ಬೆಂಗಳೂರು : ಬಿರು ಬೇಸಿಗೆಯ ಬಿಸಿ ಯಲ್ಲಿ ಬೆಂದು ಹೋಗ್ತಿರೋ ಜನರಿಗೆ ಈಗ ಬೆಲೆ ಏರಿಕೆಯ ಬೆಂಕಿ ಸುಡಲಾರಂಭಿಸಿದೆ. ದಿನಬಳಕೆ ವಸ್ತುವಿನಿಂದ ಆರಂಭಿಸಿ ಐಷಾರಾಮಿ ಕಾರಿನ ತನಕ ಎಲ್ಲವೂ ಕೈಸುಡಲಾರಂಭಿಸಿದೆ. ಇನ್ನೇನು ಎಲ್ಲ ಬೆಲೆಯೂ ಏರಿಕೆಯಾಗಿದೆ. ಸಂಬಳನೂ ಸಾಲಲ್ಲ ಅನ್ನೋ ನೋವಿಗೆ ನೀವು ಚಿಲ್ಲಡ್ ಬಿಯರ್ ಕುಡಿದು ರಿಲ್ಯಾಕ್ಸ್ ಆಗೋಣ ಅಂದ್ಕೊಂಡ್ರೆ ಈಗ ಅದೂ ಸಾಧ್ಯವಿಲ್ಲ ಯಾಕೆಂದರೇ ಮತ್ತೇರಿಸುವ ಬಿಯರ್ (Beer Rate) ಕೂಡ ಬೆಲೆ ಏರಿಸಿಕೊಂಡು ಕುಡಿಯೋಕೆ ಮುನ್ನವೇ ಕುಡುಕರಿಗೆ ಶಾಕ್ ನೀಡ್ತಿದೆ.
ಹೌದು ಪೆಟ್ರೋಲ್ ಡಿಸೇಲ್ ಸೇರಿದಂತೆ ಒಂದೊಂದೆ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗತೊಡಗಿದೆ. ಈ ಮಧ್ಯೆ ಎಣ್ಣೆ ಪ್ರಿಯರ ಫೆವರಿಟ್ ಎನ್ನಿಸಿರೋ ಎಣ್ಣೆನೂ ಈಗ ಶಾಕ್ ನೀಡ್ತಿದ್ದು, ಬಿಯರ್ ( Beer ) ಉತ್ಪಾದಕ ಕಂಪನಿಗಳು ಸದ್ದಿಲ್ಲದೇ ಬಿಯರ್ ದರ ಏರಿಸಿವೆ. ಬಾರ್ಲಿ ಸೇರಿದಂತೆ ಬಿಯರ್ ಉತ್ಪಾದನೆಗೆ ಬಳಸುವ ಅಗತ್ಯವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಬಿಯರ್ ಬೆಲೆ ಏರಿಕೆಯಾಗಿದೆ. ಪ್ರತಿ ಲೀಟರ್ ಬಿಯರ್ ಮೇಲೆ 5 ರಿಂದ 10 ರೂಪಾಯಿ ಏರಿಕೆ ಮಾಡಿರುವ ಬಿಯರ್ ಉತ್ಪಾದನಾ ಕಂಪನಿಗಳು ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿವೆ.
ಏಪ್ರಿಲ್ 10 ರಿಂದ ಈ ಪರಿಷ್ಕೃತ ದರ ಜಾರಿಯಾಗಲಿದ್ದು ಎಲ್ಲ ಬ್ರಾಂಡ್ ಬಿಯರ್ (Beer) ಮೇಲೆ ಪರಿಷ್ಕೃತ ದರ ಜಾರಿಯಾಗುತ್ತಿದೆ. ಕಿಂಗ್ ಫಿಶರ್, ಬಡ್ ವೈಸರ್ , ಟುಬರ್ಗೋ ಸೇರಿದಂತೆ ಎಲ್ಲ ಬಿಯರ್ ದರ ಏರಿಕೆಯಾಗಲಿದೆ. ಭಾರತದ ಬಿಯರ್ ಉತ್ಪಾದಕ ಕಂಪನಿಗಳು ಹಾಗೂ ವಿಶ್ವದ ಕಂಪನಿಗಳಿಗೆ ರಷ್ಯಾ ಹಾಗೂ ಉಕ್ರೇನ್ ನಿಂದ ಬಾರ್ಲಿ ರಫ್ತಾಗುತ್ತಿತ್ತು. ಆದರೆ ಯುದ್ದದ ಪರಿಣಾಮ ಬಾರ್ಲಿ ಆಮದಿನಲ್ಲಿ ವ್ಯತ್ಯಯ ಉಂಟಾಗಿದೆ.
ಇದರೊಂದಿಗೆ ಬಿಯರ್ ಆಮದಿಗೆ ಬಳಸುವ ಇತರ ಕಚ್ಚಾಸಾಮಗ್ರಿಗಳ ಬೆಲೆ ಏರಿಕೆಯಿಂದ ಬಿಯರ್ ಉತ್ಪಾದನಾ ವೆಚ್ಚ ಏರಿಕೆಯಾಗಿದೆ. ಅಲ್ಲದೇ ಪೆಟ್ರೋಲ್ ಡೀಸೆಲ್ ದರ ಹೆಚ್ಚಳ ಹಿನ್ನೆಲೆ ಸಾಗಣೆ ವೆಚ್ಚವೂ ಹೆಚ್ಚಿದೆ. ಈ ಎಲ್ಲ ಕಾರಣಗಳನ್ನು ಮುಂದಿಟ್ಟುಕೊಂಡು ಬಿಯರ್ ಕಂಪನಿಗಳು ಬೆಲೆ ಏರಿಕೆಗೆ ಸಿದ್ಧವಾಗಿವೆ. ಕಳೆದ ಮೂರುವರ್ಷಗಳ ಕಾಲ ಕೋವಿಡ್ ನಿಂದಾಗಿ ಎಣ್ಣೆ ಮಾರಾಟದಲ್ಲಿ ದಾಖಲೆಯ ಕುಸಿತವಾಗಿತ್ತು. ಲಾಕ್ ಡೌನ್ ವೇಳೆ ಎಣ್ಣೆ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಹೀಗಾಗಿ ಕರೋನಾ ಮೂರು ಅಲೆಗಳ ವೇಳೆ ಉಂಟಾದ ನಷ್ಟ ತುಂಬಿಸಿಕೊಳ್ಳಲು ಬೆಲೆ ಏರಿಕೆಗೆ ಬಿಯರ್ ಉತ್ಪಾದನಾ ಕಂಪನಿಗಳು ಬೆಲೆ ಏರಿಕೆ ಅಸ್ತ್ರ ಹಿಡಿದಿವೆ.
ಇದನ್ನೂ ಓದಿ : ನೌಕರರ ಸಂಬಳಕ್ಕೆ, ಪಿಎಫ್ ಗೆ ದುಡ್ಡಿಲ್ಲ: ಹೊಸ ಬಸ್ ಖರೀದಿಸೋಕೆ ಮುಂದಾದ ಸಾರಿಗೆ ಸಂಸ್ಥೆ
ಇದನ್ನೂ ಓದಿ : ಬಾಯಿ ಸುಡಲಿದೆ ನಂದಿನಿ ಹಾಲು : ಪ್ರತೀ ಲೀಟರ್‌ಗೆ 5 ರೂಪಾಯಿ ಏರಿಕೆಗೆ KM ಪ್ರಸ್ತಾಪ
Bad news for liquor lovers, the Beer Rate will soon be revised