ಸೋಮವಾರ, ಏಪ್ರಿಲ್ 28, 2025
HomekarnatakaBitcoin Case : ಕುತೂಹಲ ಹೆಚ್ಚಿಸಿದೆ ಬಿಟ್‌ ಕಾಯಿನ್‌ ಪ್ರಕರಣ : ಅಷ್ಟಕ್ಕೂ ಆರೋಪಿಗಳು ಕೊಟ್ಟ...

Bitcoin Case : ಕುತೂಹಲ ಹೆಚ್ಚಿಸಿದೆ ಬಿಟ್‌ ಕಾಯಿನ್‌ ಪ್ರಕರಣ : ಅಷ್ಟಕ್ಕೂ ಆರೋಪಿಗಳು ಕೊಟ್ಟ ಹೇಳಿಕೆಯಲ್ಲೇನಿದೆ

- Advertisement -

ಬೆಂಗಳೂರು : ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಬಿಟ್ ಕಾಯಿನ್ (Bitcoin Case)ಪ್ರಕರಣ ಕುತೂಹಲ ಮೂಡಿಸುತ್ತಿದೆ. ಒಂದೆಡೆಯಲ್ಲಿ ರಾಜಕೀಯದ ಕೆಸರೆರಚಾಟ ನಡೆಯುತ್ತಿದ್ರೆ, ಇನ್ನೊಂದೆಡೆಯಲ್ಲಿ ಪೊಲೀಸರ ತನಿಖೆ ಮುಂದುವರಿದಿದೆ. ಈಗಾಗಲೇ ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ಕಚೇರಿಯಿಂದ ಪ್ರಕಣಕ್ಕೆ ಸ್ಪಷ್ಟನೆಯನ್ನು ನೀಡಲಾಗಿದೆ. ಇನ್ನೊಂದೆಡೆಯಲ್ಲಿ ಪ್ರಕರಣದ ಆರೋಪಿಗಳು ಪೊಲೀಸರ ಮುಂದೆ ನೀಡಿರುವ ಹೇಳಿಕೆಯ ಎಕ್ಸ್‌ಕ್ಲೂಸಿವ್‌ ಮಾಹಿತಿ ಬಯಲಾಗಿದೆ. ಅಷ್ಟಕ್ಕೂ ಆರೋಪಿಗಳು ಕೊಟ್ಟಿರುವ ಹೇಳಿಕೆ ಏನು ಅನ್ನೋ ಮಾಹಿತಿ ಇಲ್ಲಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸದ್ಯ 1 ಬಿಟ್ ಕಾಯಿನ್ ಬೆಲೆ 56 ಲಕ್ಷ ಮೌಲ್ಯವಿದೆ. ಬಿಟ್‌ ಕಾಯಿನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಗಳು ಬಿಟ್‌ ಕಾಯಿನ್‌, ಗೇಮಿಂಗ್‌ ಆಪ್‌ ಹ್ಯಾಕಿಂಗ್‌, ಡ್ರಗ್ಸ್‌ ಸೇವನೆಗೆ ಸಂಬಂಧಿಸಿದಂತೆ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.

ಆರೋಪಿ ಸುಮೀಷ್‌ ಹೆಗ್ಡೆ ಹೇಳಿದ್ದೇನು ?

