Amit Shah : ಬಿಜೆಪಿಯಲ್ಲಿ ಟಿಕೇಟ್ ಫೈಟ್ ಗೆ ಅಮಿತ್‌ ಶಾ ಬ್ರೇಕ್, ಪಕ್ಷದ ಅಭ್ಯರ್ಥಿ ಗೆಲುವಿಗೆ ದುಡಿಯಿರಿ ಎಂದ ಚುನಾವಣಾ ಚಾಣಾಕ್ಯ

ಬೆಂಗಳೂರು : Amit Shah : ರಾಜ್ಯ ವಿಧಾನಸಭಾ ಚುನಾವಣೆಗಾಗಿ ಸದ್ಯ 100 ಕ್ಕೂ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರೋ ಕಾಂಗ್ರೆಸ್ ನಲ್ಲಿ ಬಂಡಾಯ ಭುಗಿಲೆದ್ದಿದೆ. ಹಲವು ಟಿಕೇಟ್ ಅಕಾಂಕ್ಷಿಗಳು ಸ್ವತಂತ್ರವಾಗಿ ಸ್ಪರ್ಧಿಸೋ ಲೆಕ್ಕಾಚಾರದಲ್ಲಿದ್ದಾರೆ. ಇದನ್ನು ನೋಡಿ ಎಚ್ಚೆತ್ತುಕೊಂಡಿರೋ ಬಿಜೆಪಿ ಹೈಕಮಾಂಡ್ ಟಿಕೇಟ್ ಲಿಸ್ಟ್ ಬಿಡುಗಡೆಗೂ ಮುನ್ನವೇ ಒಗ್ಗಟ್ಟಿನ ಮಂತ್ರ ಜಪಿಸಿದ್ದು, ಟಿಕೆಟ್ ಗದ್ದಲ ಬೇಡ, ಪಕ್ಷ ಸೂಚಿಸಿದ ಅಭ್ಯರ್ಥಿ ಗಳ ಗೆಲ್ಲಿಸಲು ಒಟ್ಟಾಗಿ ಕೆಲಸ ಮಾಡಿ ಎಂದು ಅಮಿತ್‌ ಶಾ (Amit Shah) ಖಡಕ್ ಸೂಚನೆ ರವಾನಿಸಿದ್ದಾರೆ.

ಹೌದು, ಬಿಜೆಪಿಯಲ್ಲೂ ಮಕ್ಕಳಿಗೆ, ಆಪ್ತರಿಗೆ, ನೆಂಟರಿಗೆ, ಬಂಧುಗಳಿಗೆ ಟಿಕೇಟ್ ಕೊಡಿಸೋ ಸರ್ಕಸ್ ಜೋರಾಗಿದೆ. ಈ ಮಧ್ಯೆ ಟಿಕೆಟ್ ಫೈಟ್ ಬಿದ್ದ ನಾಯಕರಿಗೆ ಹಾಗೂ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸಲು ಕಸರತ್ತು ಮಾಡ್ತಿರುವ ನಾಯಕರಿಗೆ ರಾಜ್ಯ ಪ್ರವಾಸ ಕೈಗೊಂಡಿದ್ದ ಅಮಿತ್ ಶಾ ಸಖತ್ ಖಡಕ್ ಸೂಚನೆ ಹಾಗೂ ಎಚ್ಚರಿಕೆ ನೀಡಿರೋ ಸಂಗತಿ ಬಿಜೆಪಿ ಆಂತರಿಕ ಮಾಹಿತಿಯಿಂದ‌ ಖಚಿತವಾಗಿದೆ. ಕೋರ್ ಕಮಿಟಿ ಸಭೆಯಲ್ಲಿ ಎಲ್ಲರೊಂದಿಗೂ ಮಾತನಾಡಿದ ಶಾ, ಸೂಕ್ಷ್ಮವಾಗಿ ಇಬ್ಬರು ನಾಯಕರು ಸೇರಿ ಉಳಿದವರಿಗೂ ಖಡಕ್ ಸಂದೇಶ ರವಾನಿಸಿದ್ದಾರಂತೆ. ಬೆಳಗಾವಿ ನಾಯಕರಾದ ಲಕ್ಷ್ಮಣ ಸವದಿ ಹಾಗೂ ರಮೇಶ್ ಜಾರಕಿಹೊಳಿಗೆ ಸೂಚನೆ ನೀಡಿದ್ದು ಅದೇ ಸೂಚನೆಯಲ್ಲೇ ಇತರರಿಗೂ ಖಡಕ್ ವಾರ್ನಿಂಗ್ ರವಾನಿಸಿದ್ದಾರಂತೆ.

