UGC NET Admit Card 2021: ಯುಜಿಸಿ ನೀಟ್ ಪ್ರವೇಶ ಪತ್ರ ಬಿಡುಗಡೆ : ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

ನವದೆಹಲಿ : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಆಯೋಜಿಸುವ UGC NET ಪರೀಕ್ಷೆಯ ಪ್ರವೇಶ ಪತ್ರವನ್ನು( UGC NET Admit Card 2021) ಈಗಾಗಲೇ ಬಿಡುಗಡೆ ಮಾಡಲಾಗಿದೆ. ನವೆಂಬರ್ 20 ಮತ್ತು 21 ರಂದು ನಡೆಯಲಿರುವ ಪರೀಕ್ಷೆಗಳಿಗೆ ಮಾತ್ರವೇ ಪ್ರವೇಶ ಕಾರ್ಡ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಈಗಾಗಲೇ ಪರೀಕ್ಷಗೆ ನೋಂದಣಿ ಮಾಡಿಕೊಂಡಿರುವ ಅಭ್ಯರ್ಥಿಗಳು ಎನ್‌ಟಿಎ ಅಧಿಕೃತ ವೆಬ್‌ಸೈಟ್‌ https://ugcnet.nta.nic.in ಮೂಲಕ ಪ್ರವೇಶ ಪತ್ರಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಈ ಹಿಂದೆ ಅಕ್ಟೋಬರ್ 17ರಿಂದ ಎನ್‌ಇಟಿ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕೊರೊನಾ ವೈರಸ್‌ ಸೋಂಕು ( COVID-19)ನ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳುವ ಸಲುವಾಗಿ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿತ್ತು. ಇದೀಗ ಎನ್‌ಟಿಎ ( NTA) ಯುಜಿಸಿ ನೆಟ್‌ನ ಎರಡು ಸೆಷನ್‌ಗಳಾದ ಡಿಸೆಂಬರ್ 2020 ಮತ್ತು ಜೂನ್ 2021 ಸೆಷನ್‌ಗಳನ್ನು ಒಂದೇ ಬಾರಿಗೆ ನಡೆಸಲು ಮುಂದಾಗಿದೆ.

ಪರೀಕ್ಷೆಗೆ ಹಾಜರಾಗು ಅಭ್ಯರ್ಥಿಗಳು ಕಡ್ಡಾಯವಾಗಿ ಸ್ವಯಂ ಘೋಷಣೆ ನಮೂನೆಯೊಂದಿಗೆ ಪ್ರವೇಶ ಪತ್ರವನ್ನು ಹೊಂದಿರಬೇಕು. ಅಭ್ಯರ್ಥಿಗಳು ಸರಳ ಪಾರದರ್ಶಕ ಬಾಲ್ ಪಾಯಿಂಟ್ ಪೆನ್, ಹಾಜರಾತಿ ಹಾಳೆಯಲ್ಲಿ ಅಂಟಿಸಲು ಹೆಚ್ಚುವರಿ ಭಾವಚಿತ್ರ, ವೈಯಕ್ತಿಕ ಹ್ಯಾಂಡ್ ಸ್ಯಾನಿಟೈಸರ್, ವೈಯಕ್ತಿಕ ಪಾರದರ್ಶಕ ನೀರಿನ ಬಾಟಲಿ ಒಯ್ಯಬಹುದು. ಮಧುಮೇಹಿಗಳು ಸಕ್ಕರೆ ಮಾತ್ರೆಗಳು, ಹಣ್ಣುಗಳು ಇತ್ಯಾದಿಗಳನ್ನು ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗಲು ಅವಕಾಶವನ್ನು ಕಲ್ಪಿಸಲಾಗಿದೆ.

UGC NET 2021 ಪ್ರವೇಶ ಕಾರ್ಡ್ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ ?

NTA UGC- NET ವೆಬ್‌ಸೈಟ್‌ಗೆ ಭೇಟಿ ನೀಡಿ – ugcnet.nic.in ಡೌನ್‌ಲೋಡ್ ಮಾಡಲು ಪ್ರವೇಶ ಕಾರ್ಡ್ ಲಿಂಕ್ ಅನ್ನು ಕ್ಲಿಕ್ ಮಾಡಿ. ನಂತರ ಅಗತ್ಯವಿರುವ ಲಾಗಿನ್ ವಿವರಗಳನ್ನು ನಮೂದಿಸಿ ಮತ್ತು ಸಲ್ಲಿಸಿ. ನಂತರದಲ್ಲಿ UGC NET 2021 ಪ್ರವೇಶ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಇದನ್ನೂ ಓದಿ : School Fees : ಶೇ.15 ರಷ್ಟು ಬೋಧನಾ ಶುಲ್ಕ ವಾಪಾಸ್‌ ಮಾಡಿ : ಖಾಸಗಿ ಶಾಲೆಗಳಿಗೆ ರಾಜ್ಯ ಸರಕಾರದ ಆದೇಶ

ಇದನ್ನೂ ಓದಿ : ಉಪನ್ಯಾಸಕರು ಜೀನ್ಸ್‌ ಪ್ಯಾಂಟ್‌, ಟೀ ಶರ್ಟ್‌ ಧರಿಸುವಂತಿಲ್ಲ: ಡಿಡಿಪಿಯು ಆದೇಶದ ಬಗ್ಗೆ DC ಹೇಳಿದ್ದೇನು ?

( UGC NET Admit Card 2021 Released Click here to Download )

Comments are closed.