BBMP encroachment : ರಾಜಕಾಲುವೆ ಆಯ್ತು ಈಗ ಬೀದಿ ಬದಿ ವ್ಯಾಪಾರಿಗಳ ಸರದಿ: ಒತ್ತುವರಿ ತೆರವಿಗೆ ಸಜ್ಜಾದ ಬಿಬಿಎಂಪಿ

ಬೆಂಗಳೂರು : BBMP encroachment: ನಗರದಲ್ಲಿ ರಾಜಕಾಲುವೆ, ಕೆರೆ ಒತ್ತುವರಿ ಸಮಸ್ಯೆ ಇಂದು ನಿನ್ನೆಯದಲ್ಲ. ಹೀಗಾಗಿ ಈ ಸಮಸ್ಯೆಗಳನ್ನು ನಿಭಾಯಿಸಲು ಬಿಬಿಎಂಪಿ ಹರಸಾಹಸ ಪಡುತ್ತಲೇ ಇದೆ. ಈಗ ಈ ಸಾಲಿಗೆ ಬೀದಿಬದಿ ಒತ್ತುವರಿ ಸಹ ಸೇರ್ಪಡೆಗೊಂಡಿದೆ. ನಗರದಲ್ಲಿ ಎಲ್ಲ ರಸ್ತೆಗಳು ಬೀದಿ ಬದಿ ವ್ಯಾಪಾರಿಗಳಿಂದ ಒತ್ತುವರಿಗೊಂಡಿದೆ. ಹೀಗಾಗಿ ಪಾದಚಾರಿ ಗಳು ಪರದಾಡುವ ಸ್ಥಿತಿ ಇದೆ. ಇದನ್ನು ಮನಗಂಡ ಬಿಬಿಎಂಪಿ ಈಗ ಬೀದಿಬದಿ ವ್ಯಾಪಾರಿಗಳ ಒತ್ತುವರಿ ತೆರವಿಗೆ ಸಿದ್ಧತೆ ನಡೆಸಿದ್ದು, ಬಿಬಿಎಂಪಿ ನಡೆಗೆ ಆಕ್ಷೇಪ ವ್ಯಕ್ತವಾಗೋ ನೀರಿಕ್ಷೆ ಕೂಡ ಇದೆ.

ಹೌದು ಕೆಲ ದಿನಗಳ ಹಿಂದಷ್ಟೇ ರಾಜಕಾಲುವೆ ಒತ್ತುವರಿ ಸಾಹಸಕ್ಕೆ ಮುಂದಾಗಿ ಕೈ ಸುಟ್ಟು ಕೊಂಡಿರೋ ಬಿಬಿಎಂಪಿ ಈಗ ಬೀದಿಬದಿ ವ್ಯಾಪಾರಿಗಳ ಮೇಲೆ ಕೆಂಗಣ್ಣು ಬೀರಿದ್ದು ಒತ್ತುವರಿ ತೆರವಿಗೆ ಸಿದ್ಧವಾಗ್ತಿದೆ. ನಗರದಲ್ಲಿ ತಳ್ಳುಗಾಡಿ ಸೇರಿದಂತೆ ವಿವಿಧ ರೀತಿಯಲ್ಲಿ ಬೀದಿ ಬದಿಗಳನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಸರ್ವೇ ಮಾಡುವಂತೆ ಬಿಬಿಎಂಪಿ ಸೂಚಿಸಿದೆ. ಬೀದಿ ಬದಿ ವ್ಯಾಪಾರಿಗಳ ಬಗ್ಗೆ ಹೊಸ ಸರ್ವೇ ನಡೆಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಂದ ರಸ್ತೆ ಮೂಲಭೂತ ಸೌಕರ್ಯ ವಿಭಾಗಕ್ಕೆ ಸೂಚನೆ ಬಂದಿದೆ.

