ಗುರಮಿಠಕಲ್ : ತಂದೆ, ತಾಯಿಯನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಅರುಣ್ ಕುಮಾರ ಕಲ್ಗದ್ದೆ (Arun kumara Kalgadde ) ಅವರು ಶೈಕ್ಷಣಿಕವಾಗಿ ದತ್ತು ಪಡೆಯುವ ಮೂಲಕ ಆಸರೆಯಾಗಿದ್ದಾರೆ. ಇಬ್ಬರು ಮಕ್ಕಳ ಸಂಪೂರ್ಣ ಶೈಕ್ಷಣಿಕ ವೆಚ್ಚವನ್ನು ಭರಿಸುವ ಕಾರ್ಯಕ್ಕೆ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಗುರಮಿಠಕಲ್ ತಾಲ್ಲೂಕಿನ ಮಾದ್ವಾರ ಗ್ರಾಮಕ್ಕೆ ಭೇಟಿ ನೀಡಿದ ಗ್ರಾಮಸ್ಥರ ಸಮಸ್ಯೆ ಆಲಿಸಿದ ಸಂದರ್ಭದಲ್ಲಿ ಗ್ರಾಮದಲ್ಲಿ ಇಬ್ಬರು ಅನಾಥ ವಿದ್ಯಾರ್ಥಿಗಳು ಅರುಣ್ ಕುಮಾರ್ ಅವರ ಕಣ್ಣಿಗೆ ಬಿದ್ದಿದ್ದಾರೆ. ಶ್ರೀನಿವಾಸ ಎಂಬ ಬಾಲಕ ತಾಯಿಯನ್ನು ಕಳೆದುಕೊಂಡಿದ್ದರೆ, ಶಿವಕುಮಾರ್ ಎಂಬಾತ ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದ. ಬಡತನದಲ್ಲಿಯೇ ಬೇಯುತ್ತಿದ್ದ ಈ ಮಕ್ಕಳಿಗೆ ಶಿಕ್ಷಣ ಅನ್ನೋದು ಮರಿಚಿಕೆಯಾಗಿತ್ತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸುವ ಸಲುವಾಗಿ ಅರುಣ್ ಕುಮಾರ್ ಕಲ್ಗದ್ದೆ (Arun kumara Kalgadde) ಅವರು ಇಬ್ಬರು ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಪಡೆದಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಅರುಣ್ ಕುಮಾರ್ (Arun kumara Kalgadde) ಅವರ ಕಾರ್ಯಕ್ಕೆ ಮಾದ್ವಾರ ಗ್ರಾಮದ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಯಾದಗಿರಿ ತಾಲ್ಲೂಕಿನ ಗೊಂದೆಡಗಿ ಗುರಮಿಠಕಲ್ ತಾಲ್ಲೂಕಿನ ಯಲಸತ್ತಿ , ಕೊಂಕಲ, ಚೆಲೇರಿ ಗ್ರಾಮಗಳಿಗೆ ಭೇಟಿ ನೀಡಿ ಹಿಂದುಳಿದ ಜಾತಿಗಳ ಜನರ ಅಹವಾಲುಗಳನ್ನು ಸ್ವೀಕರಿಸಿ ಕುಂದು ಕೊರತೆಗಳನ್ನು ವಿಚಾರಿಸಿದ್ದಾರೆ.

ಚಲೇರಿ ಗ್ರಾಮದ ಬಹುದಿನಗಳ ಸಮಸ್ಯೆಯಾದ ಗಡಿ ಒತ್ತುವರಿ ಮತ್ತು ದೌರ್ಜನ್ಯ ದಿಂದ ತೆಲಂಗಾಣದವರು ಅಕ್ರಮ ಮರಳು ಸಾಗಣಿಕೆಯನ್ನು ನಿಲ್ಲಿಸಲು ಸರಕಾರದ ಮಟ್ಟದಲ್ಲಿ ಪ್ರಾಮಣಿಕ ಪ್ರಯತ್ನ ಮಾಡುತ್ತೇನೆ. ಅಲ್ಲದೇ ಇದಕ್ಕೆ ಸಂಭಂದಿಸಿದ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳಲ್ಲಿ ಮನವಿ ಮಾಡುವ ಭರವಸೆಯನ್ನು ನೀಡಿದ್ದಾರೆ.
ಇದನ್ನೂ ಓದಿ : ಲಂಬಾಣಿ ಸಮುದಾಯದ ಮಕ್ಕಳನ್ನು ಕಾಡುತ್ತಿದೆ ಅಪೌಷ್ಠಿಕತೆ : ಸರಕಾರದ ಗಮನ ಸೆಳೆದ ಅರುಣ್ ಕುಮಾರ್

ಇದೇ ಸಂದರ್ಭದಲ್ಲಿ ವಿಶ್ವಮಾನವ ಫೌಂಡೇಶನ್ ಸಂಸ್ಥಾಪಕರಾದ ಚಂದ್ರಾವತಿ ಎಸ್. ಅವರು ಮಾತನಾಡಿ ಈ ಇಬ್ಬರ ವಿದ್ಯಾರ್ಥಿಗಳು ಯೋಗ ಕ್ಷೇಮವನ್ನು ನಮ್ಮ ವಿಶ್ವಮಾನವ ಫೌಂಡೇಶನ್ ನೋಡಿಕೊಳ್ಳುತ್ತದೆ. ಈ ಸಂಧರ್ಭದಲ್ಲಿ ವ್ಯವಸ್ಥಾಪಕ ಪ್ರಕಾಶ ಮೊಗವೀರ , ಅಶ್ವಿತ್ ಪೂಜಾರಿ ಉಪ್ಪಳ, ಶಂಕರ ಕಂದಕೂರ , ಶ್ರೀನಿವಾಸ ಕೇಶ್ವಾರ ,ಶಿವಶಂಕರ ಯಲಸತ್ತಿ, ಜಲ್ಲಪ್ಪ ಚಿಂತನಹಳ್ಳಿ, ಪ್ರಭುಲಿಂಗ ಗೊಂದೆಡಗಿ , ಅಂಜನೇಯ ಕಟ್ಟಿಮನಿ ರಾಂಪೂರ ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ : ಪಂಚಮಸಾಲಿ ಸಮುದಾಯ ಪ್ರವರ್ಗ 2ಎಗೆ ಸೇರ್ಪಡೆ ; ಸಮಗ್ರ ಅಧ್ಯಯನದ ಬಳಿಕ ನಿಷ್ಪಕ್ಷಪಾತ ವರದಿ ನೀಡುತ್ತೇನೆ : ಜಯಪ್ರಕಾಶ್ ಹೆಗ್ಡೆ ಭರವಸೆ
(adopted child of orphans for educationally by Arun kumara Kalgadde)