ಬಿಟ್‌ ಕಾಯಿನ್‌ (Bitcoin Case) ಪ್ರರಕಣದ ಪ್ರಮುಖ ಆರೋಪಿ ಶ್ರೀಕೃಷ್ಣ (ಶ್ರೀಕಿ) ನಿಗೆ ಸಹಕಾರ ನೀಡಿರುವ ಆರೋಪ ಹೊತ್ತಿರುವ ಮಂಗಳೂರು ಮೂಲಕ ಸುನೀಷ್‌ ಹೆಗ್ಡೆ ಸಿಸಿಬಿ ಪೊಲೀಸರ ಮುಂದೆ ಮಹತ್ವದ ಹೇಳಿಕೆಯನ್ನು ನೀಡಿದ್ದಾನೆ. ಬೆಂಗಳೂರಿನ ಸಂಜಯನಗರದ ನಿವಾಸಿಯಾಗಿರುವ ಸುನೀಷ್‌ ಹೆಗ್ಡೆ ಬೆಂಗಳೂರಿನ ಬಿಬಿಎಂಪಿ ಮತ್ತು ಕೆಐಎಡಿಬಿಯ ಕ್ಲಾಸ್ 1 ಕಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದೇನೆ. 2018 ರಲ್ಲಿ ನಡೆದ ನಲಪಾಡ್ ಕೇಸ್ ಬೆನ್ನಲ್ಲೇ ನನಗೆ ಶ್ರೀಕಿ (ಶ್ರೀಕೃಷ್ಣ) ತನಗೆ ಪರಿಚಿತನಾಗಿದ್ದ. ಆತ ದೊಡ್ಡ ಹ್ಯಾಕರ್‌ ಅನ್ನೋದು ನನಗೆ ಗೊತ್ತಾದ ನಂತರದಲ್ಲಿ ಆತನನ್ನು ಸ್ನೇಹಿತನಾಗಿದ್ದ. ಅಲ್ಲದೇ ಇದೇ ಶ್ರೀ ಕೃಷ್ಣನ ಕಡೆಯಿಂದ 2019 ರಲ್ಲಿ ರಾಬಿನ್ ಖಂಡೇಲಾವಾಲ್ ಪರಿಚಯವಾಗಿದ್ದ. ಇನ್ನು ಶ್ರೀಕಿ ಹ್ಯಾಕ್ ಮಾಡಿದ ಬಿಟ್ ಕಾಯಿನ್ ಗಳನ್ನು ಈತನಿಗೆ ನೀಡುತ್ತಿದ್ದನು. ಅದನ್ನು ರಾಬಿನ್ ಖಂಡೇಲಾ ವಾಲ್ ಬ್ಲಾಕ್ ಟೂ ವೈಟ್ ಮಾಡುತ್ತಿದ್ದ ನಾನು, ಪ್ರಸೀದ್ ಶೆಟ್ಟಿ, ಹೇಮಂತ್, ಸುಜಯ್, ಸುರೇಶ್ ಮತ್ತು ಶ್ರೀಕಿ ಗ್ಯಾಂಗ್ ಸೇರಿ ಐಶಾರಾಮಿ ಹೊಟೇಲ್ ನಲ್ಲಿ ಯಾವಾಗಲು ಪಾರ್ಟಿ ಮಾಡುತ್ತಿದ್ದವು. ಐಟಿಸಿ ಗಾರ್ಡೇನಿಯಾ, ಸೀಜನ್, ಶಾಂಗ್ರಿಲಾ, ಗೋಕುಲಂ ಗ್ರಾಂಡ್ ನಲ್ಲಿ ಪಾರ್ಟಿ ಮಾಡಿದ್ದೇವು. ಅಲ್ಲದೇ ಕೆಲವೊಂದು ಬಾರಿ ನನ್ನ ಫ್ಲ್ಯಾಟ್‌ನಲ್ಲಿ ಸೇರಿಕೊಂಡು ಪಾರ್ಟಿದ್ದೇವೆ ಎಂದಿದ್ದಾರೆ.

