ತುಳುನಾಡಿನ ಗುಳಿಗ ದೈವಕ್ಕೆ ಅವಮಾನ : ಗೃಹ ಸಚಿವ ಆರಗ ಹೇಳಿಕೆಗೆ ಬಾರೀ ಆಕ್ರೋಶ

ಶಿವಮೊಗ್ಗ : (Araga’s controversial statement) ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ರಾಜಕಾರಣಿಗಳು, ಸಂಸದರು ಹಾಗೂ ಸಚಿವರು ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗುತ್ತಾರೆ. ಇತ್ತೀಚೆಗೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಮಿಥುನ್‌ ರೈ ಉಡುಪಿ ಮಠದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಇದಾದ ಬಳಿಕ ಅಝಾನ್‌ ಬಗ್ಗೆ ಹೇಳಿಕೆ ನೀಡಿ ಕೆ. ಈಶ್ವರಪ್ಪನವರು ಸುದ್ದಿಯಾಗಿದ್ದರು. ಇದೀಗ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕರಾವಳಿಯ ಪ್ರಸಿದ್ದ ದೈವವಾದ ಗುಳಿಗ ದೈವದ ಬಗ್ಗೆ ಸಮಾವೇಶವೊಂದರಲ್ಲಿ ಹೆಳಿಕೆಯನ್ನು ನೀಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಶಿವಮೊಗ್ಗದಲ್ಲಿ ಹಮ್ಮಿಕೊಂಡಿದ್ದ ಸಮಾವೇಶವೊಂದಕ್ಕೆ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅತಿಥಿಯಾಗಿ ಬಂದಿದ್ದರು. ಸಚಿವರು ಸಮಾವೇಶಕ್ಕೆ ಬರುವ ಹಿಂದಿನ ದಿನ ಆ ಊರಿನಲ್ಲಿ ಕರಾವಳಿಯ ಶಕ್ತಿಯುತ, ತುಳುವರ ಆರಾಧ್ಯ ದೈವ ಗುಳಿಗನ ಬಗ್ಗೆ ಸಾರುವ, ಎಲ್ಲಡೆ ಅದ್ಭುತ ಪ್ರದರ್ಶನವನ್ನು ಕಂಡಿದ್ದ ಶಿವದೂತ ಗುಳಿಗೆ ನಾಟಕ ಪ್ರದರ್ಶನಗೊಂಡಿತ್ತು. ನಾಟಕ ಪ್ರದರ್ಶನದ ಬಗ್ಗೆ ಸುದ್ದಿಗಾಗಿ ರಸ್ತೆಗಳ ಬದಿಯಲ್ಲಿ ಬ್ಯಾನರ್‌ ಗಳನ್ನು ಅಳವಡಿಸಲಾಗಿದ್ದು, ಇದನ್ನು ಗೃಹ ಸಚಿವರು ಗಮನಿಸಿದ್ದರು. ಬಳಿಕ ಸಮಾವೇಶದಲ್ಲಿ ಭಾಗಿಯಾಗಿದ್ದ ಸಚಿವರು ಗುಳಿಗ ದೈವದ ಬಗ್ಗೆ ಅವಮಾನವಾಗುವಂತಹ ಹೇಳಿಕೆಯೊಂದನ್ನು ನೀಡಿದ್ದಾರೆ.

ಬಿಜೆಪಿ ಸಮಾವೇಶ ಎಂದು ಹೇಳಲಾಗುತ್ತಿರುವ ಸಮಾರಂಭದಲ್ಲಿ ಭಾಷಣ ಮಾಡುವ ವೇಳೆ ” ವಾಲ್‌ ಪೋಸ್ಟರ್‌ ನಲ್ಲಿ ಗುಳಿಗೆ ಗುಳಿಗೆ ಅಂತ ಹಾಕಿದ್ದಾರೆ. ಇದು ಬಹಳ ಅಪಾಯ, ಇವರು ಯಾವ ಗುಳಿಗೆ ಕೊಡ್ತಾರೆ ಅಂತ ಗೊತ್ತಿಲ್ಲ. ಬೇದಿ ಮಾತ್ರೆ ಕೊಟ್ಟರು ಕೊಡಬಹುದು.” ಎಂಬ ಹೇಳಿಕೆಯನ್ನು ನೀಡಿದ್ದು, ಗುಳಿಗ ದೈವಕ್ಕೆ ಅವಮಾನವಾಗುವಂತಹ ಈ ಹೇಳಿಕೆಗೆ ಬಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು, ತುಳುವರ ಆರಾಧ್ಯ ದೈವ ಗುಳಿಗನನ್ನು ಜಾಪಾಳ ಮಾತ್ರೆಗೆ ಹೋಲಿಸಿದ ಈತನನ್ನು ಗುಳಿಗನೇ ನೋಡಿಕೊಳ್ಳುತ್ತಾನೆ ಎನ್ನುವಂತಹ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ : Minister Somanna-CM Bommai: ಸಚಿವ ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ವಿಚಾರ: ಮಹತ್ವದ ಹೇಳಿಕೆ ನೀಡಿದ ಸಿಎಂ ಬೊಮ್ಮಾಯಿ

ಇದನ್ನೂ ಓದಿ : ಅಝಾನ್ ಬಗ್ಗೆ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ

ಬ್ಲಾಕ್‌ ಬಸ್ಟರ್‌ ಹಿಟ್‌ ಸಿನಿಮಾ ಕಾಂತಾರದಲ್ಲಿ ಗುಳಿಗ ದೈವದ ಬಗ್ಗೆ ಅದ್ಭುತವಾಗಿ ಸಮಾಜಕ್ಕೆ ತೋರ್ಪಡಿಸಲಾಗಿತ್ತು. ಚಿತ್ರ ಪ್ರದರ್ಶನಗೊಂಡ ಮೇಲೆ ಅನೇಕ ಸಿನಿಮಾ ಕಲಾವಿದರು, ರಾಜಕಾರಣಿಗಳು ಸೇರಿದಂತೆ ಹಲವರು ತುಳುನಾಡ ಆರಾಧ್ಯ ದೈವಗಳ ಬಗ್ಗೆ ಅಪಾರ ಭಕ್ತಿಯನ್ನು ಹೊಂದಿದ್ದಾರೆ. ಇಡೀ ಪ್ರಪಂಚವೇ ತುಳುನಾಡ ದೈವದ ಬಗ್ಗೆ ಹೊಗಳಿಕೆಯ ಮಾತನ್ನಾಡುತ್ತಿರುವಾಗ ರಾಜ್ಯದ ಒಬ್ಬ ಪ್ರತಿಷ್ಠಿತ ರಾಜಕಾರಣಿ, ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರರವರು ಈ ರೀತಿಯ ಅವಹೇಳನಕಾರಿ ಹೇಳಿಕೆಯನ್ನು ನೀಡಿರುವುದು ತುಳುನಾಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

Araga’s controversial statement: Insult to Guliga God of Tulunad: Outrage over Home Minister Araga’s statement

Comments are closed.