ಬಿಜೆಪಿ ಕೋರ್ ಕಮಿಟಿ ಸಭೆ: ಬಹುಮತ ಪಡೆಯಲು ABCD ಸೂತ್ರ!

ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಹಿಂದೆಂದಿಗಿಂತ ಹೆಚ್ಚು ಸಕ್ರಿಯವಾಗಿ ಪಕ್ಷ ಸಂಘಟನೆ ಹಾಗೂ ಚುನಾವಣೆಯ ಸಿದ್ಧತೆಯಲ್ಲಿ ತೊಡಗಿದೆ. ಈ ಮಧ್ಯೆ ಶುಕ್ರವಾರ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ನೇತ್ರತ್ವದಲ್ಲಿ ಕೋರ್ ಕಮಿಟಿ (BJP core committee) ಸಭೆ ನಡೆದಿದ್ದು, ಕ್ಷೇತ್ರಗಳ ಗೆಲುವು ಹಾಗೂ ಸಂಖ್ಯೆ ಹೆಚ್ಚಳಕ್ಕೆ ಬಿಜೆಪಿ ಎಬಿಸಿಡಿ ತಂತ್ರದ ಮೊರೆ ಹೋಗಲು ನಿರ್ಧರಿಸಿದೆ. ‌

ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆದಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಬಿ.ಎಸ್.ಯಡಿಯೂರಪ್ಪ, ಅರುಣಸಿಂಗ್, ಸಿಎಂ ಬೊಮ್ಮಾಯಿ ಸೇರಿದಂತೆ ಹಲವು ಬಿಜೆಪಿ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.ಈ ಸಭೆಯಲ್ಲಿ ಪ್ರಮುಖವಾಗಿ ಬಿಜೆಪಿ 224 ಕ್ಷೇತ್ರಗಳನ್ನು ಗೆಲ್ಲುವ ರಣತಂತ್ರಗಳನ್ನು ರೂಪಿಸಿದೆ ಎನ್ನಲಾಗಿದೆ. ಅಲ್ಲದೇ ರಥಯಾತ್ರೆ ಸೇರಿದಂತೆ ಹಲವು ಜನರನ್ನು ತಲುಪುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. ಈ ಮಧ್ಯೆ ಬಿಜೆಪಿ ಬಹುಮತ ಗಳಿಸಲು ಅಗತ್ಯವಾದ ಸಂಖ್ಯೆಯನ್ನು ಗಳಿಸಿಕೊಳ್ಳಲು A,B,C,D ಎಂದು ವಿಂಗಡಿಸಿ ಗೆಲ್ಲಲು ರಣತಂತ್ರ ರೂಪಿಸಿದೆ.

ಇದರಲ್ಲಿ A ಅಂದ್ರೇ, 60 ರಿಂದ 65 ಸೀಟುಗಳನ್ನು ಗೆಲ್ಲುವ ಕ್ಷೇತ್ರ . ಬಿಜೆಪಿಯ ಗಟ್ಟಿನೆಲ. B ಎಂದ್ರೇ 25 ರಿಂದ 30 ಕ್ಷೇತ್ರಗಳು. ಅಂದ್ರೇ ಶ್ರಮವಹಿಸಿ ಕೆಲಸ ಮಾಡಿದ್ರೇ ಬಿಜೆಪಿ ಗೆಲ್ಲಬಹುದು ಎಂಬಂಥ ಕ್ಷೇತ್ರಗಳು, ಇವುಗಳ ಮೇಲೆ ಎಲ್ಲ ನಾಯಕರು ಹೆಚ್ಚಿನ ಗಮನ ಹರಿಸಬೇಕು.ಇನ್ನು C ಮತ್ತು D ಕಾಂಗ್ರೆಸ್ ಹಾಗೂ ಜೆಡಿಎಸ್ ನ ಕ್ಷೇತ್ರಗಳು. ಈ ಕ್ಷೇತ್ರಗಳನ್ನು ಗಮನಿಸಿ, ವರ್ಕೌಟ್ ಮಾಡಿ ತಂತ್ರಗಾರಿಕೆ ಮಾಡಿದ್ರೇ ಗೆಲ್ಲಬಹುದು. ಇದರಿಂದ ಬಹುಮತಕ್ಕೆ ಬೇಕಾದ ಸೀಟುಗಳನ್ನು ಗಳಿಸಬಹುದು ಎಂಬುದು ಬಿಜೆಪಿ ಲೆಕ್ಕಾಚಾರ.

ಇದನ್ನೂ ಓದಿ : Kiccha Sudeep join Congress : ಕೈಪಾಳಯ ಸೇರ್ತಾರಾ ಹೆಬ್ಬುಲಿ: ಡಿಕೆಶಿ ಜೊತೆ ಕಿಚ್ಚ ಸುದೀಪ್ ಪೋಟೋ ವೈರಲ್

ಇದನ್ನೂ ಓದಿ : ನನ್ನ ಬೆಂಬಲಿಗರಿಗೆ ಡಿಕೆ ಶಿವಕುಮಾರ್ ಟಿಕೇಟ್ ಕೊಡ್ತಿಲ್ಲ: ಸಿದ್ದರಾಮಯ್ಯ ಹೈಕಮಾಂಡ್ ಗೆ ಬರೆದ ಪತ್ರ ವೈರಲ್

ಇದನ್ನೂ ಓದಿ : ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಧಾನ: ಡಾ.ಜಿ.ಪರಮೇಶ್ವರ್ ರಾಜೀನಾಮೆ

ಇದೇ ಕಾರಣಕ್ಕೆ ಬಿಜೆಪಿ ನಾಯಕರು ಎಬಿಸಿಡಿ ಎಂದು ಸೀಟ್ ಗಳನ್ನು ವರ್ಗೀಕರಿಸಿದೆ. ಇದಲ್ಲದೇ ರಾಜ್ಯ ಚುನಾವಣೆಗೆ ಸಮಗ್ರವಾಗಿ ಸಿದ್ಧವಾಗ್ತಿರೋ ಬಿಜೆಪಿ ಹೈಕಮಾಂಡ್ ಕೂಡ ಕರ್ನಾಟಕಕ್ಕೆ ನಾಳೆ ಉಸ್ತುವಾರಿ ನೇಮಕ ಮಾಡಲಿದೆ.ಕೇಂದ್ರ ಸಚಿವ ಪಿಯೂಶ್ ಗೋಯಲ್ ಕರ್ನಾಟಕದ ಚುನಾವಣಾ ಉಸ್ತುವಾರಿಯಾಗೋದು ಬಹುತೇಕ ಎನ್ನಲಾಗ್ತಿದ್ದು ನಾಳೆ ಅಧಿಕೃತ ಆದೇಶ ಹೊರಬೀಳೋ ಸಾಧ್ಯತೆ ಇದೆ.ಒಟ್ಟಿನಲ್ಲಿ ಬಿಜೆಪಿ ಕಚೇರಿಯಲ್ಲಿ ನಡೆದ ಚುನಾವಣಾ ಪೂರ್ವ ಕೋರ್ ಕಮಿಟಿ ಸಭೆ ಕಮಲ ಪಾಳಯವನ್ನು ಚುನಾವಣೆ ರಣರಂಗಕ್ಕೆ ಮತ್ತಷ್ಟು ಹುರಿದುಂಬಿಸಿದೆ.

BJP core committee : BJP core committee meeting: ABCD formula to get majority!

Comments are closed.