Dead body in plastic bag: ಪ್ಲಾಸ್ಟಿಕ್ ಚೀಲದಲ್ಲಿ ಮಹಿಳೆಯ ಕೊಳೆತ ಶವ ಪತ್ತೆ : ಮಗಳು ಪೊಲೀಸರ ವಶಕ್ಕೆ

ಮುಂಬೈ: (Dead body in plastic bag) ನಗರದ ಲಾಲ್‌ಬಾಗ್ ಪ್ರದೇಶದಲ್ಲಿ 53 ವರ್ಷದ ಮಹಿಳೆಯ ಕೊಳೆತ ಶವ ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ 22 ವರ್ಷದ ಮಗಳನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಮೃತ ಮಹಿಳೆಯನ್ನು ವೀಣಾ ಪ್ರಕಾಶ್ ಎಂದು ಗುರುತಿಸಲಾಗಿದೆ.

ಸಂತ್ರಸ್ತೆಯ ಸಹೋದರ ಮತ್ತು ಸೋದರಳಿಯ ಈ ಹಿಂದೆ ಕಲಾಚೌಕಿ ಪೊಲೀಸ್ ಠಾಣೆಯಲ್ಲಿವ ಮಹಿಳೆ ನಾಪತ್ತೆಯಾಗಿರುವುದಾಗಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ತನಿಖೆ ಮುಂದುವರೆಸಿದ ಪೊಲೀಸರು ಅಪಾರ್ಟ್ಮೆಂಟ್ನಲ್ಲಿ ಶೋಧ ನಡೆಸಿದ್ದು, ಅಪಾರ್ಟ್ಮೆಂಟ್ ನ ಮೊದಲ ಮಹಡಿಯಲ್ಲಿ ಮಹಿಳೆಯ ಕೊಳೆತ ದೇಹವು ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾಗಿದೆ. ಮೃತ ಮಹಿಳೆಯನ್ನು ವೀಣಾ ಪ್ರಕಾಶ್ ಎಂದು ಗುರುತಿಸಲಾಗಿದ್ದು, ಆಕೆಯ ದೇಹದ ಕೈಕಾಲುಗಳನ್ನು ತುಂಡರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕಲಾಚೌಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

“53 ವರ್ಷದ ಮಹಿಳೆಯ ಕೊಳೆತ ದೇಹವು ಲಾಲ್‌ಬಾಗ್ ಪ್ರದೇಶದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾಗಿದೆ. ಮೃತ ಮಹಿಳೆಯ 22 ವರ್ಷದ ಮಗಳನ್ನು ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಪ್ರವೀಣ್ ಮುಂದೆ ತಿಳಿಸಿದ್ದಾರೆ. ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : Aligarh Crime: ಸಾರ್ವಜನಿಕ ಪ್ರದೇಶದಲ್ಲಿ ಅನುಚಿತವಾಗಿ ಡ್ರೆಸ್ಸಿಂಗ್ ಮಾಡಿ ಓಡಾಡುತ್ತಿದ್ದ ಪತ್ನಿಯನ್ನು ಕೊಂದೆ ಬಿಟ್ಟ ಪತಿರಾಯ

ಬೆಂಗಳೂರಿನ ಎಸ್‌ಎಂವಿಟಿ ರೈಲು ನಿಲ್ದಾಣದಲ್ಲಿ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಅಪರಿಚಿತ ಮಹಿಳೆಯ ಮತ್ತೊಂದು ಕೊಳೆತ ಶವ ಪತ್ತೆಯಾಗಿದ್ದು, ಒಂದು ದಿನದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಡ್ರಮ್ ಹೊತ್ತೊಯ್ಯುತ್ತಿದ್ದ ಮೂವರ ಪತ್ತೆಗೆ ಶೋಧ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಬೆಳಗ್ಗೆ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿಗಳು ದುರ್ವಾಸನೆ ಬರುತ್ತಿದ್ದನು ಗಮನಿಸಿದ್ದು, ಬಳಿಕ ಘಟನೆ ಬೆಳಕಿಗೆ ಬಂದಿದೆ.

Dead body in plastic bag: Decomposing body of a woman found in a plastic bag: Daughter in police custody

Comments are closed.