ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ : ಪೊಲೀಸರ ವಿರುದ್ಧವೂ ತನಿಖೆಗೆ ಆದೇಶಿಸಿದ ಗೃಹಸಚಿವ

ಬೆಂಗಳೂರು : ಶಿವಮೊಗ್ಗದ ಭಾರತಿ ನಗರದಲ್ಲಿ ನಡೆದ ಹಿಂದೂಪರ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ (Bajrang Dal activist Harsha ) ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಪದೇ ಪದೇ ಹಿಂದೂ ಕಾರ್ಯಕರ್ತರೇ ಯಾಕೆ ಟಾರ್ಗೆಟ್ ಆಗುತ್ತಿದ್ದಾರೆ ಎಂಬ ಪ್ರಶ್ನೆಯೂ ಜನರನ್ನು ಕಾಡುತ್ತಿದೆ. ಈ ಮಧ್ಯೆ ಹರ್ಷ ಕೊಲೆ ಪ್ರಕರಣದ ಆರೋಪಿಗಳು ಭಾರತೀ ನಗರದ ಮಗ್ಗುಲಲ್ಲೇ ಇದ್ದರು ಅನ್ನೋದು ಈಗ ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಈ ಆರೋಪಿಗಳು ಹಳೆ ಅಪರಾಧಿಗಳು ಎಂಬ ಅಂಶ ಈಗ ಚರ್ಚೆಗೆ ಗ್ರಾಸವಾಗಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಇಲಾಖೆ ಪೊಲೀಸ್ ವೈಫಲ್ಯದ ವರದಿ‌ಕೇಳಿದೆ.

ಹರ್ಷಾ ಕೊಲೆ‌ ನಡೆದ 24 ಗಂಟೆಗಳಲ್ಲೇ ಶಿವಮೊಗ್ಗ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಆದರೆ ಈ ಅರೋಪಿಗಳು ಶಿವಮೊಗ್ಗದವರು. ಹಾಗೂ ಹಳೆಯ ಹಲವು ಪ್ರಕರಣಗಳಲ್ಲಿ ಜೈಲೂಟ ಉಂಡು ಬಂದವರು ಎಂಬ ಅಂಶ ಬೆಳಕಿಗೆ ಬಂದಿದೆ. ಹಾಗಿದ್ದರೇ ಇಷ್ಟು ಕ್ರೈಂ ಕೃತ್ಯಗಳಲ್ಲಿ ಪಾಲ್ಗೊಂಡ ಆರೋಪಿಗಳನ್ನು ನಿಯಂತ್ರಿಸುವಲ್ಲಿ ಶಿವಮೊಗ್ಗ ಕೋಟ ಹಾಗೂ ದೊಡ್ಡಪೇಟೆ ಪೊಲೀಸರು ವಿಫಲರಾಗಿದ್ದೇಕೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ ‌

ಇನ್ನು ಈ ಸಂಗತಿಯನ್ನು ಪೊಲೀಸ್ ಇಲಾಖೆಯ ವೈಫಲ್ಯ ಎಂದು ಪರಿಗಣಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ಕೋಟ ಹಾಗೂ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಐದು ವರ್ಷಗಳ ಕ್ರೈಂ ಅಡಿಟ್ ನಡೆಸಲು ಸೂಚನೆ ನೀಡಿದ್ದಾರೆ. ಅಲ್ಲದೇ ಇಷ್ಟು ಕೇಸ್ ಗಳಿರುವ ಆರೋಪಿಗಳ ವಿರುದ್ಧ ಸೂಕ್ತ ಕ್ರಮವಾಗಿಲ್ಲ ಯಾಕೆ ? ಬಂಧಿತರಾದ ಆರೋಪಿಗಳು ಒಂದಕ್ಕಿಂತ ಹೆಚ್ಚು ಅಪರಾಧ ಕೃತ್ಯದಲ್ಲಿ ಪಾಲ್ಗೊಂಡಿದ್ದಾರೆ. ಆದರೂ ಅವರ ಕೃತ್ಯಗಳನ್ನು ನಿಯಂತ್ರಿಸಲಾಗಿಲ್ಲ. ಅಲ್ಲದೇ ಈ ಠಾಣೆಗಳ ಪೊಲೀಸರ ವೈಫಲ್ಯದ ವಿರುದ್ಧವೂ ದೂರು ಬಂದಿದೆ‌

ಹೀಗಾಗಿ ಈ ಬಗ್ಗೆ ಸೂಕ್ತ ತನಿಕೆ ನಡೆಸಿ ವರದಿ ನೀಡುವಂತೆ ಗೃಹ ಸಚಿವರು ಡಿಜಿಪಿಗೆ ಸೂಚಿಸಿದ್ದು, ಒಂದೊಮ್ಮೆ ಪೊಲೀಸರ ಕರ್ತವ್ಯ ಲೋಪ ಕಂಡುಬಂದಲ್ಲಿ ಶಿಸ್ತುಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವರು ಎಚ್ಚರಿಸಿದ್ದಾರೆ. ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಶಿವಮೊಗ್ಗ ಪೊಲೀಸರು ಒಟ್ಟು 8 ಆರೋಪಿಗಳನ್ನು ಬಂಧಿಸಿದ್ದಾರೆ. ಒಟ್ಟಿನಲ್ಲಿ ಸ್ಥಳೀಯ ಆರೋಪಿಗಳೇ ಹರ್ಷನ ಕೊಲೆಗೆ ಕಾರಣವಾಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದ್ದು ಸ್ಥಳೀಯ ಪೊಲೀಸರ ವೈಫಲ್ಯವೇ ಹರ್ಷ ಸಾವಿಗೆ ಕಾರಣವಾಯ್ತಾ ಎಂಬ ಪ್ರಶ್ನೆಯೂ ಮೂಡಿದೆ.

ಇದನ್ನೂ ಓದಿ : Threat call : ಹರ್ಷನ ಕತೆ‌ ಮುಗೀತು, ನೆಕ್ಸ್ಟ್ ನಿನ್ನ ಸರದಿ : ಹಿಂದೂಪರ ಕಾರ್ಯಕರ್ತನಿಗೆ ಬೆದರಿಕೆ ಕರೆ

ಇದನ್ನೂ ಓದಿ : ಎನ್ಐಎ ಹೆಗಲೇರುತ್ತಾ ಹರ್ಷ ಕೊಲೆ ಪ್ರಕರಣ : ಸಿಎಂ ಬೊಮ್ಮಾಯಿ ಹೇಳಿದ್ದೇನು ?

(Bajrang Dal activist Harsha murder case: Home minister ordered probe against police)

Comments are closed.