World Championship of Legends : ಲಂಡನ್: ಭಾರತದ ಡಬಲ್ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಆಲ್ರೌಂಡರ್’ಗಳಲ್ಲಿ ಒಬ್ಬರು. ಯುವರಾಜನ ವೃತ್ತಿಜೀವನದ ಉತ್ತುಂಗದ ದಿನಗಳಲ್ಲಿ ಆತನ ಆಟ ನೋಡುಗರ ಕಣ್ಣಿಗೆ ಹಬ್ಬವಾದರೆ, ಎದುರಾಳಿಗಳ ಎದೆ ನಡುಗಿಸುವಂತಿರುತ್ತಿತ್ತು. ಯುವರಾಜ್ ಸಿಂಗ್ ಅವರ ಗತವೈಭವ ಮತ್ತೆ ಮರುಕಳಿಸಿದೆ. ಇಂಗ್ಲೆಂಡ್’ನಲ್ಲಿ ನಡೆಯುತ್ತಿರುವ ವರ್ಲ್ಡ್ ಚಾಂಪಿಯನ್’ಷಿಪ್ ಆಫ್ ಲೆಜೆಂಡ್ಸ್ (World Championship of Legends) ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ವೀರಾವೇಶದ ಅರ್ಧಶತಕ ಬಾರಿಸಿದ ಯುವರಾಜ್ ಸಿಂಗ್ (Yuvraj Singh) ಭಾರತ ಲೆಜೆಂಡ್ಸ್ (India Legends) ತಂಡವನ್ನು ಫೈನಲ್’ಗೆ ಮುನ್ನಡೆಸಿದ್ದಾರೆೆ.

ನಾರ್ಥಾಂಪ್ಟನ್’ನಲ್ಲಿ ಶುಕ್ರವಾರ ನಡೆದ ಟೂರ್ನಿಯ 2ನೈ ಸೆಮಿಫೈನಲ್ ಪಂದ್ಯದಲ್ಲಿ ಕಾಂಗರೂಗಳ ವಿರುದ್ಧ ಅಬ್ಬರಿಸಿದ ಯುವರಾಜ್ ಸಿಂಗ್ ಕೇವಲ 28 ಎಸೆತಗಳಲ್ಲಿ 59 ರನ್ ಸಿಡಿಸಿ ಭಾರತದ ಗೆಲುವಿಗೆ ಕಾರಣರಾದರು. ಯುವರಾಜನ ಸಿಡಿಲಬ್ಬರದ ಇನ್ನಿಂಗ್ಸ್’ನಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್’ಗಳಿದ್ದವು. ಅಹ್ಮದಾಬಾದ್’ನಲ್ಲಿ ನಡೆದಿದ್ದ 2011ರ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಜೇಯ 57 ರನ್ ಬಾರಿಸಿದ್ದ ಯುವರಾಜ್ ಸಿಂಗ್ ಭಾರತವನ್ನು ಸೆಮಿಫೈನಲ್’ಗೆ ಮುನ್ನಡೆಸಿದ್ದರು. ಕಾಂಗರೂಗಳ ವಿರುದ್ಧದ 13 ವರ್ಷಗಳ ಹಿಂದಿನ ಪರಾಕ್ರಮವನ್ನು ಯುವಿ ಮತ್ತೆ ನೆನಪಿಸಿದ್ದಾರೆ.

ಇದನ್ನೂ ಓದಿ : KL Rahul net worth: ಕನ್ನಡಿಗ ಕೆ.ಎಲ್ ರಾಹುಲ್ ಬಳಿ ಇದೆ ಶತಕೋಟಿ ಆಸ್ತಿ!
ಯುವರಾಜ್ ಸಿಂಗ್ ಅರ್ಧಶತಕದ ಜೊತೆಗೆ ಕನ್ನಡಿಗ ರಾಬಿನ್ ಉತ್ತಪ್ಪ 35 ಎಸೆತಗಳಲ್ಲಿ 65 ರನ್, ಯೂಸುಫ್ ಪಠಾಣ್ 23 ಎಸೆತಗಳಲ್ಲಿ ಅಜೇಯ 51 ರನ್ ಹಾಗೂ ಇರ್ಫಾನ್ ಪಠಾಣ್ ಕೇವಲ 19 ಎಸೆತಗಳಲ್ಲಿ 50 ರನ್ ಸಿಡಿಸಿದರು. ಹೀಗಾಗಿ ಭಾರತ ಲೆಜೆಂಡ್ಸ್ ತಂಡ ನಿಗದಿತ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 254 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತು. ನಂತರ ಬೆಟ್ಟದಂತಹ ಸವಾಲು ಬೆನ್ನಟ್ಟಿದ್ದ ಆಸ್ಟ್ರೇಲಿಯಾ ಲೆಜೆಂಡ್ಸ್ ಪಡೆ 20 ಓವರ್’ಗಳಲ್ಲಿ 7 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಲಷ್ಚೇ ಶಕ್ತವಾಗಿ 86 ರನ್’ಗಳಿಂದ ಭಾರತಕ್ಕೆ ಶರಣಾಯಿತು. ಇಂದು ಬರ್ಮಿಂಗ್’ಹ್ಯಾಮ್’ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಯುವರಾಜ್ ಸಿಂಗ್ ನಾಯಕತ್ವದ ಭಾರತ ಲೆಜೆಂಡ್ಸ್ ತಂಡ ಪಾಕಿಸ್ತಾನ ಲೆಜೆಂಡ್ಸ್ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ : James Anderson: ಜೇಮ್ಸ್ ಆ್ಯಂಡರ್ಸನ್ ಟೆಸ್ಟ್ ಪಂದ್ಯಕ್ಕೆ ಪದಾಪರ್ಣೆ ಮಾಡಿದಾಗ ಈಗಿನ ಇಂಗ್ಲೆಂಡ್ ಆಟಗಾರರ ವಯಸ್ಸೆಷ್ಟು ಗೊತ್ತಾ?
Yuvraj Singh fifty World Championship of Legends semi final India Legends won against Australia Legends