ಯುವನಿಧಿ ಯೋಜನೆ : ಅರ್ಜಿ ಸಲ್ಲಿಸಿದ ಎಲ್ಲರಿಗೂ ಸಿಗಲ್ಲ ಯುವನಿಧಿ ಹಣ, ಇಲ್ಲಿದೆ ಯುವನಿಧಿ ಅರ್ಹತಾ ಪಟ್ಟಿ

Yuva Nidhi scheme Karnataka : ನಿರುದ್ಯೋಗಿ ಯುವಕ, ಯುವತಿಯರಿಗಾಗಿ ಯುವನಿಧಿ ಯೋಜನೆಯನ್ನು ಜಾರಿಗೊಳಿಸಿದೆ. ಆದರೆ ಯೋಜನೆಗೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಈ ಯೋಜನೆಯ ಲಾಭ ಸಿಗುವುದಿಲ್ಲ.

Yuva Nidhi scheme Karnataka : ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ ಪಂಚ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಗೃಹಲಕ್ಷ್ಮೀ, ಗೃಹಜ್ಯೋತಿ ಬೆನ್ನಲ್ಲೇ ಇದೀಗ ನಿರುದ್ಯೋಗಿ ಯುವಕ, ಯುವತಿಯರಿಗಾಗಿ ಯುವನಿಧಿ ಯೋಜನೆಯನ್ನು ಜಾರಿಗೊಳಿಸಿದೆ. ಆದರೆ ಯೋಜನೆಗೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಈ ಯೋಜನೆಯ ಲಾಭ ಸಿಗುವುದಿಲ್ಲ.

Yuva Nidhi scheme Karnataka Not everyone who applies can get Youth Fund money, here is the eligibility list for Yuva Nidhi
Image Credit to Original Source

ಯುವನಿಧಿ ಯೋಜನೆಯ ಮೂಲಕ ಅರ್ಹ ಫಲಾನುಭವಿಗಳಿಗೆ ಪ್ರತೀ ತಿಂಗಳು ಪದವೀಧರರಿಗೆ ೩೦೦೦ ರೂಪಾಯಿ ಹಾಗೂ ಡಿಪ್ಲೋಮಾ ಪದವೀಧರರಿಗೆ ೧,೫೦೦ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಿಗೆ ಮಾತ್ರವೇ ಈ ಯೋಜನೆಯ ಲಾಭ ದೊರೆಯಲಿದೆ.

ಡಿಸೆಂಬರ್‌ ೨೬ರಿಂದ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಸರಕಾರ ಅವಕಾಶವನ್ನು ಕಲ್ಪಿಸಿದೆ. ಬೆಂಗಳೂರು ಒನ್‌, ಕರ್ನಾಟಕ ಒನ್‌, ಗ್ರಾಮ ಒನ್‌ ಕೇಂದ್ರಗಳಲ್ಲಿ ಯುವನಿಧಿ ಯೋಜನೆಗೆ ಅರ್ಜಿಯನ್ನು ಸಲ್ಲಿಸ ಬಹುದಾಗಿದೆ. ಶೈಕ್ಷಣಿಕ ದಾಖಲೆಗಳ ಜೊತೆಗೆ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ಗಳ ದಾಖಲೆಗಳನ್ನು ನೀಡುವ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ : ಆಯುಷ್ಮಾನ್ ಭಾರತ್ ಕಾರ್ಡ್ 2024 : ನಿಮ್ಮ ಮೊಬೈಲ್‌ನಿಂದಲೇ ಡೌನ್‌ಲೋಡ್ ಮಾಡಿ

ಯಾರಿಗೆಲ್ಲಾ ಸಿಗುತ್ತೆ ಯುವನಿಧಿ ಹಣ ?

ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಹಣ ಸಿಗೋದಿಲ್ಲ. ಜೊತೆಗೆ ಪದವಿ ಹಾಗೂ ಡಿಪ್ಲೊಮಾ ಶಿಕ್ಷಣ ಪೂರೈಸಿದ ಎಲ್ಲರಿಗೂ ಯುವನಿಧಿ ಹಣ ಸಿಗುವುದಿಲ್ಲ. ಪ್ರಮುಖವಾಗಿ 2022-23 ನೇ ಸಾಲಿನಲ್ಲಿ ಪದವಿ ಹಾಗೂ ಡಿಪ್ಲೋಮಾ ಶಿಕ್ಷಣ ಪೂರೈಸಿ ೬ ತಿಂಗಳ ಕಾಲ ಉದ್ಯೋಗ ಸಿಗದೇ ಇರುವವರು ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಎಷ್ಟು ವರ್ಷ ಸಿಗುತ್ತೆ ಯುವ ನಿಧಿ ಯೋಜನೆ