ಆನ್‌ಲೈನ್‌ ಗೇಮ್‌ ಹ್ಯಾಕ್‌ನಿಂದ 50 ಲಕ್ಷ ವಸೂಲಿ

ಆರಂಭದಲ್ಲಿ ಆನ್‌ಲೈನ್‌ ಗೇಮ್‌ ಶೋ ಹ್ಯಾಕ್‌ ಮಾಡಿದ್ರೆ ಗೊತ್ತಾಗುತ್ತೆ ಅಂತಾ ಹೇಳಿದ್ದ. ನಂತರದಲ್ಲಿ ಆನ್‌ಲೈನ್‌ ಗೇಮ್‌ಗಳನ್ನು ಹ್ಯಾಕ್‌ ಮಾಡಿದ್ದಾನೆ. ಇದೇ ರೀತಿ ಯುನೋ ಕಾಯಿನ್ ಬಿಟ್ ಕಾಯಿನ್ಗಳ ಹ್ಯಾಕ್ ಮಾಡಿದ್ದಾನೆ. ನನ್ನ ಜೊತೆ ಇದ್ದರೆ ನಿನಗೆ ಬಿಟ್ ಕಾಯಿನ್ ನೀಡುವೆ ಅಂತಾ ಹೇಳಿದ್ದಅದರಿಂದ ಬಂದ ಹಣದಲ್ಲಿ ಪಾಲು ನೀಡುವೆ ಎನ್ನುತ್ತಿದ್ದನಂತೆ ಶ್ರೀಕಿ ಹೀಗಾಗಿ ಆತನ ಎಲ್ಲಾ ಖರ್ಚುಗಳನ್ನು ನಾನು ನೋಡಿಕೊಳ್ಳುತ್ತಿದ್ದೆಇಲ್ಲಿ ತನಕ ನಾನು ಶ್ರೀ ಕೃಷ್ಣನಿಗೆ 2 ಕೋಟಿ ಖರ್ಚು ಮಾಡಿದ್ದೆನೆ. ಇಷ್ಟೇ ಅಲ್ಲದೇ ಶ್ರೀಕಿ ಪೋಕರ್ ಬಾಜಿ ಗೇಮ್ ಹ್ಯಾಕ್ ಮಾಡಿ ಕಿರಿಕಿರಿ ಮಾಡಿದ್ದ. ಅವರ ಜೊತೆಗೆ ಪೋಕರ್‌ ಗೇಮ್‌ ಸುರಕ್ಷಿತ ಮಾಡುವ ನಿಟ್ಟಿನಲ್ಲಿ ಶ್ರೀಕಿ ನನಗೆ ಆಫರ್‌ ಕೊಟ್ಟಿದ್ದ. ನಂತರದಲ್ಲಿ ಸಿಇಓ ಕರೆಯಿಸಿ ಅವರ ಗೇಮ್ ಗೆ ಶ್ರೀಕಿ ಸೇಫ್ ಮಾಡಿಕೊಟ್ಟ ಇದರಿಂದ ನಮಗೆ 50 ಲಕ್ಷ ಹಣ ದೊರಕಿತ್ತು ಎಂದು ಹೇಳಿದ್ದಾನೆ.

ಬಿಬಿಎಂಪಿ ವೆಬ್‌ಸೈಟ್‌ ಹ್ಯಾಕ್‌ !

2019 ರಲ್ಲಿ ಬಿಟ್ ಕಾಯಿನ್ ಕ್ಯಾಶ್ ಮಾಡಲು ಅಕೌಂಟ್‌ ಹಾಗೂ ಅಕೌಂಟೆಂಟ್‌ ಬೇಕು ಎಂದು ಹೇಳಿದ್ದ. ಅದಕ್ಕಾಗಿ ನಾನು ಶ್ರೀಕಿಗೆ ಹೇಮಂತ್ ಮುದ್ದಪ್ಪನನ್ನು ಪರಿಚಯ ಮಾಡಿ ಕೊಟ್ಟಿದ್ದೆ. ನಂತರದಲ್ಲಿ ಶ್ರೀಕಿ ಬಿಬಿಎಂಪಿ ಈ ಪ್ರಕ್ಯೂರ್ ವೆಬ್ ಸೈಟ್ ಹ್ಯಾಕ್ ಮಾಡಿದ್ದಈ ವೇಳೆ 10.5 ಕೋಟಿ ಹಣವನ್ನು ಹೇಮಂತ್ ಕೊಟ್ಟ ಅಕೌಂಟ್‌ ಗೆ ಕಳುಹಿಸಿಕೊಟ್ಟಿದ್ದಾನೆ. ಅಲ್ಲದೇ ಬ್ರೋಕರ್‌ ಚಾರ್ಜ್‌ ಎಂದು ಶ್ರೀಕಿ ಸುಮಾರು 2 ಕೋಟಿ ರೂಪಾಯಿ ಹಣವನ್ನ ಪಡೆದುಕೊಂಡಿದ್ದಾನೆ.

ಪೋಕರ್‌ ಗೇಮ್‌ ಹ್ಯಾಕ್‌ ಮಾಡಿ ಕಸ್ಟಮರ್‌ ಡೇಟಾ ಕದ್ದಿದ್ದ ಶ್ರೀಕಿ

ತಾನೂ ಕೂಡ ಆನ್‌ಲೈನ್‌ ಗೇಮಿಂಗ್‌ ಆಪ್‌ ಹೊಂದಿದ್ದು, ಪೋಕರ್ ಸೈಂಟ್ ವೆಬ್ ಸೈಟ್ ಹ್ಯಾಕ್ ಮಾಡಿ ಶ್ರೀಕಿಯಿಂದ ಸಹಾಯ ಕೇಳಿದ್ದೆ, ನಾನು ಆಟವಾಡುವಾಗ ಎದುರಾಳಿ ಕಾರ್ಡ್ ಗಳನ್ನು ನನಗೆ ತೋರಿಸ್ತಿದ್ದ ಇದರಿಂದ ನನಗೆ ಗೆಲ್ಲಲು ಸಹಾಯವಾಗಿ ಕೋಟ್ಯಾಂತರ ಸಂಪಾದನೆ ಮಾಡಿದ್ದೇನೆ. ಆದರೆ ಅಷ್ಟೂ ಹಣವನ್ನು ನಾವೆಲ್ಲರೂ ಸೇರಿಕೊಂಡು ಮೋಜು ಮಸ್ತಿಯಲ್ಲಿಯೇ ಕಳೆದಿದ್ದೇವೆ. ಹ್ಯಾಕ್ ಮಾಡಿದ ಜಾಗ ಪತ್ತೆ ಆಗಬಾರದು ಅನ್ನೋ ಕಾರಣಕ್ಕೆ ಶ್ರೀಕಿ ಕಾಡಿಗೆ ಹೋಗಿದ್ದ. ನಂತರದಲ್ಲಿ ಸುನೀಷ್ ಹೆಗ್ಡೆ ಆತನನ್ನ ಚಿಕ್ಕಮಗಳೂರಿಗೆ ಕರೆದುಕೊಂಡು ಹೋಗಿದ್ದೇನೆ. ಅಲ್ಲದೇ ಕಬಿನಿ ಹಾರೆಂಜ್ ಕೌಂಟಿಯಲ್ಲಿ ಒಂದು ತಿಂಗಳು ಉಳಿದುಕೊಂಡಿದ್ದೇವು ಎಂದು ಹೇಳಿಕೆ ನೀಡಿದ್ದಾನೆ. ಶ್ರೀಕಿ ಬಿಟ್‌ ಕಾಯಿನ್‌ ಹ್ಯಾಕ್‌ ಮಾಡುವುದು ಮಾತ್ರವಲ್ಲದೇ ತನಗೆ ಪೋಕರ್‌ ಗೇಮ್‌ ಕಸ್ಟಮರ್‌ ಡಾಟಾವನ್ನು ಕಳ್ಳತನ ಮಾಡಲು ಒಪ್ಪಿಕೊಂಡಿದ್ದ. ನಂತರದಲ್ಲಿ ಕಸ್ಟಮರ್‌ ಡೇಟಾವನ್ನು ತನಗೆ ಕೊಡಿಸಿದ್ದ, ಆದರೆ ಹಾರ್ಡ್‌ ಡ್ರೈವ್‌ ಓಪನ್‌ ಆಗಿರಲಿಲ್ಲ, ಇದರಿಂದಾಗಿ ನಾನು ಹಾರ್ಡ್‌ ಡ್ರೈವ್‌ ಅನ್ನೂ ಆತನಿಗೆ ವಾಪಾಸ್‌ ನೀಡಿದ್ದೇನೆ. ಶ್ರೀಕಿ ಕೃತ್ಯಕ್ಕೆ ಬಳಸಿದ್ದ ಲ್ಯಾಪ್ ಟಾಪ್ & ಗ್ಯಾಜೆಟ್ಸ್ ನನ್ನ ಪ್ಲಾಟ್ ಇಟ್ಟಿದ್ದಾನೆ ಎಂದಿದ್ದಾನೆ.

ಆರೋಪಿ ಪ್ರಸೀದ ಶೆಟ್ಟಿ ಹೇಳಿದ್ದೇನು ?

ಪ್ರಕರಣದ ಮತ್ತೋರ್ವ ಆರೋಪಿ ಪ್ರಸೀದ ಶೆಟ್ಟಿ. ಈತ ಸುನೀಷ್‌ ಹೆಗ್ಡೆಯ ಚಿಕ್ಕಮ್ಮನ ಮಗ. ಮಂಗಳೂರು ಮೂಲದ ಪ್ರಸೀದ ಶೆಟ್ಟಿ ಸಿಸಿಬಿ ಮುಂದೆ ಸ್ಪೋಟಕ ಹೇಳಿಕೆಗಳನ್ನು ನೀಡಿದ್ದಾನೆ. ಬೆಂಗಳೂರಿನ ಸದಾಶಿವನಗರದಲ್ಲಿರು ಆರ್ ಎಂವಿ ಎಕ್ಸ್ಟೆನ್ಷನ್ ವಾಸವಾಗಿರುವ ತನಗೆ ಯಾವುದೇ ಕೆಲಸವಿಲ್ಲ. ಹೀಗಾಗಿ ಸದಾ ಈ ಗ್ಯಾಂಗ್‌ ಜೊತೆಗೆ ಇರುತ್ತಿದೆ. 2018 ರಲ್ಲಿ ಈತನಿಗೆ ಸುನೀಷ್ ಮೂಲಕ ಶ್ರೀಕಿಯ ಪರಿಚಯವಾಗಿತ್ತು. ಸುನೀಷ್‌ ಹೆಗ್ಡೆ ಜೊತೆಗೆ ಮಾಡಿರುವ ಎಲ್ಲಾ ಕೃತ್ಯಗಳಲ್ಲಿಯೂ ತಾನು ಭಾಗಿಯಾಗಿದ್ದೇನೆ ಎಂದು ಸಿಸಿಬಿ ಪೊಲೀಸರ ಮುಂದೆ ಹೇಳಿಕೆಯನ್ನು ದಾಖಲಿಸಿದ್ದಾನೆ.

ಆರೋಪಿ ಸುಜಯ್‌ ರಾಜ್‌ ಹೇಳಿದ್ದೇನು ?

ಬಿಟ್‌ ಕಾಯಿನ್‌ ಪ್ರಕರಣದ ಮತ್ತೋರ್ವ ಆರೋಪಿಯಾಗಿರುವ ಸುಜಯ್‌ ರಾಜ್‌ ಕೂಡ ಸದಾಶಿವನಗರ ನಿವಾಸಿಯಾಗಿದ್ದಾನೆ. ಎಲ್‌ಎಲ್‌ಬಿ ವಿದ್ಯಾಭ್ಯಾಸ ಪಡೆದಿದ್ದ ತನಗೆ ಯಾವುದೇ ಉದ್ಯೋಗ ಸಿಗಲಿಲ್ಲ. ಹೀಗಾಗಿ ನಾನು ಪ್ರಸೀದ್‌ ಶೆಟ್ಟಿ ತನಗೆ ಬಾಲ್ಯ ಸ್ನೇಹಿತ ಹೀಗಾಗಿ ನಾನು ಆತನ ಜೊತೆಯಲ್ಲಿಯೇ ಇದ್ದೆ ಎಂದು ಸಿಸಿಬಿ ಮುಂದೆ ಹೇಳಿಕೆ ನೀಡಿದ್ದಾನೆ. ಇನ್ನು ಶ್ರೀಕಿ ಬುಕ್‌ ಮಾಡಿದ್ದ ಡ್ರಗ್ಸ್‌ ತರಲು ಹೋದ ಸಂದರ್ಭದಲ್ಲಿ ಸುಜಯ್‌ ರಾಜ್‌ ಕಸ್ಟಮ್ಸ್‌ ಅಧಿಕಾರಿಗಳ ಕೈಯಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ.

ಇದನ್ನೂ ಓದಿ : Bitcoin : ಸಿಎಂ ಬೊಮ್ಮಾಯಿ ವಿರುದ್ದ ಬಿಟ್‌ಕಾಯಿನ್‌ ಅಸ್ತ್ರ ಪ್ರಯೋಗಿಸಿದ ಕಾಂಗ್ರೆಸ್‌ : ಹಗರಣ ಬಿಚ್ಚಿಟ್ಟ ಸುರ್ಜೇವಾಲ

ಇದನ್ನೂ ಓದಿ : BITCOIN CASE : ಬಿಟ್‌ ಕಾಯಿನ್‌ ಹಗರಣ : ಬೆಂಗಳೂರು ಪೊಲೀಸ್‌ ಆಯುಕ್ತರ ಸ್ಪಷ್ಟನೆ : ಅಷ್ಟಕ್ಕೂ ಯಾರು ಈ ಶ್ರೀಕಿ

(Bitcoin case: This is the statement of the accused)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular