ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಅಧಿಕಾರಿ ಗಂಗಾಧರಯ್ಯ : ಅಕ್ರಮ ಆಸ್ತಿ ಎಷ್ಟು ಗೊತ್ತೆ ?

ಬೆಂಗಳೂರು : ಕರ್ನಾಟಕ ರಾಜ್ಯದ ರಾಜಧಾನಿಗೆ ಇಂದು (ಏಪ್ರಿಲ್‌ 24) ಬೆಳ್ಳಂಬೆಳಗ್ಗೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ದಾಳಿ (IT Rides)‌ ನಡೆಸಿದ್ದಾರೆ. ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಅಕ್ರಮ ಹಣ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬಿಬಿಎಂಪಿಯ ನಗರ ಯೋಜನೆ ಸಹಾಯಕ ನಿರ್ದೇಶಕ (ಎಡಿಟಿಪಿ) ಗಂಗಾಧರಯ್ಯ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಬಿಬಿಎಂಪಿ ಅಧಿಕಾರಿ ಗಂಗಾಧರಯ್ಯ (BBMP officer Gangadharaiah) ಮನೆಯಲ್ಲಿ 80 ಲಕ್ಷ ರೂ. ನಗದು ಹಣ, ಸುಮಾರು 50 ಲಕ್ಷ ರೂ. ಬೆಲೆ ಬಾಳುವ ಚಿನ್ನ, ಬೆಳ್ಳಿ ಪತ್ತೆಯಾಗಿದೆ. ಇನ್ನು ಬಿಬಿಎಂಪಿ ಅಧಿಕಾರಿ ಗಂಗಾಧರಯ್ಯ ಅವರ ಹಿನ್ನಲೆ ಒಂದೊಂದಾಗಿ ಹೊರ ಬೀಳುತ್ತಿದೆ.

ಬಿಬಿಎಂಪಿ ಅಧಿಕಾರಿ ಗಂಗಾಧರಯ್ಯ ಮನೆ ಮಾರುತಿ ನಗರ ಬಳಿಯ ಸತ್ಯನಾರಾಯಣ ಲೇಔಟ್‌ನ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಳಗ್ಗೆ 5 ಗಂಟೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಲು ಹೋದರೂ ಕೂಡ 30 ನಿಮಿಷ ಬಾಗಿಲು ತೆರಯದೇ ಲೋಕಾಯುಕ್ತ ಸಿಬ್ಬಂದಿಯನ್ನು ಕಾಯಿಸಿದ್ದಾರೆ. ನಂತರ ಬಾಗಿಲು ತೆರೆದಿದ್ದು, 15 ಮಂದಿ ಲೋಕಾಯುಕ್ತ ಅಧಿಕಾರಿಗಳ ತಂಡದಿಂದ ಶೋಧನೆ ಮಾಡಿದಾಗ ಬೆಳಗ್ಗೆ 9 ಗಂಟೆ ವೇಳೆಗೆ ಮನೆಯಲ್ಲಿ ಕೋಟ್ಯಂತರ ರೂ. ಹಣ ಸಂಗ್ರಹಣೆ ಮಾಡಿಟ್ಟಿರುವುದು ಪತ್ತೆಯಾಗಿದೆ.

ಬಿಬಿಎಂಪಿ ಅಧಿಕಾರಿ ಗಂಗಾಧರಯ್ಯ ಅಕ್ರಮ ಆಸ್ತಿ ವಿವರ :
ಬಿಬಿಎಂಪಿ ಅಧಿಕಾರಿ ಗಂಗಾಧರಯ್ಯ ಮನೆಯಲ್ಲಿ ಲೋಕಾಯುಕ್ತ ದಾಳಿಯ ವೇಳೆ ಸುಮಾರು 80 ಲಕ್ಷ ನಗದು ಹಣ, 50 ಲಕ್ಷ ಮೌಲ್ಯದ ಚಿನ್ನಾಭರಣ ವಸ್ತುಗಳು ಪತ್ತೆಯಾಗಿದೆ ಎನ್ನಲಾಗಿದೆ. ಅದರೊಂದಿಗೆ ಹಲವು ಹೊರ ರಾಷ್ಟ್ರದ ವಿದೇಶಿ ಕರೆನ್ಸಿ ಕೂಡ ಸಿಕ್ಕಿರುತ್ತದೆ. ಇನ್ನು ಅವರ ಯಲಹಂಕದಲ್ಲಿರುವ ಕಚೇರಿ, ಮಹಾಲಕ್ಷ್ಮೀ ಲೇಔಟ್ ಮನೆ ಹಾಗೂ ಸಂಬಂಧಿಕರ ಮನೆಯಲ್ಲಿ ಪರಿಶೀಲನೆ ಮಾಡಲಾಗಿದೆ. ಇನ್ನು ಮಾರುತಿ ನಗರದ ಮನೆಯ ಪಾರ್ಕಿಂಗ್ ಜಾಗದಲ್ಲಿ ಆಸ್ತಿ ದಾಖಲೆಗಳು ಪತ್ತೆಯಾಗಿದ್ದು, ಎಲ್ಲವನ್ನೂ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ : Bengaluru crime: ಅನಾರೋಗ್ಯದಿಂದ ಪತಿ ಸಾವು, ಅನುಮಾನಾಸ್ಪದವಾಗಿ ಪತ್ನಿಯ ಶವಪತ್ತೆ

ಬಿಬಿಎಂಪಿ ಅಧಿಕಾರಿ ಗಂಗಾಧರಯ್ಯ ಹಿನ್ನಲೆ :
ಬಿಬಿಎಂಪಿ ಅಧಿಕಾರಿ ಗಂಗಾಧರಯ್ಯ ಅವರನ್ನು ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಲೋಕಾಯುಕ್ತರು ದಾಳಿ ಮಾಡಿದ್ದು, ಹಿನ್ನಲೆ ರೋಚಕವಾಗಿದೆ. ಗಂಗಾಧರಯ್ಯ ಮೂಲತಃ ಬಿಬಿಎಂಪಿ ಸೇವೆಗೆ ಆಯ್ಕೆಯಾದ ಅಧಿಕಾರಿ ಆಗಿರುವುದಿಲ್ಲ. ಇವರು ಲೋಕೋಪಯೋಗಿ ಇಲಾಖೆ (PWD) ಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಮಾತೃ ಇಲಾಖೆ PWDಯಿಂದ ಓಓಡಿ ಮೇಲೆ ಬಿಬಿಎಂಪಿಗೆ ಬಂದಿದ್ದರು. ಕೇವಲ 3 ವರ್ಷ ಅವಧಿಗೆ ಬಿಬಿಎಂಪಿಯಲ್ಲಿ ಸೇವೆ ಸಲ್ಲಿಸಿ ಮಾತೃ ಇಲಾಖೆಗೆ ಹೋಗಬೇಕು. ಆದರೆ ಕಳೆದ 12 ವರ್ಷಗಳಿಂದ ಬಿಬಿಎಂಪಿ ಟೌನ್ ಪ್ಲಾನಿಂಗ್ ನಲ್ಲೇ ಕೆಲಸ ಮಾಡಿಕೊಂಡು ಇದ್ದಾರೆ.

BBMP officer Gangadharaiah: Got caught in the Lokayukta trap BBMP officer Gangadharaiah: How much illegal property do you know?

Comments are closed.