ನವದೆಹಲಿ : ತೈಲ ಬೆಲೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನಸಾಮಾನ್ಯನಿಗೆ ಶೀಘ್ರದಲ್ಲೇ ಮತ್ತೊಂದು ಶಾಕ್ ಎದುರಾಗಲಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ಜನರಿಗೆ ಪವರ್ ಶಾಕ್ (Electricity Bill) ನೀಡಲು ಬೆಸ್ಕಾಂ ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಪ್ರತಿ ಯುನಿಟ್ಗೆ 1 ರೂಪಾಯಿ 50 ಪೈಸೆ ಹೆಚ್ಚಳ ಮಾಡಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಬೆಸ್ಕಾಂ (bescom) ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ .
ಒಂದೆಡೆ ಇಂಧನ ದರ ಏರಿಕೆ ಚಿಂತೆ ಮತ್ತೊಂದೆಡೆ ಅಗತ್ಯ ವಸ್ತುಗಳ ದರ ಏರಿಕೆ ಇದೀಗ ವಿದ್ಯುತ್ ದರದಲ್ಲೂ ಏರಿಕೆ ಕಂಡು ಬರುವ ಎಲ್ಲಾ ಲಕ್ಷಣಗಳು ಗೋಚರವಾಗಿದ್ದು ಜನಸಾಮಾನ್ಯ ತಲೆ ಮೇಲೆ ಕೈ ಇಡುವಂತಾಗಿದೆ. ನಷ್ಟದ ಕಾರಣ ನೀಡಿ ಬೆಸ್ಕಾಂ, ಮೆಸ್ಕಾಂ ಸೇರಿದಂತೆ ಇತರೆ ಕಂಪನಿಗಳು ಪ್ರತಿ ವರ್ಷದಂತೆ ಈ ವರ್ಷವೂ ಬೆಲೆ ಏರಿಕೆ ಮಾಡುವಂತೆ ಕೆಇಆರ್ಸಿಗೆ ಪ್ರಸ್ತಾವನೆ ಸಲ್ಲಿಕೆ ಮಾಡಿವೆ.
ಕಳೆದ ವರ್ಷದ 1 ರೂಪಾಯಿ 39 ಪೈಸೆ ದರ ಹೆಚ್ಚಳಕ್ಕೆ ಕೆಇಆರ್ಸಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಬಾಗಿ 1 ರೂಪಾಯಿ 50 ಪೈಸೆ ಪ್ರತಿ ಯೂನಿಟ್ಗೆ ದರ ಹೆಚ್ಚಳ ಮಾಡುವಂತೆ ಬೆಸ್ಕಾಂ ಮನವಿ ಮಾಡಿದೆ.
2009ರಲ್ಲಿ ಪ್ರತಿಯುನಿಟ್ ವಿದ್ಯುತ್ಗೆ 34 ಪೈಸೆ ಹೆಚ್ಚಳ ಮಾಡಲಾಗಿತ್ತು. ಮಾರನೇ ವರ್ಷವೇ ಅಂದರೆ 2010ರಲ್ಲಿ ಪ್ರತಿ ಯೂನಿಟ್ಗೆ ಮತ್ತೆ 30 ಪೈಸೆ ಏರಿಕೆ ಮಾಡಲಾಗಿತ್ತು. 2011ರಲ್ಲಿ ಪ್ರತಿ ಯೂನಿಟ್ಗೆ 28 ಪೈಸೆ, 2012ರಲ್ಲಿ 13 ಪೈಸೆ, 2017ರಲ್ಲಿ ಪ್ರತಿ ಯೂನಿಟ್ಗೆ 48 ಪೈಸೆ, 2019ರಲ್ಲಿ ಪ್ರತಿ ಯೂನಿಟ್ಗೆ 35 ಪೈಸೆ ಹಾಗೂ ಕಳೆದ ವರ್ಷ ಪ್ರತಿ ಯೂನಿಟ್ಗೆ 30 ಪೈಸೆ ಹೆಚ್ಚಳ ಮಾಡಲಾಗಿದೆ. ಈ ಬಾರಿಯೂ ಕೆಇಆರ್ಸಿ ಬೆಸ್ಕಾಂ ಮನವಿಗೆ ಸ್ಪಂದಿಸಲಿ ಗ್ರಾಹಕರ ಜೇಬು ಮತ್ತಷ್ಟು ಸುಡಲಿದೆ.
ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ವಿದ್ಯುತ್ ವ್ಯತ್ಯಯ
ಬೆಂಗಳೂರು : ನಗರ ಹಲವು ಏರಿಯಾಗಳಲ್ಲಿ ಡಿಸೆಂಬರ್ 10 ರಿಂದ 13ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ವರದಿಗಳ ಪ್ರಕಾರ ಜಿಜಿ ಲಾಯಲ್, ಶಾಂತಿ ಲೇಔಟ್ ಎಂಟರೆನ್ಸ್, ಕೋಣಪ್ಪನ ಅಗ್ರಹಾರ , ದೊಡ್ಡ ತೋಗೂರು ಸೇರಿದಂತೆ ಹಲವೆಡೆ ಈ ದಿನಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎನ್ನಲಾಗಿದೆ.
