷ್ಯನ್ ಗೇಮ್ಸ್’ಗೆ ಎಂಟ್ರಿ ಕೊಡಲಿದ್ದಾರೆ ಟೀಮ್ ಇಂಡಿಯಾ ಕ್ರಿಕೆಟರ್ಸ್

ಇದನ್ನೂ ಓದಿ : Cheteshwar Pujara: ಚೇತೇಶ್ವರ್ ಪೂಜಾರ ಟೆಸ್ಟ್ ಕರಿಯರ್’ಗೆ ಬಿಸಿಸಿಐ ಇತಿಶ್ರೀ..ಮುಗಿಯಿತಾ 13 ವರ್ಷಗಳ ಟೆಸ್ಟ್ ವೃತ್ತಿಬದುಕು?

ಟಿ20 ಸರಣಿ:
ಮೊದಲ ಟಿ20: ಆಗಸ್ಟ್ 04 (ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ, ಟ್ರಿನಿಡಾಡ್)
ಎರಡನೇ ಟಿ20: ಆಗಸ್ಟ್ 06 (ನ್ಯಾಷನಲ್ ಸ್ಟೇಡಿಯಂ, ಗಯಾನ)
ಮೂರನೇ ಟಿ20: ಆಗಸ್ಟ್ 08 (ನ್ಯಾಷನಲ್ ಸ್ಟೇಡಿಯಂ, ಗಯಾನ)
ನಾಲ್ಕನೇ ಟಿ20: ಆಗಸ್ಟ್ 12 (ಬ್ರೊವಾರ್ಡ್ ಕೌಂಟಿ ಸ್ಟೇಡಿಯಂ, ಲಾಡರ್’ಹಿಲ್; ಫ್ಲೋರಿಡಾ)
ಐದನೇ ಟಿ20: ಆಗಸ್ಟ್ 13 (ಬ್ರೊವಾರ್ಡ್ ಕೌಂಟಿ ಸ್ಟೇಡಿಯಂ, ಲಾಡರ್’ಹಿಲ್; ಫ್ಲೋರಿಡಾ)

Yashwasvi Jaiswal: Team India’s Panipuri boy to make Test debut in West Indies

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular