ಭಾನುವಾರ, ಏಪ್ರಿಲ್ 27, 2025
HomekarnatakaKarnataka High Alert : ಹಿಜಾಬ್ ತೀರ್ಪು ಹಿನ್ನೆಲೆಯಲ್ಲಿ : ಬೆಂಗಳೂರಲ್ಲಿ 1 ವಾರ ನಿಷೇದಾಜ್ಞೆ,...

Karnataka High Alert : ಹಿಜಾಬ್ ತೀರ್ಪು ಹಿನ್ನೆಲೆಯಲ್ಲಿ : ಬೆಂಗಳೂರಲ್ಲಿ 1 ವಾರ ನಿಷೇದಾಜ್ಞೆ, ರಾಜ್ಯದಾದ್ಯಂತ ಹೈಅಲರ್ಟ್

- Advertisement -

ಬೆಂಗಳೂರು : ರಾಜ್ಯದಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಹಿಜಾಬ್ ಪ್ರಕರಣದ ತೀರ್ಪು ( Hijab Judgement) ನಾಳೆ ಪ್ರಕಟ ವಾಗಲಿದೆ.‌ 11 ದಿನಗಳ ಕಾಲ ನಡೆದ ವಾದ ಪ್ರತಿವಾದದ ಬಳಿಕ ಹೈಕೋರ್ಟ್ ನ ತ್ರೀಸದಸ್ಯ ಪೀಠ ತೀರ್ಪನ್ನು ಕಾಯ್ದಿರಿಸಿತ್ತು. ಮಂಗಳವಾರ ಮುಂಜಾನೆ 10.30 ರ ವೇಳೆಗೆ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ನ್ಯಾಯಪೀಠ ವಿವಾದದ ಕುರಿತು ತೀರ್ಪು ಪ್ರಕಟಿಸಲಿದೆ. ನಾಳೆ ಹಿಜಾಬ್ ವಿವಾದ ಕುರಿತ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಬೆಂಗಳೂರು (Karnataka High Alert) ಸೇರಿದಂತೆ ರಾಜ್ಯದಾದ್ಯಂತ ಕಟ್ಟೆಚ್ಚರ ವಹಿಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ.

ಹೈಕೋರ್ಟ್ ಸುತ್ತಮುತ್ತ ಭದ್ರತೆ ಹೆಚ್ಚಿಸಲಾಗಿದೆ. ಅಲ್ಲದೇ ಹಿಜಾಬ್ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಶಾಲಾ ಕಾಲೇಜುಗಳು ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಸೂಕ್ತ ಭದ್ರತೆ ಒದಗಿಸುವಂತೆ ಆಯಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಡಿಜಿಐಜಿಪಿ ಖಡಕ್ ಸೂಚನೆ ರವಾನಿಸಿದ್ದಾರೆ. ಇನ್ನು ಸೂಕ್ಷ್ಮ ಪ್ರದೇಶವಾಗಿ ರುವ ಬೆಂಗಳೂರಿನಲ್ಲಿ ಕಟ್ಟೆಚ್ಚರವಹಿಸಲಾಗಿದ್ದು, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹಿಜಾಬ್ ಗೆ ಸಂಬಂಧಿಸಿದಂತೆ ಮುಂಜಾಗೃತಾ ಕ್ರಮಗಳನ್ನ ತೆಗೆದುಗೊಳ್ಳಲಾಗಿದೆ. ಇಂದಿನಿಂದ ಬೆಂಗಳೂರು ನಗರಾದ್ಯಂತ ನಿಷೇದಾಜ್ಞೆ ಜಾರಿಗೊಳಿಸಲಾಗಿದ್ದು, ಒಂದು ವಾರಗಳ ಕಾಲ 144 ಸೆಕ್ಷನ್ ಜಾರಿಯಲ್ಲಿರಲಿದೆ.

ನಾಳೆ ನಗರದ ಭದ್ರತೆಗೆ 10 ಸಾವಿರಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿದ್ದು, ಯಾವುದೇ ಪ್ರತಿಭಟನೆ ರ್ಯಾಲಿಗೆ ಅವಕಾಶವಿಲ್ಲ.ಹೆಚ್ಚುವರಿಯಾಗಿ ಕೆಎಸ್ ಆರ್‌ಪಿ ತುಕಡಿ, ಸಿಎಆರ್ ತುಕಡಿ ನಿಯೋಜನೆ ಸೂಕ್ಷ್ಮ ಪ್ರದೇಶಗಳನ್ನ ಗುರುತಿಸಿ ಬಂದೋಬಸ್ತ್ ಮಾಡಲಾಗುತ್ತೆ. ಬೆಂಗಳೂರು ಜನತೆ ಇಲ್ಲಿವರೆಗೂ ನಮಗೆ ಸಹಕಾರ ನೀಡಿದ್ದೀರಿ ಮುಂದಿನ ದಿನಗಳಲ್ಲೂ ಕೂಡ ನಮಗೆ ಸಹಕಾರ ನೀಡಿ ಎಂದು ಆಯುಕ್ತ ಕಮಲ ಪಂಥ ಮನವಿ ಮಾಡಿದ್ದಾರೆ.

ಮುಖ್ಯವಾಗಿ ಹೈ ಕೋರ್ಟ್ ಸುತ್ತಮುತ್ತ ಬಂದೋಬಸ್ತ್ ಗೆ ಸೂಚನೆ ನೀಡಲಾಗಿದ್ದು, ಕೇಂದ್ರ ವಿಭಾಗ ಡಿಸಿಪಿ ಎಂ ಎನ್ ಅನುಚೇತ್ ಹೈಕೋರ್ಟ್ ಬಳಿ ಬಂದೋಬಸ್ತ್ ಗೆ ಸಿದ್ಧವಾಗಿ ದ್ದಾರೆ. ಅಂಬೇಡ್ಕರ್ ಗೇಟ್, ಡೈಮಂಡ್ ಜೂಬ್ಲಿ ಗೇಟ್, ಮಹಾರಾಣಿ ಜಂಕ್ಷನ್ ಬಳಿ ಬಂದೋಬಸ್ತ್ ಮಾಡೋದಾಗಿ ಡಿಸಿಪಿ ಅನುಚೇತ್ ಮಾಹಿತಿ‌ ನೀಡಿದ್ದಾರೆ. ಹೈಕೋರ್ಟ್ ಸುತ್ತಮುತ್ತ ಇಬ್ಬರು ಎಸಿಪಿ ಹಾಗು 11 ಮಂದಿ ಇನ್ಸ್ ಪೆಕ್ಟರ್ ಗಳು ಭದ್ರತೆ ನೀಡಿದ್ದಾರೆ. ಇದಲ್ಲದೇ, ನಗರದಲ್ಲಿ ಸೋಮವಾರ ರಾತ್ರಿ ತುರ್ತಾಗಿ ಡಿಜಿ ಐಜಿಪಿ ಎಲ್ಲಾ ಜಿಲ್ಲೆಗಳ ಎಸ್ಪಿಗಳು ಹಾಗೂ ಕಮೀಷನರ್ ಗಳ ಜೊತೆ ನಡೆಸಿ, ಅಗತ್ಯ ಸೂಚನೆ ರವಾನಿಸಿದ್ದಾರೆ. ಅಲ್ಲದೇ ಶಾಂತಿ ಕಾಪಾಡಲು ಅಗತ್ಯ ಸಿದ್ಧತೆ ನಡೆಸುವಂತೆ ಆದೇಶಿಸಿದ್ದಾರೆ.

1 week section 144 in Bangalore and Karnataka High Alert for Hijab Judgement

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular