ಸೋಮವಾರ, ಏಪ್ರಿಲ್ 28, 2025
Homekarnatakaಬಿಜೆಪಿ - ಜೆಡಿಎಸ್‌ ಮೈತ್ರಿಗೆ ಮುಳುವಾಗುತ್ತಾ ಬಿಎಂಎಸ್ ಪರಭಾರೆ ಹಗರಣ : ತನಿಖೆ ಆದೇಶಿಸಲು ಸಿಎಂ ಸಿದ್ದರಾಮಯ್ಯ...

ಬಿಜೆಪಿ – ಜೆಡಿಎಸ್‌ ಮೈತ್ರಿಗೆ ಮುಳುವಾಗುತ್ತಾ ಬಿಎಂಎಸ್ ಪರಭಾರೆ ಹಗರಣ : ತನಿಖೆ ಆದೇಶಿಸಲು ಸಿಎಂ ಸಿದ್ದರಾಮಯ್ಯ ಸಿದ್ಧತೆ

- Advertisement -

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ (bjp jds alliance ) ಮಾಡಿಕೊಂಡಿದೆ. ಸ್ವತಃ ಬಿಜೆಪಿ,ಜೆಡಿಎಸ್ ನಾಯಕರಿಗೆ ಮಾತ್ರವಲ್ಲ ಕಾಂಗ್ರೆಸ್ ನಾಯಕರಿಗೂ (Congress Leaders) ಈ ಮೈತ್ರಿ ಸಹಿಸಲು ಸಾಧ್ಯವಿಲ್ಲದ ತಲೆನೋವಿನಂತಾಗಿದೆ. ಹೀಗಾಗಿ ಮೈತ್ರಿಗೆ ಮದ್ದೆರೆಯಲು ಹಾಗೂ ಮೈತ್ರಿಯೊಳಗೆ ಮನಸ್ಸುಗಳನ್ನು ಒಡೆಯಲು ಸಿಎಂ ಸಿದ್ಧರಾಮಯ್ಯ (CM Siddaramaiah) ಮಾಸ್ಟರ್ ಪ್ಲ್ಯಾನ್ ಮಾಡಿದ್ದು ಹೆಚ್ಡಿಕೆ ಅಸ್ತ್ರವನ್ನೇ ಮೈತ್ರಿ ಮುರಿಯಲು ಪ್ರತ್ಯಸ್ತ್ರವಾಗಿ ಬಳಸಲು ಸಿದ್ಧವಾಗ್ತಿದ್ದಾರೆ‌.

ಕಾಂಗ್ರೆಸ್ ದುರಾಡಳಿತವನ್ನು ಎದುರಿಸಲು ಹಾಗೂ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಮೈತ್ರಿ‌ಮಾಡಿಕೊಳ್ಳುತ್ತಿರುವುದಾಗಿ ಘೋಷಿಸಿದ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಆದರೆ ಮೈತ್ರಿ ಒಳಗೆ ಮೈ ಉರಿ ಏಳಿಸಲು ಸಿಎಂ ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ( Siddaramaiah Master Plan) ಮಾಡ್ತಿದ್ದಾರೆ.

BJP-JDS alliance Damaged in BMS Trust scandal CM Siddaramaiah ready to order probe
Image Credit To Original Source

ಈ ಹಿಂದೆ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಅಂದಿನ ಜೆಡಿಎಸ್ ನಾಯಕ ಹಾಗೂ ಮಾಜಿಸಿಎಂ ಕುಮಾರಸ್ವಾಮಿ ಬಿಎಂಎಸ್ ಟ್ರಸ್ಟ್ (BMS Trust) ಅಕ್ರಮ ವಾಗಿ ಖಾಸಗಿಯವರಿಗೆ ಪರಭಾರೆ ಆರೋಪ ಮಾಡಿದ್ದರು.

