ಭಾನುವಾರ, ಏಪ್ರಿಲ್ 27, 2025
Homekarnatakaರಾಮಮಂದಿರ ಲೋಕಾರ್ಪಣೆ : ಜನವರಿ 22 ರಂದು ರಜೆ ಘೋಷಿಸಿದ ಕೇಂದ್ರ ಸರಕಾರ

ರಾಮಮಂದಿರ ಲೋಕಾರ್ಪಣೆ : ಜನವರಿ 22 ರಂದು ರಜೆ ಘೋಷಿಸಿದ ಕೇಂದ್ರ ಸರಕಾರ

- Advertisement -

ayodhya ram mandir : ಅಯೋಧ್ಯೆಯ ರಾಮಮಂದಿರ ಲೋಕಾರ್ಪಣೆಗೆ ಇಡೀ ದೇಶವೇ ಕಾತರವಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಸರಕಾರ ಗುಡ್‌ನ್ಯೂಸ್‌ ಕೊಟ್ಟಿದೆ. ಜನವರಿ 22 ರಂದು ಕೇಂದ್ರ ಸರಕಾರಿ ಕಚೇರಿಗಳನ್ನು ಅರ್ಧ ದಿನಗಳ ಕಾಲ ಮುಚ್ಚಲಾಗುವುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಘೋಷಣೆ ಮಾಡಿದ್ದಾರೆ.

ಅಯೋಧ್ಯೆಯಲ್ಲಿ ಜನವರಿ 22 ರಂದು ‘ರಾಮ ಲಲ್ಲಾ ಪ್ರಾಣ ಪ್ರತಿಷ್ಠಾನ’ ಸಮಾರಂಭ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅರ್ಧ ದಿನ ಕಾಲ ಸರಕಾರಿ ಕಚೇರಿಗಳು ಬಂದ್‌ ಆಗಲಿವೆ. ರಾಮಮಂದಿರ ಲೋಕಾರ್ಪಣೆ ಕಾರ್ಯವನ್ನು ಎಲ್ಲರೂ ವೀಕ್ಷಣೆ ಮಾಡಬೇಕು ಅನ್ನೋ ಉದ್ದೇಶದಿಂದಲೇ ಕೇಂದ್ರ ಸರಕಾರ ರಜೆ ಘೋಷಣೆ ಮಾಡಿದೆ.

ಶ್ರೀರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಬುಧವಾರ ರಾತ್ರಿ ರಾಮಲಲ್ಲಾ ಮೂರ್ತಿಯನ್ನು ರಾಮಮಂದಿರದ ಗರ್ಭಗುಡಿಗೆ ತರಲಾಗಿದೆ ಎಂದು ಖಚಿತಪಡಿಸಿದ್ದಾರೆ. ಪ್ರಸ್ತುತ ವಿಗ್ರಹವನ್ನು ‘ಗರ್ಭಗೃಹ’ದಲ್ಲಿ ಇರಿಸಲಾಗಿದೆ.  ಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ಗರ್ಭಗುಡಿಯಲ್ಲಿ ವಿಶೇಷ ಪೂಜೆ ನಡೆಯಿತು. ಗರ್ಭಗುಡಿಯಲ್ಲಿ ವಿಗ್ರಹ ಪ್ರತಿಷ್ಠಾಪನೆ ಗುರುವಾರ ನಡೆಯುವ ನಿರೀಕ್ಷೆಯಿದೆ ಎಂದು ಮಿಶ್ರಾ ಹೇಳಿದರು.

