ಫ್ಯಾಮಿಲಿ ಪಾಲಿಟಿಕ್ಸ್ ಗೆ ಟ್ವಿಸ್ಟ್ : ದೇವೇಗೌಡರ ಅಂಗಳ ತಲುಪಿದ ಭವಾನಿ ಟಿಕೇಟ್ ಬೇಡಿಕೆ

ಶತಾಯ ಗತಾಯ ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೇರುವ ಕನಸಿನಲ್ಲಿರೋ ಜೆಡಿಎಸ್ ಗೆ ಈಗ ತವರು ಕ್ಷೇತ್ರದ ಹಾಗೂ ಕುಟುಂಬದ ಬಂಡಾಯವೇ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ ಕುಟುಂಬ ರಾಜಕಾರಣ ಎಂಬ ಹಣೆಪಟ್ಟಿ ಕಟ್ಟಿಕೊಂಡಿರೋ ಕಾಂಗ್ರೆಸ್ ಗೆ ಈಗ ಟಿಕೇಟ್ ಆಕಾಂಕ್ಷಿಯಾಗಿರೋ ದೊಡ್ಡಗೌಡ್ರ ಸೊಸೆ (Bhavani Revanna Gowda) ಮತ್ತೊಮ್ಮೆ ಮುಜುಗರ ತಂದಿಟ್ಟಿದ್ದಾರೆ.

ಹೌದು ರಾಜ್ಯದೆಲ್ಲೆಡೆ ಪಂಚರತ್ನ ಯಾತ್ರೆ ಮೂಲಕ ಹವಾ ಸೃಷ್ಟಿಸಿರೋ ಜೆಡಿಎಸ್ ಈ ಪಕ್ಷದ ಪರ ಅಲೆಯನ್ನು ಮತವಾಗಿ ಬದಲಾಯಿಸಿಕೊಳ್ಳೋ ಉತ್ಸಾಹದಲ್ಲಿದೆ. ಆದರೆ ಈ ಉತ್ಸಾಹಕ್ಕೆ ಈಗ ಹಾಸನ ಟಿಕೇಟ್‌ಹಂಚಿಕೆ ಸಮಸ್ಯೆ ತಲೆನೋವು ಹಾಗೂ ಮುಜುಗರದ ಕಾರಣವಾಗಿದೆ.ಕುಟುಂಬ ರಾಜಕಾರಣ ಹಾಗೂ ಕಾರ್ಯಕರ್ತರ ಕಡೆಗಣನೆಯ ಹಣೆಪಟ್ಟಿ ಯಿಂದ ಹೊರಬರೋ ಪ್ರಯತ್ನದಲ್ಲಿದ್ದ ಎಚ್‌ಡಿಕೆ ಈ ಭಾರಿ ಪತ್ನಿಯ ಸೀಟು ಕಸಿದು ಪುತ್ರನಿಗೆ ಟಿಕೇಟ್ ನೀಡೋ ನಿರ್ಧಾರಕ್ಕೆ ಬಂದಿದ್ದರು.

ಆದರೆ ಹಾಸನದಲ್ಲಿ ಮಾತ್ರ ಮತ್ತೆ ಜೆಡಿಎಸ್ ಅಪ್ಪ ಮಕ್ಕಳ ಪಕ್ಷ ಎಂಬ ಮಾತು ಕೇಳುವಂಥ ಸ್ಥಿತಿ ಎದುರಾಗಿದ್ದು, ಸ್ವರೂಪ್ ಬದಲು ಪತ್ನಿಗೆ ಟಿಕೇಟ್ ನೀಡುವಂತೆ ರೇವಣ್ಣ ಪಟ್ಟು ಹಿಡಿದಿದ್ದಾರೆ. ಹಲವು ಭಾರಿ ಮನವೊಲಿಕೆ ಬಳಿಕವೂ ಭವಾನಿ ರೇವಣ್ಣ ಟಿಕೇಟ್ ಆಕಾಂಕ್ಷೆಯಿಂದ ಹೊರಬಂದಿಲ್ಲ. ಈ ಮಧ್ಯೆ ಸ್ವತಃ ಮಾಜಿ ಸಚಿವ ರೇವಣ್ಣ ಹಾಗೂ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಪದ್ಮನಾಭ ನಗರದ ನಿವಾಸದಲ್ಲಿ ದೇವೇಗೌಡರನ್ನು ಭೇಟಿ ಮಾಡಿದ್ದಾರಂತೆ.

ಸೂರಜ್ ರೇವಣ್ಣ ಹಾಗೂ ರೇವಣ್ಣ ದೇವೇಗೌಡರ ಜೊತೆ ಮಾತುಕತೆ ನಡೆಸಿದ್ದು, ಹಾಸನದಲ್ಲಿ ಆದ ಅಭಿವೃದ್ಧಿ ಅದಕ್ಕಾಗಿ ಅನುದಾನ ತರೋದರಲ್ಲಿ ತಾವು ಶ್ರಮಿಸಿದ ರೀತಿಯನ್ನು ಮನದಟ್ಟು ಮಾಡಿಸುವ ಪ್ರಯತ್ನ ಮಾಡಿದ್ದಾರಂತೆ. ಮಾತ್ರವಲ್ಲದೇ, ನಿಧಾನಕ್ಕೆ ಹಾಸನದಲ್ಲಿ ಬಿಜೆಪಿಯ ಪ್ರಾಬಲ್ಯ ಹೆಚ್ಚುತ್ತಿದ್ದು, ಒಂದೊಮ್ಮೆ ಸ್ವರೂಪ್ ಗೆ ಟಿಕೇಟ್ ನೀಡಿದರೇ ಬಿಜೆಪಿ ಗೆಲುವಿನ ಹಾದಿ ಸುಗಮವಾಗಲಿದೆ ಎಂದು ಹೇಳಿದ್ದಾರಂತೆ.ಇದೇ ಕಾರಣಕ್ಕೆ ಹಾಗೂ ಹಾಸನದ ಜನತೆ ದೇವೇಗೌಡರ ಕುಟುಂಬದ ಮೇಲಿಟ್ಟಿರೋ ಪ್ರೀತಿ ಅಭಿಮಾನವನ್ನು ಉಳಿಸಿಕೊಳ್ಳೋಕೆ ಭವಾನಿ ರೇವಣ್ಣಾಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರಂತೆ.

ಇದನ್ನೂ ಓದಿ : Former CM Siddaramaiah : ಕೋಲಾರದಲ್ಲಿ ಸಿದ್ದರಾಮಯ್ಯ ಗೆಲುವಿಗೆ ಪಣ: ಕ್ಷೇತ್ರದಲ್ಲೇ ಬೀಡುಬಿಟ್ಟ ಪುತ್ರ ಯತೀಂದ್ರ

ಇದನ್ನೂ ಓದಿ : ಎಚ್.ಡಿ. ಕುಮಾರಸ್ವಾಮಿ ಸಿಡಿಯೂ ಇದೆ: ಬಿಜೆಪಿ ರವಿಕುಮಾರ್ ಸ್ಪೋಟಕ ಹೇಳಿಕೆ

ಇದನ್ನೂ ಓದಿ : BL Santhosh : ಹಿರಿಯರಿಗೆ ಕೋಕ್, ಕುಟುಂಬ ರಾಜಕಾರಣಕ್ಕೆ ಬ್ರೇಕ್ : ಟಿಕೇಟ್ ಹಂಚಿಕೆ ಬಿ.ಎಲ್.ಸಂತೋಷ್ ಹೆಗಲಿಗೆ

ಇದಕ್ಕೆ ದೇವೆಗೌಡರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ರೇವಣ್ಣ ಕುಟುಂಬದಲ್ಲಿ ರೇವಣ್ಣ ಶಾಸಕರಾಗಿದ್ದು, ಸೂರಜ್ ರೇವಣ್ಣ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಪ್ರಜ್ವಲ್ ರೇವಣ್ಣ ಸಂಸದರಾಗಿದ್ದಾರೆ. ಈಗ ಮತ್ತೆ ಭವಾನಿ ರೇವಣ್ಣಗೆ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ನೀಡೋದು ಬಹುತೇಕ ಖಚಿತವಾಗಿದ್ದು, ಜೆಡಿಎಸ್ ಈ ನಿರ್ಧಾರ ಮತ್ತೆ ಕಾಂಗ್ರೆಸ್ ಹಾಗೂ ಬಿಜೆಪಿ ಪಾಳಯಕ್ಕೆ ಹೊಸ ಅಸ್ತ್ರ ಒದಗಿಸಿದಂತಾಗಲಿರೋದಂತು ಸತ್ಯ.

Bhavani Revanna Gowda : Twist to family politics: Bhavani ticket demand reached Deve Gowda’s yard

Comments are closed.