ಇದನ್ನೂ ಓದಿ : ಜೆಡಿಎಸ್‌ – ಬಿಜೆಪಿ ಮೈತ್ರಿಗೆ ಪ್ರತಿಯಾಗಿ ಆಪರೇಷನ್‌ ಅಸ್ತ್ರ ಪ್ರಯೋಗಿಸಿದ ಡಿಕೆ ಶಿವಕುಮಾರ್‌

ಅಂದಾಜು 10 ಸಾವಿರ ಕೋಟಿ ಆಸ್ತಿ ಹೊಂದಿರೋ ಬಿಎಂಎಸ್ ಟ್ರಸ್ಟ್ ಪರಭಾರೆ ಆರೋಪ ಮಾಡಿದ್ದ ಎಚ್ಡಿಕೆ ಅಂದಿನ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್, ಟ್ರಸ್ಟ್ ನ್ನು ಒಂದು ಕುಟುಂಬದ ಹಿಡಿತಕ್ಕೆ ಸಿಗುವಂತೆ ನೋಡಿಕೊಂಡಿದ್ದಾರೆಂದು ಆರೋಪಿಸಿದ್ದರು. ಈ‌ ಬಗ್ಗೆ ಮಾಜಿಸಿಎಂ ಹೆಚ್ ಡಿ ಕೆ 2022 ಸಪ್ಟೆಂಬರ್ 22 ಮತ್ತು 23 ರಂದು ವಿಧಾನಸಭೆಯಲ್ಲಿ ಅಬ್ಬರಿಸಿ ಬೊಬ್ಬಿರಿದು ಭಾಷಣ ಮಾಡಿದ್ದರು.

ಡಾ. ಅಶ್ವತ್ಥ ನಾರಾಯಣ (Dr. Ashwath Narayan) ವಿರುದ್ದ ದಾಖಲೆ ಸಮೇತ ಗಂಭೀರ ಆರೋಪ ಮಾಡಿದ್ದ HD ಕುಮಾರಸ್ವಾಮಿ, ಬಿಎಂಎಸ್ ಟ್ರಸ್ಟ್ ದಯಾನಂದ ಪೈ ಹಿಡಿತಕ್ಕೆ ನೀಡಲು ಅಶ್ವತ್ಥ ನಾರಾಯಣ ಸಹಾಯ ಮಾಡಿದ್ದಾರೆ. 10,000 ಕೋಟಿ ಬೆಲೆಬಾಳೋ ಆಸ್ತಿ ಪರಭಾರೆ ಹಿಂದೆ ಭಾರಿ ಕಿಕ್ ಬ್ಯಾಕ್ ಪಡೆದಿರುವ ಶಂಕೆ ಇದೆ ಎಂದು ಆರೋಪಿಸಿದ್ದರು.

BJP-JDS alliance Damaged in BMS Trust scandal CM Siddaramaiah ready to order probe
Image credit to Original Source

ಅಲ್ಲದೇ ಮಾಜಿಸಚಿವ ಅಶ್ವತ್ಥ್ ನಾರಾಯಣ್ ಹಾಗೂ ಬಿಜೆಪಿ ನಾಯಕರು ದಯಾನಂದ ಪೈ ಕುಟುಂಬದ ಜೊತೆ ಇರೋ ಪೋಟೋಗಳನ್ನು ಶೇರ್ ಮಾಡಿದ್ದರು. ಈ ಪ್ರಕರಣದ ಬಗ್ಗೆ ಸಿಟ್ಟಿಂಗ್ ಜಡ್ಡ್ ಅಥವಾ ಎಸ್ ಐ ಟಿ ತನಿಖೆಗೆ ಒತ್ತಾಯಿಸಿದ್ದ ಎಚ್‌ಡಿ ಕುಮಾರಸ್ವಾಮಿ ಪಿಎಂ ಗೂ ತನಿಖೆಗೆ ಮನವಿ ಮಾಡಿದ್ದರು.

ಆದರೆ ಸರ್ಕಾರದ ಅವಧಿ ಮುಗಿದ ಈ ಪ್ರಕರಣ ತಣ್ಣಗಾಗಿತ್ತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಈ ಪ್ರಕರಣ ಸದ್ದು ಮಾಡಿರಲಿಲ್ಲ. ಆದರೆ ಈಗ ಜೆಡಿಎಸ್ ಹಾಗೂ ಬಿಜೆಪಿಗೆ ಮುಜುಗರ ತರುವ ನಿಟ್ಟಿನಲ್ಲಿ ಸಿಎಂ ಸಿದ್ಧರಾಮಯ್ಯ ಖುದ್ದು ಆಸಕ್ತಿ ವಹಿಸಿ ಪ್ರಕರಣದ ತನಿಖೆಗೆ ನೀಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗ್ತಿದೆ.

