ಸೋಮವಾರ, ಏಪ್ರಿಲ್ 28, 2025
HomekarnatakaPM Modi Surprise Gift : ಮೋದಿ ಭೇಟಿ ಮೇಲೆ ನೀರಿಕ್ಷೆಯ ಲಿಸ್ಟ್ : ರಾಜ್ಯಕ್ಕೆ...

PM Modi Surprise Gift : ಮೋದಿ ಭೇಟಿ ಮೇಲೆ ನೀರಿಕ್ಷೆಯ ಲಿಸ್ಟ್ : ರಾಜ್ಯಕ್ಕೆ ಘೋಷಣೆಯಾಗುತ್ತಾ ಏಮ್ಸ್ ?

- Advertisement -

ಬೆಂಗಳೂರು : ಬಹು ವರ್ಷದ ಬಳಿಕ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ರಾಜ್ಯದಲ್ಲಿ 2023 ರಲ್ಲಿ ವಿಧಾನಸಭಾ ಚುನಾವಣೆ ಸಿದ್ಧತೆ ನಡೆದಿದೆ. ಇದರ ಜೊತೆಗೆ ಬಿಬಿಎಂಪಿ ಚುನಾವಣೆಯೂ ಸಮೀಪಿಸುತ್ತದೆ. ಹೀಗಾಗಿ ಮೋದಿ ಆಗಮನದ ಮೇಲೆ‌ ನೀರಿಕ್ಷೆ (PM Modi Surprise Gift) ಹೆಚ್ಚಿದೆ. ಅದರಲ್ಲೂ ರಾಜ್ಯದ ಮಹತ್ವದ ಬೇಡಿಕೆ ಏಮ್ಸ್ ಗೆ ಒಪ್ಪಿಗೆ ಘೋಷಣೆಯಾಗಬಹುದೆಂಬ ನೀರಿಕ್ಷೆಯಲ್ಲಿದ್ದಾರೆ ಬಿಜೆಪಿಗರು.

ಕಳೆದ ಎರಡು ವರ್ಷಗಳಿಂದ ಜನರನ್ನು ಕಾಡಿದ ಕರೋನಾ ಕಾರ್ಮೋಡದಿಂದಾಗಿ ಜನರು ಸಂಕಟದಲ್ಲಿದ್ದರು. ಹೀಗಾಗಿ ರಾಜಕೀಯ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಆದರೆ ಈಗ ಕರೋ‌ನಾ ಪ್ರಭಾವ ತಗ್ಗುತ್ತಿದ್ದಂತೆ ಮತ್ತೆ ರಾಜಕೀಯ ಗರಿಗೆದರಿದೆ. ಅದರಲ್ಲೂ ರಾಜ್ಯದಲ್ಲಿ ಬಹು ವರ್ಷಗಳ ಬಳಿಕ ಪ್ರಧಾನಿ ಮೋದಿ ಯೋಗಾ ದಿನಾಚರಣೆಯ ನೆಪದಲ್ಲಿ ಭೇಟಿ ಕೊಡುತ್ತಿದ್ದಾರೆ.

ಹೀಗಾಗಿ ರಾಜ್ಯಕ್ಕೆ ದೆಹಲಿ ಮಾದರಿಯಲ್ಲಿ ಒಂದು ಏಮ್ಸ್ ಬೇಕೆಂಬ ಕೂಗಿಗೆ ಮತ್ತಷ್ಟು ಬಲಬಂದಿದೆ. ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನ ಸೇರಿದಂತೆ ಹಲವು ಕಾರಣಕ್ಕೆ ಏಮ್ಸ್ ಗೆ ಬೇಡಿಕೆ ಹೆಚ್ಚಿದೆ‌. ಈ ಬಗ್ಗೆ ಗಂಭೀರವಾಗಿ ಪ್ರಯತ್ನಿಸುತ್ತಿರುವ ರಾಜ್ಯದ ಆರೋಗ್ಯ ಸಚಿವ ಡಾ.ಸುಧಾಕರ್ ಈಗಾಗಲೇ ಕೇಂದ್ರದ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಅವರಿಗೂ ಮನವಿ ಸಲ್ಲಿಸಿದ್ದಾರೆ.

