Yuzvendra Chahal’s wife Dhanashree Verma: ಏಷ್ಯಾ ಕಪ್ ತಂಡದಿಂದ ಚಹಲ್ ಔಟ್, ಬಿಸಿಸಿಐ ವಿರುದ್ಧ ಕೋಪ ಹೊರ ಹಾಕಿದ ಚಹಲ್ ಪತ್ನಿ ಧನಶ್ರೀ

ಬೆಂಗಳೂರು: ಏಷ್ಯಾ ಕಪ್ (Asia Cup 2023) ತಂಡದಲ್ಲಿ ಅನುಭವಿ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್‌ಗೆ (Yuzvendra Chahal’s wife Dhanashree Verma) ಸ್ಥಾನ ನೀಡದಿರುವ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಏಷ್ಯಾ ಕಪ್ ಟೂರ್ನಿ ಸ್ಪಿನ್ನರ್’ಗಳ ಪಾಲಿನ ಸ್ವರ್ಗವಾಗಿರುವ ಶ್ರೀಲಂಕಾದಲ್ಲಿ ನಡೆಯಲಿದ್ದು, ಭಾರತ ತಂಡ ಲೆಗ್ ಸ್ಪಿನ್ನರ್ ಇಲ್ಲದೆ ಟೂರ್ನಿಯಲ್ಲಿ ಆಡುತ್ತಿದೆ. ಯುಜ್ವೇಂದ್ರ ಚಹಲ್ ಅವರನ್ನು ತಂಡದಿಂದ ಹೊರಗಿಟ್ಟಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಪ್ರಿಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ಚಹಲ್ ಅವರ ಪತ್ನಿ ಧನಶ್ರೀ ವರ್ಮಾ ಕೂಡ ಇನ್’ಸ್ಟಾಗ್ರಾಂ ಸ್ಟೋರೀಸ್’ನಲ್ ಕೆಲ ಸಾಲುಗಳನ್ನು ಬರೆಯುವ ಮೂಲಕ ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಈಗ ನಾನು ಇದನ್ನು ಗಂಭೀರವಾಗಿ ಪ್ರಶ್ನಿಸಲು ಪ್ರಾರಂಭಿಸಿದ್ದೇನೆ. ಅತಿ ವಿಧೇಯ ಮತ್ತು ಅಂತರ್ಮುಖಿಯಾಗಿರುವುದು ನಿಮ್ಮ ಕೆಲಸದ ಬೆಳವಣಿಗೆಗೆ ಹಾನಿಕಾರಕವಾಗಿದ್ದರೆ..? ಅಥವಾ ಜೀವನದಲ್ಲಿ ಬೆಳೆಯಲು ನಾವೆಲ್ಲರೂ ಬಹಿರ್ಮುಖಿ ಮತ್ತು ಬೀದಿ-ಬುದ್ಧಿವಂತರಾಗಿರಬೇಕೇ? “ಕೊನೆಯಲ್ಲಿ, ಅದು ನಿಮ್ಮ ಮತ್ತು ನೀವು ನಂಬುವ ದೇವರ ನಡುವೆ ಇದೆ. ಮತ್ತು ಅದೃಷ್ಟವಶಾತ್, ಜಗತ್ತು ನಿಮ್ಮೊಂದಿಗಿದೆ. ಧನ್ಯವಾದ. ದೇವರು ದೊಡ್ಡವನು,” ಎಂದು ಇನ್’ಸ್ಟಾಗ್ರಾಂ ಸ್ಟೋರೀಸ್’ನಲ್ಲಿ ಧನಶ್ರೀ ವರ್ಮಾ ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ.

