ಮಂಗಳವಾರ, ಏಪ್ರಿಲ್ 29, 2025
HomekarnatakaBBMP Strike: ಉದ್ಯೋಗ ಖಾಯಂಗೆ ಒತ್ತಾಯ : ಮಾ. 20 ರಂದು ಬಿಬಿಎಂಪಿ ಪೌರಕಾರ್ಮಿಕರ ಪ್ರತಿಭಟನೆ

BBMP Strike: ಉದ್ಯೋಗ ಖಾಯಂಗೆ ಒತ್ತಾಯ : ಮಾ. 20 ರಂದು ಬಿಬಿಎಂಪಿ ಪೌರಕಾರ್ಮಿಕರ ಪ್ರತಿಭಟನೆ

- Advertisement -

ಬೆಂಗಳೂರು : (BBMP Strike) ನೇರ ಪಾವತಿ ಹಾಗೂ ಖಾಯಂ ಉದ್ಯೋಗ ಸ್ಥಾನಮಾನಕ್ಕೆ ಒತ್ತಾಯಿಸಿ ಬಿಬಿಎಂಪಿ ಕಸ ಸಾಗಣೆ ಕಾರ್ಮಿಕರು ಮಾರ್ಚ್‌ 20, ಸೋಮವಾರ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಕಾಂಪ್ಯಾಕ್ಟ್‌ ವಾಹನ ಹಾಗೂ ಆಟೋ-ಟಿಪ್ಪರ್‌ ಚಾಲಕರು, ಸಹಾಯಕರು ಹಾಗೂ ಲೋಡರ್‌ ಗಳಿಗೆ ನೇರ ಪಾವತಿ ವ್ಯವಸ್ಥೆ ಹಾಗೂ ಖಾಯಂ ಉದ್ಯೋಗ ಸ್ಥಾನಮಾನಕ್ಕೆ ಒತ್ತಾಯಿಸಿ ಬಿಬಿಎಂಪಿ ಪೌರಕಾರ್ಮಿಕರು ಮುಷ್ಕರಕ್ಕೆ ಇಳಿಯಲಿದ್ದಾರೆ.

ಕಳೆದ ವಾರ ಪೌರಕಾರ್ಮಿಕರು ರಾಜ್ಯಾದ್ಯಂತ ಮುಷ್ಕರ ನಡೆಸಿದ್ದು, ಸರಕಾರದಿಂದ ಖಾಯಂ ಉದ್ಯೋಗ ಸ್ಥಾನಮಾನದ ಭರವಸೆ ಸಿಕ್ಕಿತ್ತು. ಇದರ ನಂತರದಲ್ಲಿ ಮುಷ್ಕರವನ್ನು ಹಿಂಪಡೆದಿದ್ದರು. ಆದರೆ ಇದೀಗ ಮತ್ತೆ ಬಿಬಿಎಂಪಿ ಪೌರಕಾರ್ಮಿಕರು ಮುಷ್ಕರಕ್ಕೆ ಮುಂದಾಗಿದ್ದು, ಮಾರ್ಚ್‌ 20 ರಂದು ಕಸ ಸಂಗ್ರಹಣೆ ಹಾಗೂ ವಿಲೇವಾರಿಗೆ ತೊದರೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಬಿಬಿಎಂಪಿಯ ಲೋಡರ್‌ಗಳು, ಕ್ಲೀನರ್‌ಗಳು ಮತ್ತು ಆಟೋ-ಟಿಪ್ಪರ್ ಚಾಲಕರು ಸೇರಿದಂತೆ ಕಾರ್ಮಿಕರು ಕನಿಷ್ಠ ವೇತನವನ್ನು ಪಡೆಯುತ್ತಿಲ್ಲ, ಜೊತೆಗೆ ಇಎಸ್‌ಐ ಅಥವಾ ಪಿಎಫ್ ಕೂಡ ಲಭ್ಯವಿಲ್ಲ. ಇವಷ್ಟೇ ಅಲ್ಲದೆ ಬಿಬಿಎಂಪಿ ಪೌರಕಾರ್ಮಿಕರಿಗೆ ತಮ್ಮ ಕೆಲಸ ನಿರ್ವಹಣೆಗೆ ಬೇಕಾದ ಅಗತ್ಯವಾದ ಸುರಕ್ಷತಾ ಸಾಧನಗಳನ್ನು ಸಹ ಬಿಬಿಎಂಪಿ ಒದಗಿಸಿಲ್ಲ. ಈ ಕಾರಣಕ್ಕೆ ಅನೇಕರು ಕಾಯಿಲೆಗಳಿಗೆ ಒಳಗಾಗುತ್ತಿದ್ದು, ವೇತನ ಹೆಚ್ಚಳದ ಜೊತೆಗೆ ಖಾಯಂ ಉದ್ಯೋಗ ಸ್ಥಾನಮಾನಕ್ಕೆ ಕಾರ್ಮಿಕರು ಒತ್ತಾಯಿಸಿದ್ದಾರೆ.

ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ 593 ಕಾಂಪ್ಯಾಕ್ಟರ್ ವಾಹನ ಚಾಲಕರು, 9,300 ಆಟೊ ಟಿಪ್ಪರ್ ಚಾಲಕರು ಮತ್ತು ಸಹಾಯಕರು, 1,800 ಲೋಡರ್‌ಗಳಿಗೂ ಕಾಯಂ ಉದ್ಯೋಗ ನೀಡಬೇಕು ಎಂದು ಅಖಿಲ ಭಾರತ ಕೇಂದ್ರೀಯ ಕಾರ್ಮಿಕ ಸಂಘಗಳ ಒಕ್ಕೂಟದ ಬಿಬಿಎಂಪಿ ಪೌರಕಾರ್ಮಿಕರ ಸಂಘದ ಸದಸ್ಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : KSRTC bus Rate hike: ಪ್ರಯಾಣಿಕರಿಗೆ ಬಿಗ್‌ ಶಾಕ್‌ ನೀಡಿದ KSRTC: ಮೈಸೂರು ‌- ಬೆಂಗಳೂರು ನಡುವೆ ಪ್ರಯಾಣದ ಬಸ್ ದರ ಹೆಚ್ಚಳ

ಇದನ್ನೂ ಓದಿ : Karnataka weather : ಕರಾವಳಿ ಸೇರಿ‌ ರಾಜ್ಯದ ಹಲವೆಡೆ 5 ದಿನ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ಇದನ್ನೂ ಓದಿ : ಬೆಂಗಳೂರು-ಮೈಸೂರು ಇ-ಹೈವೇಯಲ್ಲಿ ಇಂದಿನಿಂದಲೇ ಟೋಲ್‌ ಸಂಗ್ರಹ: ಭಾರೀ ವಿರೋಧದ ನಡುವೆಯೂ ಟೋಲ್‌ ಅರಂಭ

BBMP Strike: Demand for permanent employment : Mon. Protest by BBMP civil servants on 20

RELATED ARTICLES

Most Popular