ದೊಡ್ಡ ತೋಗೂರಿನ 5, 6 ಹಾಗೂ 7ನೇ ಮುಖ್ಯರಸ್ತೆ ಮತ್ತು 9ನೇ ಕ್ರಾಸ್ ರಸ್ತೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಇನ್ನುಳಿದಂತೆ ಆದರ್ಶ ಪಾಮ್ ಅಪಾರ್ಟ್ಮೆಂಟ್ಸ್ ರಸ್ತೆ, 11ನೇ ಬ್ಲಾಕ್ ಬಿಡಿಎ ಲೇ ಔಟ್, ರಾಯಲ್ ಪಾರ್ಕ್ ರೆಸಿಡೆನ್ಸಿ ಸೇರಿದಂತೆ ಹಲವೆಡೆ ನಾಳೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಇನ್ನು ಶನಿವಾರ ಅಂದರೆ ಡಿಸೆಂಬರ್ 11ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವೇಳೆಯಲ್ಲಿ ಮೈಕೋ ಲೇಔಟ್, ಬೇಗೂರು ಹಾಗೂ ಹೊಂಗಸಂದ್ರದ ಜನತೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ತಿಳಿದುಬಂದಿದೆ.
ಡಿಸೆಂಬರ್ 13ರಂದು ಕೆಆರ್ಬಿ ಲೇ ಔಟ್ 4ನೇ ಮುಖ್ಯರಸ್ತೆ, ನಾರಾಯಣ ನಗರ 2ನೇ ಬ್ಲಾಕ್ , ಕೆಎಲ್ವಿ ಲೇಔಟ್ ಸೇರಿದಂತೆ ಹಲವೆಡೆ ಪವರ್ ಕಟ್ ಆಗಲಿದೆ. ಕೆಪಿಟಿಸಿಎಲ್ ಹಾಗೂ ಬೆಸ್ಕಾಂ ನಿರ್ವಹಣಾ ಕಾರ್ಯದಲ್ಲಿ ತೊಡಗಿಕೊಂಡಿರುವ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಸಹಕರಿಸುವಂತೆ ಬೆಂಗಳೂರು ಜನತೆಯಲ್ಲಿ ಬೆಸ್ಕಾಂ ಮನವಿ ಮಾಡಿದೆ. ಬೆಳಗ್ಗೆ 10ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ನಿರ್ವಹಣೆ ಹೆಸರಿನಲ್ಲಿ ಬೆಸ್ಕಾಂ ಪದೇ ಪದೇ ಈ ರೀತಿ ವಿದ್ಯುತ್ ವ್ಯತ್ಯಯ ಮಾಡುತ್ತಿರೋದು ಬೆಂಗಳೂರು ಜನತೆಯ ಕಣ್ಣು ಕೆಂಪಗಾಗಿಸಿದೆ. ವಿದ್ಯುತ್ಗೆ ಪರ್ಯಾಯ ಮಾರ್ಗವೇ ಇಲ್ಲದ ಕೆಲವರು ವರ್ಕ್ ಫ್ರಾಂ ಹೋಂ ಮಾಡೋದು ಹೇಗಪ್ಪ ಎಂಬ ಚಿಂತೆಯಲ್ಲಿದ್ದಾರೆ. ಇತ್ತ ವಿದ್ಯುತ್ ಸಂಚಾರವನ್ನೇ ನಂಬಿರುವ ಅನೇಕ ಫ್ಯಾಕ್ಟರಿ ಮಾಲೀಕರು ಪದೇ ಪದೇ ಪವರ್ ಕಟ್ ಮಾಡಿದರೆ ನಮ್ಮ ಜೀವನ ಹೇಗೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಇದನ್ನು ಓದಿ : Airport Health Test : ಓಮಿಕ್ರಾನ್ ಭೀತಿಗೆ ಟೈಟ್ ರೂಲ್ಸ್ : ಏರ್ಪೋರ್ಟ್ ನಲ್ಲಿ ಪ್ರಯಾಣಿಕರಿಗೆ ಕಡ್ಡಾಯ ಹೆಲ್ತ್ ಟೆಸ್ಟ್
ಇದನ್ನೂ ಓದಿ : 10 Years Sentence : ಬೈಂದೂರು ಅಪ್ರಾಪ್ತ ನಾದಿನಿ ಅತ್ಯಾಚಾರ ಪ್ರಕರಣ : 10 ವರ್ಷ ಶಿಕ್ಷೆ, 20 ಸಾವಿರ ದಂಡ
BESCOM proposes a hike in electricity Bill