ಏಷ್ಯಾ ಕಪ್ ಟೂರ್ನಿಗೆ (Asia Cup 2023) ಸಜ್ಜಾಗುತ್ತಿರುವ ಟೀಮ್ ಇಂಡಿಯಾದ ಟ್ರೈನಿಂಗ್ ಕ್ಯಾಂಪ್ ಬೆಂಗಳೂರಿನ ಹೊರವಲಯದಲ್ಲಿರುವ ಆಲೂರಿನಲ್ಲಿ ನಾಳೆ (ಗುರುವಾರ) ಆರಂಭವಾಗಲಿದೆ. ಆಲೂರಿನಲ್ಲಿರುವ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಕ್ರೀಡಾಂಗಣದಲ್ಲಿ ನಡೆಯಲಿರುವ ಅಭ್ಯಾಸ ಶಿಬಿರದಲ್ಲಿ ಏಷ್ಯಾ ಕಪ್ ಟೂರ್ನಿಗೆ ಆಯ್ಕೆಯಾಗಿರುವ ಟೀಮ್ ಇಂಡಿಯಾದ ಎಲ್ಲಾ ಆಟಗಾರರು ಭಾಗಿಯಾಗಲಿದ್ದಾರೆ. ಟ್ರೈನಿಂಗ್ ಕ್ಯಾಂಪ್ ಗುರುವಾರ ಆರಂಭವಾಗಲಿದ್ದು, ಆಗಸ್ಟ್ 29ರವರೆಗೆ ನಡೆಯಲಿದೆ. ಭಾರತ ತಂಡದ ಆಟಗಾರರು ಬುಧವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಭಾರತ ತಂಡ ಪ್ರಧಾನ ತರಬೇತುದಾರ ರಾಹುಲ್ ದ್ರಾವಿಡ್ ಅವರ ಗರಡಿಯಲ್ಲಿ ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ನಡೆಸಲಿದ್ದಾರೆ. ಐದು ದಿನಗಳ ಅಭ್ಯಾಸ ಶಿಬಿರದ ನಂತರ ಭಾರತ ತಂಡದ ಆಟಗಾರರು ಆಗಸ್ಟ್ 30ರಂದು ಬೆಂಗಳೂರಿನಿಂದ ಶ್ರೀಲಂಕಾಗೆ ಪ್ರಯಾಣ ಬೆಳೆಸಲಿದ್ದಾರೆ. ಏಷ್ಯಾ ಕಪ್ ಟೂರ್ನಿ ಆಗಸ್ಟ್ 31ರಂದು ಶ್ರೀಲಂಕಾದಲ್ಲಿ ಆರಂಭವಾಗಲಿದೆ. ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿರುವ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಭಾರತ ತಂಡ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

ಏಷ್ಯಾ ಕಪ್ ಟೂರ್ನಿ ಭಾರತ ತಂಡ ಹೀಗಿದೆ (Team India for Asia Cup 2023)
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಪ್ರಸಿದ್ಧ್ ಕೃಷ್ಣ, (ಸಂಜು ಸ್ಯಾಮ್ಸನ್, ಮೀಸಲು ಆಟಗಾರ). ಇದನ್ನೂ ಓದಿ : Exclusive: ಆಲೂರಿನಲ್ಲಿ ನಾಳೆಯಿಂದ ಟೀಮ್ ಇಂಡಿಯಾದ ಏಷ್ಯಾ ಕಪ್ ಟ್ರೈನಿಂಗ್ ಕ್ಯಾಂಪ್ ಶುರು

ಏಷ್ಯಾ ಕಪ್ 2023 ಟೂರ್ನಿಯ ಲೀಗ್ ಪಂದ್ಯಗಳ ವೇಳಾಪಟ್ಟಿ (Asia Cup 2023 schedule)
ಆಗಸ್ಟ್ 30: ಪಾಕಿಸ್ತಾನ Vs ನೇಪಾಳ (ಬೆಳಗ್ಗೆ 10ಕ್ಕೆ, ಮುಲ್ತಾನ್)
ಆಗಸ್ಟ್ 31: ಶ್ರೀಲಂಕಾ Vs ಬಾಂಗ್ಲಾದೇಶ (ಬೆಳಗ್ಗೆ 9.30ಕ್ಕೆ, ಪಲ್ಲೆಕೆಲೆ)
ಸೆಪ್ಟೆಂಬರ್ 2: ಭಾರತ Vs ಪಾಕಿಸ್ತಾನ (ಬೆಳಗ್ಗೆ 9.30ಕ್ಕೆ, ಪಲ್ಲೆಕೆಲೆ)
ಸೆಪ್ಟೆಂಬರ್ 3: ಅಫ್ಘಾನಿಸ್ತಾನ Vs ಬಾಂಗ್ಲಾದೇಶ (ಬೆಳಗ್ಗೆ 9.30ಕ್ಕೆ, ಲಾಹೋರ್)
ಸೆಪ್ಟೆಂಬರ್ 4: ಭಾರತ Vs ನೇಪಾಳ (ಬೆಳಗ್ಗೆ 9.30ಕ್ಕೆ, ಪಲ್ಲೆಕೆಲೆ)
ಸೆಪ್ಟೆಂಬರ್ 5: ಅಫ್ಘಾನಿಸ್ತಾನ Vs ಶ್ರೀಲಂಕಾ (ಬೆಳಗ್ಗೆ 9.30ಕ್ಕೆ, ಲಾಹೋರ್).

Yuzvendra Chahal’s wife Dhanashree Verma: Chahal out of Asia Cup team, Chahal’s wife Dhanashree vented her anger against BCCI

Comments are closed.