ಯುವನಿಧಿ ಯೋಜನೆಯಡಿಯಲ್ಲಿ ನೋಂದಣಿ ಮಾಡಿಕೊಂಡ ನಂತರದಲ್ಲಿ ಪ್ರತೀಯೊಬ್ಬ ಫಲಾನುಭವಿ ಗರಿಷ್ಠ ಎರಡು ವರ್ಷಗಳ ಕಾಲ ಈ ಯೋಜನೆಯ ಅಡಿಯಲ್ಲಿ ನಿರುದ್ಯೋಗ ಭತ್ಯೆಯನ್ನು ಪಡೆಯಬಹುದಾಗಿದೆ. ಯೋಜನೆಯ ಫಲಾನುಭವಿಯಾಗಿ ಎರಡು ವರ್ಷದ ಒಳಗಾಗಿ ಅಭ್ಯರ್ಥಿಗೆ ಉದ್ಯೋಗ ದೊರೆತಲ್ಲಿ ಮಾಸಿಕ ಹಣವು ಸ್ಥಗಿತವಾಗಲಿದೆ.

ಇದನ್ನೂ ಓದಿ : ಕರ್ನಾಟಕದಲ್ಲೂ ರದ್ದಾಗುತ್ತಾ ಗೃಹಲಕ್ಷ್ಮೀ ಯೋಜನೆ ? ರಾಜ್ಯ ಸರಕಾರದಿಂದ ಮಹತ್ವದ ಆದೇಶ

ಇವರಿಗೆ ಸಿಗಲ್ಲ ಯುವನಿಧಿ ಹಣ

ಪದವಿ ಅಥವಾ ಡಿಪ್ಲೋಮಾ ಪದವಿಯನ್ನು ಪೂರೈಸಿ ಹಲವು ವರ್ಷ ಕಳೆದಿದ್ದರೆ ಅಂತಹ ಅಭ್ಯರ್ಥಿಗಳಿಗೆ ಈ ಯೋಜನೆಯ ಲಾಭ ದೊರೆಯುವುದಿಲ್ಲ. ಕೇವಲ ಎರಡು ವರ್ಷಗಳ ಕಾಲ ಮಾತ್ರವೇ ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಪದವಿ ಶಿಕ್ಷಣವನ್ನು ಪೂರೈಸಿ ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಕೂಡ ಈ ಯೋಜನೆಯ ಲಾಭ ದೊರೆಯವುದಿಲ್ಲ.

Yuva Nidhi scheme Karnataka Not everyone who applies can get Youth Fund money, here is the eligibility list for Yuva Nidhi
Image Credit to Original Source

ಸುಳ್ಳು ಮಾಹಿತಿ ನೀಡಿ ಯೋಜನೆ ಲಾಭ ಪಡೆದ್ರೆ ದಂಡ

ಯುವ ನಿಧಿ ಯೋಜನೆಯ ಮೂಲಕ ಯುವಕ, ಯುವತಿಯರನ್ನು ಆರ್ಥಿಕವಾಗಿ ಸದೃಢ ಮಾಡುವ ಉದ್ದೇಶವನ್ನು ಇಷ್ಟುಕೊಳ್ಳಲಾಗಿದೆ. ಒಂದೊಮ್ಮೆ ಸುಳ್ಳು ಮಾಹಿತಿಯನ್ನು ನೀಡಿ ಯೋಜನೆಯ ಲಾಭವನ್ನು ಪಡೆದ್ರೆ ಅಂತಹ ಸಂದರ್ಭದಲ್ಲಿ ಸರಕಾರ ಬಾರೀ ದಂಡವನ್ನು ವಧಿಸಲಿದೆ.

ಇದನ್ನೂ ಓದಿ 10 ಲಕ್ಷ ಸಾಲ 3 ಲಕ್ಷ ಸಬ್ಸಿಡಿ, ಅತ್ಯಂತ ಕಡಿಮೆ ಬಡ್ಡಿಗೆ PM ನರೇಂದ್ರ ಮೋದಿ ಸರಕಾರದಿಂದ ಹೊಸ ಯೋಜನೆ

Yuva Nidhi scheme Karnataka Not everyone who applies can get Youth Fund money, here is the eligibility list for Yuva Nidhi

Comments are closed.