ಬೆಂಗಳೂರು: ವಾಹನ ಮಾಲೀಕರು ಹಾಗೂ ಸವಾರರಿಗೆ ಮತ್ತೆ ಗುಡ್ ನ್ಯೂಸ್ ಸಿಕ್ಕಿದೆ. ಸಂಚಾರ ದಂಡ (Traffic Fines discount ) 50% ರಿಯಾಯಿತಿ ನೀಡಲಾಗುತ್ತಿರುವ ಅವಧಿಯನ್ನು ವಿಸ್ತರಣೆ ಮಾಡುವುದಾಗಿ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರಾಗಿರುವ ಹೈಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ವಿರಪ್ಪ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಅಧಿಕೃತ ಆದೇಶ ಹೊರ ಬೀಳುವ ಸಾಧ್ಯತೆಯಿದೆ.
ಬೆಂಗಳೂರಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಟ್ರಾಫಿಕ್ ದಂಡ ಶೇ.50% ರಷ್ಟು ರಿಯಾಯಿತಿಯನ್ನು ವಿಸ್ತರಣೆ ಮಾಡಲು ಜನಸಾಮಾನ್ಯರಿಂದ ಬೇಡಿಕೆಯಿದೆ. ಅಲ್ಲದೇ ಈ ಕುರಿತು ಸಾರಿಗೆ ಇಲಾಖೆಯಿಂದಲೂ ಕೂಡ ಪತ್ರಬಂದಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಅವರು ಕೂಡ ಪ್ರಸ್ತಾವನೆ ಸಲ್ಲಿಸಿದ್ದಾರೆ. ಹೀಗಾ ಗಿರಿಯಾಯಿತಿ ದಂಡ ಸಂಗ್ರಹವನ್ನು ಮತ್ತೆ ವಿಸ್ತರಿಸಲಾಗಿದ್ದು, ಫೆ.14 ರಿಂದ 24ರವರೆಗೂ ಕಾಲಾವಕಾಶವಿದೆ. ಈ ಕುರಿತು ಇಂದು ಅಧಿಕೃತ ತೀರ್ಮಾನಕೈಗೊಳ್ಳಲಾಗುತ್ತದೆ.
ಈ ಹಿಂದೆ ದಂಡ ಪಾವತಿಸಲು ಫೆ.11 ಕೊನೆಯ ದಿನಾಂಕವಾಗಿತ್ತು. ಕೊನೆಯ ದಿನಾಂಕವನ್ನು ವಿಸ್ತರಿಸಬೇಕೆಂದು ಜನರಿಂದ ಮನವಿ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ದಂಡ ವಿನಾಯಿತಿಯ ಮುಂದುವರಿಕೆಗೆ ಸಂಚಾರ ವಿಶೇಷ ಆಯುಕ್ತ ಮನವಿ ಮಾಡಿದ್ದರು. 2 ವಾರಗಳ ಕಾಲ ವಿನಾಯಿತಿ ವಿಸ್ತರಣೆಗೆ ಮನವಿ ಮಾಡಲಾಗಿದೆ. ಫೆ. 14 ರಿಂದ ಫೆ. 28ರವರೆಗೆ ಮುಂದುವರಿಸುವ ಚಿಂತನೆ ಇದೆ. ಬೆಂಗಳೂರಿನಲ್ಲಿ ಸಂಚಾರಿ ದಂಡದಲ್ಲಿ ವಿನಾಯಿತಿ ನೀಡುತ್ತಿದ್ದಂತೆಯೇ ವಾಹನ ಸಾವರರು ದಂಡ ಪಾವತಿ ಮಾಡಲು ಮುಗಿಬಿದ್ದಿದ್ದರು. ಹಲವು ಸಮಯದಿಂದಲೂ ಬಾಕಿ ಉಳಿಸಿಕೊಂಡಿದ್ದ ದಂಡವನ್ನು ಡಿಸ್ಕೌಂಟ್ ಪಡೆದು ಪಾವತಿ ಮಾಡಿದ್ದಾರೆ. ಇನ್ನೊಂದೆಡೆಯಲ್ಲಿ ಪೊಲೀಸ್ ಇಲಾಖೆಯ ಬೊಕ್ಕಸ ತುಂಬಿದ್ದು, ಕೇವಲ 10 ದಿನಗಳ ಅವಧಿಯಲ್ಲಿ ಬರೋಬ್ಬರಿ 122 ಕೋಟಿ ರೂಪಾಯಿ ಹಣ ಹರಿದು ಬಂದಿದೆ. ಅಲ್ಲದೇ 42 ಲಕ್ಷ ಪ್ರಕರಣಗಳು ಇತ್ಯರ್ಥವಾಗಿದೆ.
ರಿಯಾಯಿತಿಯ ಕುರಿತು ಸರ್ಕಾರವನ್ನು ಒಪ್ಪಿಸಲು ನಮಗೆ ಮೂರು ತಿಂಗಳು ಕಾಲಾವಕಾಶ ಹಿಡಿಯಿತು. ಇದೀಗ ದಂಡ ಪಾವತಿ ಮಾಡುವ ಅವಧಿ ವಿಸ್ತರಣೆಗೆ ಕಾಲಾವಕಾಶ ಕೇಳಿದರು. ಈ ಕುರಿತು ವಿಶೇಷ ಆಯುಕ್ತರು ಪತ್ರ ಸಹ ಬರೆದಿದ್ದರು. ಜೊತೆಗೆ ಹಲವರು ಸಮಯ ವಿಸ್ತರಿಸಲು ಕಾಲಾವಕಾಶ ಕೇಳಿದ್ದರು. ಹೀಗಾಗಿ ದಂಡ ಕಟ್ಟಲು ಮತ್ತೆ ಕಾಲಾವಕಾಶ ನೀಡುವ ಚಿಂತನೆ ನಡೆಸಲಾಗಿದೆ. ಇನ್ನೂ ಎರಡು ಕೋಟಿಯಷ್ಟು ಟ್ರಾಫಿಕ್ ಕೇಸ್‍ಗಳು ಬಾಕಿಯಿವೆ. 800 ಕೋಟಿ ರೂ.ಗೂ ಹೆಚ್ಚು ಫೈನ್ ಹಣ ಸಂಗ್ರಹವಾಗಬೇಕಿದೆ ಎಂದರು.
ಇದನ್ನೂ ಓದಿ : Power cut in Udupi : ಉಡುಪಿ : ಫೆ.14 ಮತ್ತು 15ರಂದು ಜಿಲ್ಲೆಯಾದ್ಯಂತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
ಇದನ್ನೂ ಓದಿ: PDO Recruitment 2023 : ಪಿಡಿಒ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್ ನೀಡಿದ ರಾಜ್ಯ ಸರಕಾರ
Bengaluru pay Traffic Fines with 50 percent discount extend till feb 24