2017ರಲ್ಲಿ ಬಿಬಿಎಂಪಿ ಬೀದಿಬದಿ ವ್ಯಾಪಾರಿಗಳ ಸರ್ವೇ ನಡೆಸಿ ಮಾಹಿತಿ ಕಲೆ ಹಾಕಿತ್ತು. ಈ ವೇಳೆ ನಗರದಲ್ಲಿ 1 ಲಕ್ಷಕ್ಕೂ ಅಧಿಕ ಬೀದಿಬದಿ ವ್ಯಾಪಾರಿಗಳು ಇರೋ ಮಾಹಿತಿ ಲಭ್ಯವಾಗಿತ್ತು. ಈ ಪೈಕಿ 25 ಸಾವಿರ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಿದ್ದ ಬಿಬಿಎಂಪಿ ಅಧಿಕೃತ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿತ್ತು. ಈಗ ನಗರದ 1,400 km ಉದ್ದದ ಮುಖ್ಯ ರಸ್ತೆ ಬದಿಯಲ್ಲಿ ಇರುವ ವ್ಯಾಪಾರಿಗಳ ತೆರವಿಗೆ ಯೋಚಿಸಿರುವ ಪಾಲಿಕೆ, ಅದಕ್ಕಾಗಿ ಸರ್ವೇ ಮಾಡಲು ಸೂಚಿಸಿದೆ. ಪಾದಚಾರಿಗಳಿಗೆ ಸಮಸ್ಯೆ ಆಗ್ತಿದೆ ಎಂಬ ನೆಪದಲ್ಲಿ ಬೀದಿಬದಿ ವ್ಯಾಪಾರಿಗಳ ತೆರವಿಗೆ ಸಿದ್ಧತೆ ನಡೆದಿದ್ದು, ಬೀದಿಬದಿ ವ್ಯಾಪಾರಿಗಳಿಗೆ ಸಬ್ ಆರ್ಟಿರಿಯಲ್ ರಸ್ತೆಯಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡುವುದಾಗಿ ಬಿಬಿಎಂಪಿ ಹೇಳಿಕೊಂಡಿದೆ.

ನಗರದ 8 ವಲಯಗಳ ಬೀದಿಬದಿ ವ್ಯಾಪಾರಿಗಳಿಗೆಂದೇ ಮಾರ್ಕೆಟ್ ನಿರ್ಮಾಣ‌ ಮಾಡಲೂ ಬಿಬಿಎಂಪಿ ಚಿಂತನೆ ನಡೆಸಿದ್ದು, ಈಗಾಗಲೇ ಎಲ್ಲಾ ವಲಯಗಳಲ್ಲಿನ RI ವಿಭಾಗದ ಇಂಜಿನಿಯರ್ ಗಳಿಗೆ ಮಾಹಿತಿ ಕಲೆಹಾಕುವಂತೆ ಸೂಚನೆ ನೀಡಿದೆಯಂತೆ. ಆದರೆ ಬಿಬಿಎಂಪಿ ನಿರ್ಧಾರಕ್ಕೆ ಬೀದಿಬದಿ ವ್ಯಾಪಾರಿಗಳಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ದೊಡ್ಡ ದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್, ಮಾಲ್ ಗಳ ಒತ್ತುವರಿ ನೋಡಲು ಬಿಬಿಎಂಪಿಗೆ ಧೈರ್ಯವಿಲ್ಲ. ದಿನಗೂಲಿ ನೌಕರರಂತೆ ದುಡಿಯುವ ಬೀದಿಬದಿಯಲ್ಲಿ ವ್ಯಾಪಾರ ಮಾಡೋರ ಹೊಟ್ಟೆ ಮೇಲೆ ಬಿಬಿಎಂಪಿ ಗದಾ ಪ್ರಹಾರ ಮಾಡ್ತಿದೆ ಎಂದು ಬೀದಿಬದಿ ವ್ಯಾಪಾರಿಗಳು ಆಕ್ರೋಶ ಹೊರಹಾಕಿದ್ದಾರೆ.ಅಲ್ಲದೇ ಬಿಬಿಎಂಪಿ ಸಪರೇಟ್ ಜಾಗ ಮಾಡಿಕೊಟ್ಟರೆ ನಮ್ಮನ್ನು ಹುಡುಕಿಕೊಂಡು ಗ್ರಾಹಕರು ಬರಲ್ಲ. ಮೊದಲೇ ಕರೋನಾದಿಂದ ಕಂಗೆಟ್ಟ ನಮಗೆ ಬಿಬಿಎಂಪಿ ಕೂಡ ಬರೆ ಎಳಿತೀದೆ ಎಂದು ನೋವು ಹೊರಹಾಕಿದ್ದಾರೆ.

ಇದನ್ನೂ ಓದಿ : Tracking Device :ವಾಹನ ಸವಾರರ ಗಮನಕ್ಕೆ : ವಾಹನಗಳಲ್ಲಿ ಇನ್ಮುಂದೆ ಟ್ರ್ಯಾಕಿಂಗ್ ಡಿವೈಸ್ ಕಡ್ಡಾಯ

ಇದನ್ನೂ ಓದಿ : Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆಯ ಆರ್ಭಟ ; 2 ದಿನ ಯೆಲ್ಲೋ ಅಲರ್ಟ್‌ ಘೋಷಣೆ

BBMP geared up to clear the encroachment of street vendors

Comments are closed.