ಚುನಾವಣೆ ಮುಂದಿಟ್ಟುಕೊಂಡು ರಾಜ್ಯಕ್ಕೆ ಬರುತ್ತಿರುವ ಮೋದಿ ಈ ಬೇಡಿಕೆಯನ್ನು ಈಡೇರಿಸಬಹುದು ಎಂಬುದು ಸಾರ್ವಜನಿಕರು ಹಾಗೂ ಸ್ವತಃ ಬಿಜೆಪಿಗರ ನೀರಿಕ್ಷೆ.
ಇದಲ್ಲದೇ,

  • ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಲು ಎಲ್ಲಾ ಅರ್ಹತೆ ಹೊಂದಿದೆ. ಇದಕ್ಕೆ ಪೂರಕವಾಗಿ ಅಗತ್ಯ ಅನುಮೋದನೆಗಳನ್ನು ಕೇಂದ್ರ ಜಲ ಆಯೋಗ ಮತ್ತು ಕೇಂದ್ರ ಸರಕಾರದ ನಾನಾ ನಿರ್ದೇಶನಾಲಯಗಳಿಂದ ಪಡೆದಿದೆ. ಶೀಘ್ರವಾಗಿ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ ಕೇಂದ್ರದ ಪಾಲಿನ ಅನುದಾನ ನೀಡಬೇಕಿದೆ. ಇದು ಕೂಡ ನೀರಿಕ್ಷಾ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
  • ಮಹದಾಯಿ ಯೋಜನೆಗೂ ಕೇಂದ್ರ ಸರಕಾರದಿಂದ ಅನುಮೋದನೆ ಬಾಕಿ ಇದೆ. ಇದನ್ನು ಮೋದಿ ಘೋಷಿಸಬಹುದೆಂದು ನೀರಿಕ್ಷೆ
  • ಮೈಸೂರಿನಲ್ಲಿ ಯೋಗ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು, ಅಲ್ಲೊಂದು ಯೋಗ ವಿವಿ ಘೋಷಣೆ ಮಾಡಬೇಕೆಂಬ ಬೇಡಿಕೆ ಇದೆ.
  • ಹುಬ್ಬಳ್ಳಿಯಲ್ಲಿ ಕೇಂದ್ರ ಸರಕಾರಿ ಆರೋಗ್ಯ ಸೇವೆಗಳ ಯೋಗಕ್ಷೇಮ ಕೇಂದ್ರ (ಸಿಜಿಎಚ್‌ಎಸ್‌ ವೆಲ್‌ನೆಸ್‌ ಸೆಂಟರ್‌) ತೆರೆಯುವ ಪ್ರಸ್ತಾವಕ್ಕೆ ಸ್ಪಂದನೆ ಸಿಗಬೇಕಿದೆ.
  • ರಾಜ್ಯದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್‌) ತೆರೆಯಲು ಕೇಂದ್ರದ ಅನುಮೋದನೆ ಬೇಕಿದೆ
  • 6.2017-18ನೇ ಸಾಲಿನಿಂದ 2021 – 22ರವರೆಗೆ 6,022.15 ಕೋಟಿ ರೂ. ಹಾಗೂ ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌, ಮೇ ತಿಂಗಳ 5,669.35 ಕೋಟಿ ರೂ. ಜಿಎಸ್‌ಟಿ ಪರಿಹಾರ ಬಾಕಿಯಿದ್ದು, ಒಟ್ಟು 11,691.50 ಕೋಟಿ ರೂ. ಜಿಎಸ್‌ಟಿ ಪರಿಹಾರ ಬರಬೇಕಿದೆ.

ಒಟ್ಟಿನಲ್ಲಿ ಮೋದಿ ಆಗಮನ ಹಾಗೂ ಭೇಟಿಯ ಮೇಲೆ ಬೆಟ್ಟ ದಷ್ಟು ನೀರಿಕ್ಷೆ ಇದ್ದು, ದೇಶದ ದೊರೆ ನಾಡಿಗೆ ಯಾವ ಕೊಡುಗೆ ನೀಡುತ್ತಾರೆ ಕಾದು ನೋಡಬೇಕಿದೆ.

ಇದನ್ನೂ ಓದಿ : ತೀವ್ರ ಆರ್ಥಿಕ ಸಂಕಷ್ಟ : ನಾಳೆಯಿಂದ ಸರ್ಕಾರಿ ಕಚೇರಿ, ಶಾಲೆಗಳು ಬಂದ್

ಇದನ್ನೂ ಓದಿ : Pilot-free Metro Train : ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ: ಇನ್ಮುಂದೇ ಸಂಚರಿಸಲಿದೆ ಪೈಲಟ್ ರಹಿತ ಮೆಟ್ರೋ ರೈಲು

AIMS Karnataka PM Modi Surprise Gift

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular