ಬೆಂಗಳೂರು : ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಅಂತಾರೆ. ಆದರೂ ಕೆಲವೊಮ್ಮೆ ದೈಹಿಕ ನೂನ್ಯತೆಗಳ ಕಾರಣಕ್ಕೆ ಅದೇಷ್ಟೋ ಜನರು ಮದುವೆಯಾಗೋಕೆ ಇಷ್ಟವಿದ್ದರೂ ಸೂಕ್ತ ಸಂಗಾತಿ ಸಿಗದೇ ಪರದಾಡುವಂತಾಗುತ್ತೆ. ಆದರೆ ಇಲ್ಲೊಂದು ಮುದ್ದಾದ ಜೋಡಿ ಮಾತ್ರ ಮದುವೆಯ (special marriage) ಬಂಧಕ್ಕೆ ದೇವರು ಸ್ವರ್ಗದಲ್ಲೇ ಜೋಡಿ ಬರೆದು ಕಳಿಸಿರುತ್ತಾನೆ ಎಂಬ ಮಾತನ್ನ ಸತ್ಯ ಅಂತ ಪ್ರೂವ್ ಮಾಡಿದ್ದಾರೆ.
ಅವರಿಬ್ಬರೂ ಬುದ್ಧಿವಂತರು,ವಿದ್ಯಾವಂತರು. ಸಿಲಿಕಾನ್ ಸಿಟಿಯಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದರು. ಆದರೆ ಇಷ್ಟೆತ್ತರಕ್ಕೇ ಏರಿದ್ದರೂ ವಾಮನ ಮೂರ್ತಿಗಳಂತಿದ್ದ ದೈಹಿಕ ಆಕಾರದಿಂದ ಅವರಿಗೆ ಮದುವೆ ಅನ್ನೋದು ಕನಸು ಎನ್ನಿಸಿತ್ತು. ಅದರೆ ವಿಧಿ ಆ ಇಬ್ಬರನ್ನೂ ಒಟ್ಟಿಗೆ ಬೆಸೆದು ಮದುವೆಯ ಬಂಧದಲ್ಲಿ ಬಂಧಿಯಾಗುವಂತೆ ಮಾಡಿದೆ. ಚಿಕ್ಕಬಳ್ಳಾಪುರದ ಕೈವಾರದಲ್ಲಿ ನಡೆದ ಈ ಮದುವೆ ತನ್ನ ವಿಭಿನ್ನತೆಯೊಂದಿಗೆ ಸೋಷಿಯಲ್ ಮೀಡಿಯಾ ಗಮನ ಸೆಳೆದಿದೆ.

ಕೋಲಾರ ಮೂಲದ ಜ್ಯೋತಿ ಹುಟ್ಟಿನಿಂದಲೂ ಕುಬ್ಜೇ. ಇದೇ ಕಾರಣಕ್ಕೆ ಮದುವೆ ಸೆಟ್ ಆಗಿರಲಿಲ್ಲ.ಕೊನೆಗೆ ಇವರ ಕೈಹಿಡಿದವರು ಬೆಂಗಳೂರು ಮೂಲದ ವಿಷ್ಣು ಇಬ್ಬರೂ ಬೆಂಗಳೂರಿ ನಲ್ಲಿ ಉದ್ಯೋಗದಲ್ಲಿದ್ದು ಪರಸ್ಪರ ಮೆಚ್ಚಿ ಸಪ್ತಪದಿತುಳಿದಿದ್ದಾರೆ. ಈ ಪುಟ್ಟ ಜೋಡಿಯ ವಿವಾಹ ನೋಡಿ ಎಲ್ಲರೂ ಸಂಭ್ರಮಿಸಿದ್ದಾರೆ. ಹೆತ್ತವರ ಸಮ್ಮುಖದಲ್ಲಿ ಕೈವಾರದ ತಾತಯ್ಯನವರ ಆಶೀರ್ವಾದದೊಂದಿಗೆ ಸನ್ನಿಧಿಯಲ್ಲೇ ಶಾಸ್ತ್ರೋಕ್ತವಾಗಿ ಮದುವೆಯಾದ ಜ್ಯೋತಿ ಹಾಗೂ ವಿಷ್ಣುಗೆ ಸಂಬಂಧಿಕರು ಮಾತ್ರವಲ್ಲದೇ ಕೈವಾರ ತಾತಯ್ಯ ಸನ್ನಿಧಾನ ದರ್ಶನಕ್ಕೆ ಬಂದಿದ್ದವರು ಅಕ್ಷತೆ ಹಾಕಿ ಅಶೀರ್ವದಿಸಿದ್ದಾರೆ.

ಕೆಲವರಂತೂ ಹಸೆಮಣೆ ಮೇಲೆ ಕೂತಿದ್ದ ಈ ಜೋಡಿ ನೋಡಿ ಅಯ್ಯೋ ಪುಟ್ಟ ಮಕ್ಕಳಿಗೆ ಮದುವೆನಾ ಅಂತ ಅಚ್ಚರಿ ಕೂಡ ವ್ಯಕ್ತಪಡಿಸಿದ್ದಾರೆ. ಆದರೆ ಈ ಜೋಡಿಯಲ್ಲಿ ವಿಷ್ಣು ಗೆ ಬರೋಬ್ಬರಿ 25 ವರ್ಷಗಳಾಗಿದ್ರೇ ಜ್ಯೋತಿಗೆ 25 ವಸಂತ ತುಂಬಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಶಾಲೆ, ಕಾಲೇಜುಗಳು ಬಂದ್ : ಸುಳಿವು ಕೊಟ್ಟ ಸಿಎಂ ಬೊಮ್ಮಾಯಿ
ಇದನ್ನೂ ಓದಿ : ಓಮಿಕ್ರಾನ್ ಭೀತಿ : ಡಿ.15ರ ನಂತರ ಕರ್ನಾಟಕ ಲಾಕ್‌ಡೌನ್ !
( special marriage in the field of Kaivara Tathayya temple, The three-foot-tall bride and groom celebrated)