ಇದನ್ನೂ ಓದಿ : ಯುವನಿಧಿ ಯೋಜನೆ : ಅರ್ಜಿ ಸಲ್ಲಿಸಿದ ಎಲ್ಲರಿಗೂ ಸಿಗಲ್ಲ ಯುವನಿಧಿ ಹಣ, ಇಲ್ಲಿದೆ ಯುವನಿಧಿ ಅರ್ಹತಾ ಪಟ್ಟಿ

ಜನವರಿ 22 ರಂದು ನಡೆಯುವ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೂ ಮುನ್ನ ವಿಧಿ ವಿಧಾನಗಳ ಅಂಗವಾಗಿ ಟ್ರಕ್ ಬಳಸಿ ವಿಗ್ರಹವನ್ನು ದೇವಸ್ಥಾನಕ್ಕೆ ಸಾಗಿಸಲಾಯಿತು. ಔಪಚಾರಿಕ ಸಿದ್ಧತೆಯ ಭಾಗವಾಗಿ ಬುಧವಾರ ‘ಕಲಶ ಪೂಜೆ’ ನಡೆಸಲಾಯಿತು. ಅಯೋಧ್ಯೆಯಲ್ಲಿ ರಾಮಮಂದಿರದ ಲೋಕಾರ್ಪಣೆಯನ್ನು ಸಂಭ್ರಮದಿಂದ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಏತನ್ಮಧ್ಯೆ, ಭಾರತೀಯ ವಕೀಲರ ಸಂಘವು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು ಜನವರಿ 22 ಅನ್ನು ರಜೆ ಎಂದು ಘೋಷಿಸುವಂತೆ ಮನವಿ ಮಾಡಿದೆ.

ಇದನ್ನೂ ಓದಿ : ಸುಕನ್ಯಾ ಸಮೃದ್ದಿ ಹಣ ಅವಧಿಗೂ ಮುನ್ನ ವಾಪಾಸ್‌ ಪಡೆಯುವುದು ಹೇಗೆ ? ಇಲ್ಲಿದೆ ಹೊಸ ರೂಲ್ಸ್‌

ತುರ್ತು ವಿಚಾರಣೆಯ ಅಗತ್ಯವಿರುವ ವಿಷಯಗಳನ್ನು ವಿಶೇಷ ವ್ಯವಸ್ಥೆಗಳ ಮೂಲಕ ಇತ್ಯರ್ಥಗೊಳಿಸಬಹುದು ಎಂದು ಪತ್ರದಲ್ಲಿ ತಿಳಿಸಲಾಗಿದೆ. “ಈ ರಜಾದಿನವು ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿಗೆ ಅಯೋಧ್ಯೆಯಲ್ಲಿ ಉದ್ಘಾಟನಾ ಸಮಾರಂಭಗಳು ಮತ್ತು ದೇಶಾದ್ಯಂತ ಇತರ ಸಂಬಂಧಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅಥವಾ ವೀಕ್ಷಿಸಲು ಅನುವು ಮಾಡಿಕೊಡುತ್ತದೆ” ಎಂದು ಬಾರ್ ಕೌನ್ಸಿಲ್ ಅಧ್ಯಕ್ಷರಾಗಿರುವ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ ಹೇಳಿದ್ದಾರೆ.

ಇದನ್ನೂ ಓದಿ :ಯುವನಿಧಿ ಯೋಜನೆ : ಅರ್ಜಿ ಸಲ್ಲಿಸಿದ ಎಲ್ಲರಿಗೂ ಸಿಗಲ್ಲ ಯುವನಿಧಿ ಹಣ, ಇಲ್ಲಿದೆ ಯುವನಿಧಿ ಅರ್ಹತಾ ಪಟ್ಟಿ

ರಜೆ ನೀಡಿದರೆ ದೇಶದಾದ್ಯಂತ ಇರುವ ನ್ಯಾಯಾಧೀಶರು, ವಕೀಲರು ಹಾಗೂ ನ್ಯಾಯಾಲಯದ ನೌಕರರು ರಾಮಮಂದಿರ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮ ಹಾಗೂ ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ. ಈ ಮನವಿಯನ್ನು ಅತ್ಯಂತ ಸಹಾನುಭೂತಿಯಿಂದ ಪರಿಗಣಿಸಿ ಈ ಐತಿಹಾಸಿಕ ಸಂದರ್ಭವನ್ನು ಜನರ ಭಾವನೆಗಳಿಗೆ ಅನುಗುಣವಾಗಿ ಆಚರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪತ್ರದಲ್ಲಿ ಕೋರಲಾಗಿದೆ.

ayodhya ram mandir The central government has declared a holiday on January 22

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular