ಭಾನುವಾರ, ಏಪ್ರಿಲ್ 27, 2025
HomekarnatakaBanjara community : ಲಂಬಾಣಿ ಸಮುದಾಯದ ಮಕ್ಕಳನ್ನು ಕಾಡುತ್ತಿದೆ ಅಪೌಷ್ಠಿಕತೆ : ಸರಕಾರದ ಗಮನ ಸೆಳೆದ...

Banjara community : ಲಂಬಾಣಿ ಸಮುದಾಯದ ಮಕ್ಕಳನ್ನು ಕಾಡುತ್ತಿದೆ ಅಪೌಷ್ಠಿಕತೆ : ಸರಕಾರದ ಗಮನ ಸೆಳೆದ ಅರುಣ್ ಕುಮಾರ್‌

- Advertisement -

ಹಾವೇರಿ : ಉತ್ತರ ಕರ್ನಾಟಕ ಭಾಗದಲ್ಲಿನ ಮಕ್ಕಳನ್ನು ಹೆಚ್ಚಾಗಿ ಅಪೌಷ್ಠಿಕತೆ ಕಾಡುತ್ತಿದೆ. ಅದ್ರಲ್ಲೂ ವಿಜಯನಗರ ಜಿಲ್ಲೆಯ ಹೊಸಪೇಟೆ ಮೂಲದ ಲಂಬಾಣಿ ಸಮುದಾಯ ಬಂಜಾರ ಜಾತಿಯ (Banjara community) ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿರುವುದು ಪತ್ತೆಯಾಗಿದೆ. ಅಲೆಮಾರಿಗಳಾಗಿ ಬದುಕು ಕಟ್ಟಿಕೊಂಡಿರುವ ಇಂತಹ ಸಮುದಾಯದ ಮಕ್ಕಳ ಸಮಸ್ಯೆಯನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾಗಿರುವ ಅರುಣ್‌ ಕುಮಾರ್‌ ಅವರು ಆಲಿಸಿದ್ದಾರೆ.

ಹಾವೇರಿ ನಗರದ ಹೊರಭಾಗದಲ್ಲಿರುವ ( ಬೆಂಗಳೂರು – ಹಾವೇರಿ ಹೆದ್ದಾರಿ ಪಕ್ಕದಲ್ಲಿನ ) ಜಮೀನಿನಲ್ಲಿ ಬಂಜಾರ ಸಮುದಾಯದ ಜನರು ಸುಮಾರು 200 ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಕಬ್ಬು ಕಡಿಯುವುದು ಈ ಸಮುದಾಯದವರ ಪ್ರಮುಖ ಉದ್ಯೋಗ. ನಿತ್ಯವೂ ಟನ್‌ಗಟ್ಟಲೆ ಕಬ್ಬು ಕಟಾವು ಮಾಡಿದ್ದರೂ ಕೂಡ ಇವರಿಗೆ ಸಿಗುತ್ತಿರುವುದು ಮಾತ್ರ ಕನಿಷ್ಠ ಸಂಭಾವನೆ. ಅಲೆಮಾರಿಗಳಾಗಿ ಜೀವನ ಸಾಗಿಸುತ್ತಿರುವ ಈ ಸಮುದಾಯ ಕಳೆದ ಏಳು ತಿಂಗಳುಗಳಿಂದಲೂ ಹಾವೇರಿ ನಗರದ ಹೊರಭಾಗದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಈ ಸಮುದಾಯದ 100ಕ್ಕೂ ಅಧಿಕ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಮಕ್ಕಳು ಅಪೌಷ್ಠಿತಕತೆಯಿಂದ ಬಳಲುತ್ತಿರುವುದು ಕಂಡುಬಂದಿದೆ.

ಉತ್ತರ ಕನ್ನಡ ಜಿಲ್ಲೆಯ ಕುಂಬ್ರಿ ಮರಾಠಿ ಹಾಗೂ ರಾಮಕ್ಷತ್ರಿಯ ಸಮಾಜದವರ ಅಹವಾಲುಗಳನ್ನು ಆಲಿಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್‌ ಹೆಗ್ಡೆ ಅವರ ನೇತೃತ್ವದಲ್ಲಿ ಆಯೋಗ ಭೇಟಿ ನೀಡಿತ್ತು. ಸಮಸ್ಯೆಯನ್ನು ಆಲಿಸಿ ವಾಪಾಸಾಗುತ್ತಿದ್ದ ವೇಳೆಯಲ್ಲಿ ರಸ್ತೆ ಪಕ್ಕದಲ್ಲಿ ಬಂಜಾರ ಸಮುದಾಯದವರು ಅನುಭವಿಸುತ್ತಿದ್ದ ಸಮಸ್ಯೆಯನ್ನು ಆಯೋಗದ ಸದಸ್ಯ ಅರುಣ್‌ ಕುಮಾರ್‌ ಅವರು ಆಲಿಸಿದ್ದಾರೆ. ಕಳೆದ ಹಲವು ವರ್ಷಗಳಿಂದಲೂ ಈ ಸಮುದಾಯದ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಲೇ ಇದ್ದಾರೆ. ಆದರೆ ಜಿಲ್ಲಾಡಳಿತವಾಗಲಿ, ಸರಕಾರವಾಗಲಿ ಇವರ ಸಮಸ್ಯೆಯನ್ನು ಆಲಿಸಿಲ್ಲ. ಇದೀಗ ಬಂಜಾರ ಸಮುದಾಯದ ಮಕ್ಕಳು ಎದುರಿಸುತ್ತಿರುವ ಶಿಕ್ಷಣ, ಆರೋಗ್ಯದ ಸಮಸ್ಯೆಯ ಕುರಿತು ಸರಕಾರದ ಗಮನಕ್ಕೆ ತಂದು, ಸಮಸ್ಯೆಯನ್ನು ಬಗೆ ಹರಿಸುವುದಾಗಿ ಅರುಣ್‌ ಕುಮಾರ್ ಭರವಸೆಯನ್ನು ನೀಡಿದ್ದಾರೆ. ಈ ವೇಳೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ B.S. ರಾಜಶೇಖರ್‌ ಅವರು ಉಪಸ್ಥಿತರಿದ್ದರು.

ಇದನ್ನೂ ಓದಿ : ಶಿಳ್ಳೆಕ್ಯಾತರ ಸಮಸ್ಯೆ ಆಲಿಸಿದ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಅರುಣ್ ಕುಮಾರ್ ಕಲ್ಗದ್ದೆ

ಇದನ್ನೂ ಓದಿ : ಬುಡ ಜಂಗಮರ ಸಮಸ್ಯೆಗೆ ಧ್ವನಿಯಾದ ಅರುಣ್ ಕುಮಾರ್ ಕಲ್ಗದ್ದೆ

ಇದನ್ನೂ ಓದಿ : ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 2

( back word class commission member arun kumar kalgadde visit lambani banjara community people)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular