Vinod Kambli : ಸೈಬರ್​ ವಂಚಕರ ಜಾಲದಲ್ಲಿ ಸಿಲುಕಿದ ಮಾಜಿ ಕ್ರಿಕೆಟಿಗ ವಿನೋದ್​ ​ ಕಾಂಬ್ಳಿ..!

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್​ ಕಾಂಬ್ಳಿ(Vinod Kambli) ಸೈಬರ್​ ವಂಚಕರ ಜಾಲಕ್ಕೆ ಬಿದ್ದಿದ್ದಾರೆ. ಖಾಸಗಿ ಬ್ಯಾಂಕ್​​ನ ಎಕ್ಸಿಕ್ಯೂಟಿವ್​ ಸೋಗಿನಲ್ಲಿ ಕರೆ ಮಾಡಿದ ವಂಚಕ ವಿನೋದ್​ ಕಾಂಬ್ಳಿಯಿಂದ 1.14 ಲಕ್ಷ ರೂಪಾಯಿಗಳನ್ನು ವಂಚಿಸುವಲ್ಲಿ ಯಶಸ್ವಿಯಾಗಿದ್ದಾನೆ. ಕೆವೈಸಿ ಮಾಹಿತಿ ಕೇಳುವ ನೆಪದಲ್ಲಿ ಈ ಹಣವನ್ನು ದೋಚಲಾಗಿದೆ. ಈ ಸಂಬಂಧ ಬಾಂದ್ರಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.
ಬ್ಯಾಂಕ್​ ಸಹಾಯದಿಂದ ಬಾಂದ್ರಾ ಠಾಣೆ ಪೊಲೀಸರು ಟಾನ್ಸಾಕ್ಷನ್​​ನ್ನು ರಿವರ್ಸ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೂರಿನ ಪ್ರಕಾರ, ವಿನೋದ್​ ಕಾಂಬ್ಳೆಗೆ ಖಾಸಗಿ ಬ್ಯಾಂಕ್​​ನ ಎಕ್ಸಿಕ್ಯೂಟಿವ್​ ಎಂದು ಪರಿಚಯ ಮಾಡಿಕೊಂಡ ವಂಚಕ ಕೆವೈಸಿ ಅಪ್​ಡೇಟ್​ ಮಾಡುವಂತೆ ಕೇಳಿದ್ದಾನೆ. ಕೆವೈಸಿ ಅಪ್​ಡೇಟ್​ ಮಾಡದೇ ಹೋದಲ್ಲಿ ನಿಮ್ಮ ಕಾರ್ಡ್​ ಡಿ ಆ್ಯಕ್ಟಿವೇಟ್​ ಆಗಲಿದೆ ಎಂದು ಹೇಳಿದ್ದನಂತೆ.
ಎಕ್ಸಿಕ್ಯೂಟಿವ್​ ಮಾತಿನಂತೆಯೇ ಎನಿ ಡೆಸ್ಕ್​ ಅಪ್ಲಿಕೇಶನ್​​ನ್ನು ಕಾಂಬ್ಳಿ ಡೌನ್​ಲೋಡ್​ ಮಾಡಿದ್ದಾರೆ.ಈ ಆ್ಯಪ್​ನ ಸಹಾಯದಿಂದ ಕಾಂಬ್ಳೆ ಬ್ಯಾಂಕಿಂಗ್​ ಮಾಹಿತಿಯನ್ನು ವಂಚಕ ಸುಲಭವಾಗಿ ಪಡೆದುಕೊಂಡಿದ್ದ. ಕಾಂಬ್ಳಿ ಫೋನ್​ ಕರೆಯಲ್ಲಿ ಇರುವಾಗಲೇ ಖಾತೆಯಲ್ಲಿನ ಹಣ ಡೆಬಿಟ್​ ಆಗಿದೆ ಎಂದು ತಿಳಿದುಬಂದಿದೆ.
ಕಾಂಬ್ಳಿಗೆ ತಾನು ವಂಚಕರ ಜಾಲದಲ್ಲಿ ಸಿಲುಕಿದ್ದೇನೆ ಎಂದು ತಿಳಿದ ತಕ್ಷಣ ತಮ್ಮ ಸಿಎಗೆ ಹಾಗೂ ಬ್ಯಾಂಕ್​ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಸೈಬರ್​ ಪೊಲೀಸರು ಹಣವನ್ನು ರಿವರ್ಸ್​ ಟ್ರಾನ್ಸಾಕ್ಷನ್​ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಪೊಲೀಸ್​ ಅಧಿಕಾರಿಗಳು, ರಿವರ್ಸ್ ಟ್ರಾನ್ಸಾಕ್ಷನ್​ ಮೂಲಕ ವಿನೋದ್​ ಕಾಂಬ್ಳಿ ಕಳೆದುಕೊಂಡಿದ್ದ ಹಣವನ್ನು ಮರಳಿಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಾವು ಯಾವ ಖಾತೆಗೆ ಹಣ ವರ್ಗಾವಣೆಯಾಗಿದೆ ಹಾಗೂ ಯಾವ ನಂಬರ್​ನಿಂದ ಫೋನ್​ ಕರೆ ಬಂದಿದೆಯೋ ಅವೆಲ್ಲವನ್ನೂ ಪರಿಶೀಲಿಸುತ್ತಿದ್ದೇವೆ. ಕಾಲ್​ ರೆಕಾರ್ಡ್​ ಕೂಡ ಪಡೆಯಲಾಗಿದೆ. ಇವೆಲ್ಲವನ್ನು ಆಧರಿಸಿ ಶೀಘ್ರದಲ್ಲಿಯೇ ಆರೋಪಿಗಳನ್ನು ಹಿಡಿಯುತ್ತೇವೆ. ಆದರೆ ಕೆವೈಸಿ ದಾಖಲೆಗಳನ್ನು ಒಟಿಪಿಗಳನ್ನು ಯಾವುದೇ ಕಾರಣಕ್ಕೂ ಇನ್ನೊಬ್ಬರ ಜೊತೆಯಲ್ಲಿ ಶೇರ್​ ಮಾಡಬೇಡಿ ಎಂದು ಹೇಳಿದ್ರು.

Vinod Kambli loses Rs 1 lakh in online fraud, police recover amount

ಇದನ್ನು ಓದಿ : 4 Members Suicide : ಮಂಗಳೂರಲ್ಲಿ ಘೋರ ದುರಂತ : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಇದನ್ನೂ ಓದಿ : Gujarat Court :ಅತ್ಯಾಚಾರ ನಡೆದ ಒಂದೇ ತಿಂಗಳಲ್ಲಿ ಆರೋಪಿಗೆ ಶಿಕ್ಷೆ ಪ್ರಕಟಿಸಿದೆ ಈ ನ್ಯಾಯಾಲಯ..!

Comments are closed.