ಭಾನುವಾರ, ಏಪ್ರಿಲ್ 27, 2025
Homekarnataka7th Pay Commission Karnataka : 7ನೇ ವೇತನ ಆಯೋಗ ರಚನೆ : ಮಾತು ಕೊಟ್ಟು...

7th Pay Commission Karnataka : 7ನೇ ವೇತನ ಆಯೋಗ ರಚನೆ : ಮಾತು ಕೊಟ್ಟು ಮರೆತ ಬೊಮ್ಮಾಯಿ

- Advertisement -

ಬೆಂಗಳೂರು : 7th Pay Commission Karnataka : ಈಗಾಗಲೇ ರಾಜ್ಯದಲ್ಲಿ ಚುನಾವಣೆ ಕಾವು ಜೋರಾಗಿದೆ. ಎಲ್ಲ ರಾಜಕೀಯ ಪಕ್ಷಗಳು ಕೂಡ ಚುನಾವಣೆ, ಪಕ್ಷ ಸಂಘಟನೆ ಹಾಗೂ ಪ್ರಣಾಳಿಕೆ ಸಿದ್ಧತೆಯ ಕಡೆಗೆ ಗಮನ ಹರಿಸಿದ್ದಾರೆ. ಈ ಮಧ್ಯೆ ರಾಜ್ಯದ ಸಮಸ್ಯೆಗಳು, ಜನರ ಬೇಡಿಕೆಗಳು ಹಾಗೂ ವಿವಿಧ ವರ್ಗದ ಜನರ ಆಶೋತ್ತರಗಳು ಈಗ ಮಹತ್ವ ಪಡೆದುಕೊಂಡಿದೆ. ಈ ಮಧ್ಯೆ ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿರೋ ಸರ್ಕಾರಿ ನೌಕರರ ಮತಗಳಿಸಲು ಬಿಜೆಪಿ ಹಾಗೂ ಕಾಂಗ್ರೆಸ್ ಮೇಲಾಟ ಆರಂಭಿಸಿವೆ.

ರಾಜ್ಯದಲ್ಲಿ ಎಲ್ಲ ಓಟ್ ಬ್ಯಾಂಕ್ ಗಳ ಪೈಕಿ ರಾಜ್ಯ ಸರ್ಕಾರಿ ನೌಕರರ ಓಟ್ ಬ್ಯಾಂಕ್ ಕೂಡ ಅತಿ ಮಹತ್ವದ್ದಾಗಿದೆ. ಹೀಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಈ ಮತಬ್ಯಾಂಕ್ ಬಳಸಿಕೊಳ್ಳುವ ಜಿದ್ದಾಜಿದ್ದಿನಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಈಗ ಬಿಜೆಪಿ ಸರಕಾರಿ ನೌಕರರಿಗೆ ಮಾತು ಕೊಟ್ಟು ಮರೆತಿದ್ದು ಇದರ ಲಾಭವನ್ನು ಪಡೆಯಲು ಕಾಂಗ್ರೆಸ್ ಸಿದ್ಧತೆ ಆರಂಭಿಸಿದೆ.

ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ವೇತನ ಆಯೋಗ ಜಾರಿ ಮಾಡುವುದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಮಾತು ಕೊಟ್ಟಿದ್ದರು. 7ನೇ ವೇತನ ಆಯೋಗ ರಚನೆ ಮಾಡುವುದಾಗಿ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದರು. ಅಕ್ಟೋಬರ್ ಒಳಗೆ ಆಯೋಗ ರಚಿಸುವ ಅಭಯ ನೀಡಿದ್ದ ಸಿಎಂ ಕೊಟ್ಟ ಮಾತು ಮರೆತಿದ್ದಾರೆ. ಈ‌ಮಧ್ಯೆ ಸ್ವತಃ ಮಾಜಿಸಿಎಂ ಬಿಎಸ್ವೈ ಕೂಡ ವೇತನ ಆಯೋಗ ಜಾರಿಗೆ ಆಗ್ರಹ ಮಾಡಿದ್ದರು. ಈ ಬಗ್ಗೆ ಬಿಎಸ್ವೈ ಸಿಎಂ ಬೊಮ್ಮಾಯಿಗೆ ಪತ್ರ ಬರೆದು ಆಗ್ರಹ ಮಾಡಿದ್ದರು.

ಕೇವಲ ಆಡಳಿತ ಪಕ್ಷ ಮಾತ್ರವಲ್ಲ, ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ವೇತನ ಆಯೋಗ ರಚನೆಗೆ ಆಗ್ರಹಿಸಿದ್ದರು. ಈ ಎಲ್ಲ ಹಿರಿಯ ಸದಸ್ಯರ ಒತ್ತಾಯಕ್ಕೆ ಮಣಿದು ಬಜೆಟ್ ಅಧಿವೇಶನದಲ್ಲಿಯೇ ಸಿಎಂ ಬೊಮ್ಮಾಯಿ ಭರವಸೆ ನೀಡಿ ಸರ್ಕಾರಿ ನೌಕರರ ಮೂಗಿಗೆ ತುಪ್ಪ ಸವರಿದ್ದರು. ಆದರೆ ಈಗ ಭರವಸೆ ಕೊಟ್ಟು 6 ತಿಂಗಳಾದ್ರು ಆ ಬಗ್ಗೆಸಿಎಂ ಬೊಮ್ಮಾಯಿ ಗಮನ ಹರಿಸಿಲ್ಲ. ಇದರಿಂದ ಸಿಎಂ ಬೊಮ್ಮಾಯಿ ಬಗ್ಗೆ ಸರ್ಕಾರಿ ನೌಕರರು ಅಸಮಧಾನ ವ್ಯಕ್ತಪಡಿಸುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತವಾಗುತ್ತಿದೆ.

ಇನ್ನೂ ಬಿಜೆಪಿಯ ಈ ವೈಫಲ್ಯವನ್ನು ದಾಳವಾಗಿ ಬಳಸಲು ಮುಂದಾಗಿರೋ ಕಾಂಗ್ರೆಸ್ ಸರ್ಕಾರಿ ನೌಕರರ ಮತ ಪಡೆಯಲು ತಮ್ಮ ಸರ್ಕಾರ ಬಂದ್ರೆ ವೇತನ ಆಯೋಗ ಜಾರಿ ಮಾಡುವ ಭರವಸೆ ನೀಡಲು ಮುಂದಾಗಿದೆ.ಇದಕ್ಕಾಗಿ ಈಗಾಗಲೇ ವೇತನ ಆಯೋಗ ರಚನೆ ವಿಚಾರವನ್ನು ಪ್ರಣಾಳಿಕೆಗೆ ಸೇರಿಸಲು ಚಿಂತನೆ ನಡೆಸಿದೆ.

ಇದನ್ನೂ ಓದಿ : Meditation: ಪ್ರತಿದಿನ ವಿದ್ಯಾರ್ಥಿಗಳಿಂದ ಕಡ್ಡಾಯವಾಗಿ 10 ನಿಮಿಷ ಧ್ಯಾನ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳಿ: ಸಚಿವ ಬಿ.ಸಿ.ನಾಗೇಶ್

ಇದನ್ನೂ ಓದಿ : Teachers Singapore Tour Offers : 100% ಫಲಿತಾಂಶ ಕೊಟ್ರೆ, ಸಿಂಗಾಪುರ ಟೂರ್ : ಶಿಕ್ಷಕರಿಗೆ ಬಿಗ್ ಆಫರ್

7th Pay Commission Karnataka CM Basavaraj Bommai forgot

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular