BPL card holders : ಬಿಪಿಎಲ್‌ ಕಾರ್ಡ್‌ ದಾರರಿಗೆ ಬಿಗ್‌ ಶಾಕ್‌ : ನಾಲ್ಕು ಚಕ್ರದ ವಾಹನ ಹೊಂದಿದ್ರೆ ಭಾರೀ ದಂಡ

ಬೆಂಗಳೂರು : ಬಡವರಿಗಾಗಿ ರಾಜ್ಯ ಸರಕಾರ ಬಿಪಿಎಲ್‌ (BPL card holders), ಅಂತ್ಯೋದಯ ಕಾರ್ಡ್‌ಗಳನ್ನು ನೀಡುತ್ತಿದೆ. ಇದೇ ಕಾರ್ಡುಗಳ ಮೂಲಕ ಪಡಿತರ ವಿತರಣೆಯನ್ನು ಮಾಡುತ್ತಿದೆ. ಆದ್ರೆ ಅಕ್ರಮ ಬಿಪಿಎಲ್‌ ಕಾರ್ಡ್‌ಗಳ ಸಂಖ್ಯೆ ಹೆಚ್ಚುತ್ತಿದ್ದು, ಅಕ್ರಮ ತಡೆಗೆ ರಾಜ್ಯ ಸರಕಾರ ಇದೀಗ ದಂಡ ಪ್ರಯೋಗಕ್ಕೆ ಮುಂದಾಗಿದೆ. ಪ್ರಮುಖವಾಗಿ ನಾಲ್ಕು ಚಕ್ರದ ವಾಹನವನ್ನು ಹೊಂದಿರುವವರು ಅಂತ್ಯೋದಯ ಅಥವಾ ಬಿಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಭಾರೀ ದಂಡ ವಿಧಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

ರಾಜ್ಯ ಸರ್ಕಾರ ಸೆಪ್ಟೆಂಬರ್ 3, 2019ರ ಒಳಗಾಗಿ ನಾಲ್ಕು ಚಕ್ರದ ವಾಹನವನ್ನು ಹೊಂದಿರುವ ಬಿಪಿಎಲ್‌ ಕಾರ್ಡುದಾರರು ತಮ್ಮ ಕಾರ್ಡ್‌ನ್ನು ವಾಪಾಸ್‌ ಮಾಡುವಂತೆ ಆದೇಶ ಹೊರಡಿಸಲಾಗಿತ್ತು. ಆದ್ರೆ ಇದುವರೆಗೂ ಹಲವರು ಅಕ್ರಮ ಕಾರ್ಡುಗಳನ್ನು ಸರಕಾರಕ್ಕೆ ವಾಪಾಸ್‌ ಮಾಡಿರಲಿಲ್ಲ. ಅಲ್ಲದೇ ಹಲವು ಬಾರಿ ಗಡುವನ್ನು ವಿಸ್ತರಣೆ ಮಾಡಲಾಗಿತ್ತು. ಆದ್ರೀಗ ಅಂತಿಮವಾಗಿ ರಾಜ್ಯ ಸರಕಾರ ಪಡಿತರದಾರರಿಗೆ ದಂಡ ಪ್ರಯೋಗಕ್ಕೆ ಸಜ್ಜಾಗಿದೆ. ರಾಜ್ಯದಲ್ಲಿ 12,584 ಪಡಿತರ ಚೀಟಿದಾರರಿಗೆ ಸರ್ಕಾರ ದಂಡ ಪಾವತಿಸುವಂತೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ.

ಈಗಾಗಲೇ ನೋಟಿಸ್‌ ಜಾರಿಯಾಗಿರುವ ಕಾರ್ಡುದಾರರು ತಾಲೂಕು ಕಚೇರಿಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳ ಕಚೇರಿಗೆ ತೆರಳಿ ದಂಡ ಪಾವತಿ ಮಾಡುವಂತೆ ಸೂಚಿಸಲಾಗಿದೆ. ಜೊತೆಗೆ ಬಿಪಿಎಲ್‌ ಹಾಗೂ ಅಂತ್ಯೋದಯ ಕಾರ್ಡುಗಳನ್ನು ಹೊಂದಿರುವವರು ತಮ್ಮ ಕಾರ್ಡುಗಳನ್ನು ಎಪಿಎಲ್‌ ಕಾರ್ಡುಗಳನ್ನಾಗಿ ಪರಿವರ್ತನೆ ಮಾಡುವಂತೆ ಸೂಚಿಸಲಾಗಿದೆ.

ರಾಜ್ಯದಾದ್ಯಂತ ಇಲಾಖೆಯ ಅಧಿಕಾರಿಗಳು ಈಗಾಗಲೇ ಸರ್ವೆ ಕಾರ್ಯವನ್ನು ನಡೆಸಿ ಅಕ್ರಮ ಕಾರ್ಡುಗಳನ್ನು ಪತ್ತೆ ಮಾಡಲಾಗಿದೆ. ಮೊದಲ ಹಂತವಾಗಿ ಹನ್ನೆರಡು ಸಾವಿರ ಕಾರ್ಡುಗಳನ್ನು ಪತ್ತೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಕ್ರಮ ಕಾರ್ಡುಗಳನ್ನು ಪತ್ತೆ ಮಾಡುವಂತೆ ಅಧಿಕಾರಿಗಳಿಗೆ ರಾಜ್ಯ ಸರಕಾರ ಸೂಚನೆಯನ್ನು ನೀಡಿದೆ.

ಇದನ್ನೂ ಓದಿ : New Labour Law : ದಿನಕ್ಕೆ 12 ಗಂಟೆ, ವಾರಕ್ಕೆ 4 ದಿನ ಕೆಲಸ : ಯಾವಾಗ ಜಾರಿಯಾಗುತ್ತೆ ಗೊತ್ತಾ ಹೊಸ ಕಾರ್ಮಿಕ ಕಾನೂನು ?

ಇದನ್ನೂ ಓದಿ : Makhana Health Benefits:ನಿಮ್ಮ ಆಹಾರದಲ್ಲಿ ಕಮಲದ ಬೀಜಗಳನ್ನು ಸೇರಿಸುವುದರಿಂದ ಇರುವ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ

Big shock for BPL card holders, heavy fine for owning a wheeler

Comments are closed.