ಚುನಾವಣಾ ಪ್ರಚಾರ ಸಮಿತಿ ಸಭೆಯಲ್ಲಿ ಅಮಿತ್ ಶಾ ಮಾತನಾಡಿದ್ದು, ರಾಜ್ಯದಲ್ಲಿ ಪಕ್ಷ ಗೆಲ್ಲುವ ಎಲ್ಲ ರೀತಿಯ ವಾತಾವರಣ ನಿರ್ಮಾಣ ಆಗಿದೆ. ಪಕ್ಷದ ಸಂಘಟನೆ ಕೂಡ ಚೆನ್ನಾಗಿ ಆಗ್ತಿದೆ. ನರೇಂದ್ರ ಮೋದಿಯವರ ಶಕ್ತಿ ಕೂಡ ಹೆಚ್ಚಾಗ್ತಿದೆ. ಇದರಿಂದ ಚುನಾವಣೆ ಯಲ್ಲಿ ನಾವು ಗುರಿ ಹೊಂದಿದ ಸೀಟು ತಲುಪಬಹುದು.ಮೋದಿಯ ಪದೇ ಪದೇ ಭೇಟಿಯಿಂದ ಕಾರ್ಯಕರ್ತರಲ್ಲೂ ಉತ್ಸಾಹ ಹೆಚ್ವಾಗಿದೆ. ಆ ಉತ್ಸಾಹದೊಂದಿಗೆ ಕಾರ್ಯಕರ್ತರ ಜೊತೆ ಒಟ್ಟಾಗಿ ಕ್ಷೇತ್ರದಲ್ಲಿ ಕೆಲಸ ಮಾಡಿ.ನಮಗೆ ಪಕ್ಷದ ಕಾರ್ಯಕರ್ತರೇ ಹೆಚ್ಚು ಶಕ್ತಿ.ಅಭ್ಯರ್ಥಿ ಬಗ್ಗೆ ಅವರ ಮಾತುಗಳನ್ನು ಪರಿಗಣಿಸಿ.ಅಂತಿಮವಾಗಿ ಪಕ್ಷ ಸೂಚಿಸಿದ ಅಭ್ಯರ್ಥಿಗಳನ್ನು ಕಾರ್ಯಕರ್ತರ ಜೊತೆಗೂಡಿ ಗೆಲ್ಲಿಸುವ ಕೆಲಸ ಮಾಡಿ ಎಂದಿದ್ದಾರಂತೆ.

ಅಲ್ಲದೇ, ನಮ್ಮ ನಮ್ಮವರಿಗೆ ಟಿಕೆಟ್ ಕೊಡಿ ಎಂದು ಗೊಂದಲ ಮಾಡಿಕೊಳ್ಳಬೇಡಿ.ಯಾರೇ ಟಿಕೆಟ್ ಕೇಳಿದ್ರು, ಅಂತಿಮವಾಗಿ ಟಿಕೆಟ್ ಆಯ್ಕೆ ಮಾಡೋದು ನಾವು ಅದು ಬಿಟ್ಟು ತಮ್ಮವರಿಗೆ ಟಿಕೆಟ್ ಕೊಡಿ ಎಂದು ಹೇಳೋದು ಸರಿಯಲ್ಲ. ಸಭೆಯಲ್ಲಿ ಸೂಕ್ಷ್ಮವಾಗಿ ಎಲ್ಲ ನಾಯಕರಿಗೂ ಖಡಕ್ ಸೂಚನೆ ನೀಡಿರುವ ಅಮಿತ್ ಶಾ ರಮೇಶ್ ಜಾರಕಿಹೊಳಿ, ಸವದಿ ಅಲ್ಲದೇ ಬೇರೆ ಬೇರೆ ನಾಯಕರಿಗೂ ಹಟಕ್ಕೆ ಹೈಕಮಾಂಡ್ ಬಳಿ ಬೆಲೆ ಸಿಗೋದಿಲ್ಲ ಎಂಬ ಪರೋಕ್ಷ ಸಂದೇಶ ನೀಡಿದ್ದಾರೆ ಎಂದು ಬಿಜೆಪಿ ಮೂಲಗಳೇ ಹೇಳ್ತಿವೆ.

ಇದನ್ನೂ ಓದಿ : ಬಿಜೆಪಿಯಲ್ಲಿ ಬಿ.ವೈ.ವಿಜಯೇಂದ್ರಗೆ ಡಿಮ್ಯಾಂಡೋ ಡಿಮ್ಯಾಂಡ್: ಪ್ರಚಾರಕ್ಕೆ ಕಳುಹಿಸುವಂತೆ ಅಮಿತ್ ಶಾ ಬಳಿ ಶಾಸಕರ ಮನವಿ

ಇದನ್ನೂ ಓದಿ : Aadhaar PAN Linking:ನಿಮ್ಮ ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಆಗಿದೆಯೇ ? ಪರಿಶೀಲಿಸುವುದು ಹೇಗೆ, ಇಲ್ಲಿದೆ ಸಂಪೂರ್ಣ ಮಾಹಿತಿ

Comments are closed.