ಈ ಬಗ್ಗೆ ಈಗಾಗಲೇ ಸಿಎಂ ಸಿದ್ಧರಾಮಯ್ಯ ಅಧಿಕಾರಿಗಳ ಸಭೆ ನಡೆಸಿದ್ದು, ಬಿಎಂಎಸ್ ಟ್ರಸ್ಟ್ ಅಕ್ರಮ ಆರೋಪದ ಬಗ್ಗೆ ವಿವರ ಪಡೆದಿದ್ದಾರಂತೆ. ಎಲ್ಲ ವಿವರ ಪರಿಶೀಲಿಸಿದ ಬಳಿಕ ದೊಡ್ಡ ಮಟ್ಟದ ತನಿಖೆಗೆ ಸಿಎಂ ಅದೇಶ‌ಮಾಡಲಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ : ಹಾದಿ ಬೀದಿಯಲ್ಲಿ ಪಕ್ಷದ ವಿಚಾರ ಚರ್ಚೆ ಬೇಡ: ರಾಜ್ಯ ಕಾಂಗ್ರೆಸ್ಸಿಗರಿಗೆ ಹೈಕಮಾಂಡ್ ಚಾಟಿ

ಬಿಎಂಎಸ್ ಟ್ರಸ್ಟ್ ಅಕ್ರಮದ ಬಗ್ಗೆ ಸಿಎಂ ತನಿಖೆಗೆ ಮುಂದಾದರೇ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಮುಜುಗರದ ಸ್ಥಿತಿ ಎದುರಾಗಲಿದೆ.‌ಕಷ್ಟ ಪಟ್ಟು ತಕ್ಕಮಟ್ಟಿಗೆ ಮೂಡಿರುವ ಸಾಮರಸ್ಯವೂ ಹದಗೆಡಗಲಿದೆ. ಯಾಕೆಂದರೇ ಎಲ್ಲರಿಗೂ ಗೊತ್ತಿರುವಂತೆ‌ ಮಾಜಿಸಿಎಂ ಎಚ್ಡಿಕೆ ನಿರಾಧಾರವಾದ ಆರೋಪ ಗಳನ್ನು ಮಾಡೋದು ಕಡಿಮೆ.

BJP-JDS alliance Damaged in BMS Trust scandal CM Siddaramaiah ready to order probe
Image Credit to Original Source

ಅವರು ಮಾಡಿರೋ ಆರೋಪಕ್ಕೆ ಸೂಕ್ತ ದಾಖಲೆಗಳಿದ್ದಲ್ಲಿ ಮಾಜಿಡಿಸಿಎಂ ಅಶ್ವತ್ಥ್ ನಾರಾಯಣ್ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಲೋಕಸಭೆ ಚುನಾವಣೆಯ ಹೊತ್ತಿನಲ್ಲಿ ಈ ಪ್ರಕರಣದ ತನಿಖೆ ಆರಂಭವಾದಲ್ಲಿ ಇದು ಈಗಾಗಲೇ ಸೋತಿರೋ ಬಿಜೆಪಿಗೆ ಮತ್ತಷ್ಟು ಸಂಕಷ್ಟ ತರಲಿದೆ. ಜೊತೆಗೆ ಮೈತ್ರಿ ಪಾಲಿಗೂ ನುಂಗಲಾರದ ತುತ್ತಾಗಲಿದೆ. ಒಟ್ಟಿನಲ್ಲಿ ಸಿಎಂ ಸಿದ್ಧರಾಮಯ್ಯ ಬಿಜೆಪಿ-ಜೆಡಿಎಸ್ ಗೆ ಹೊಸ ಸವಾಲು ಹಾಕಲು ಎಚ್‌ಡಿ ಕುಮಾರಸ್ವಾಮಿ ಅಸ್ತ್ರವನ್ನೇ ಹಿಡಿದು ಹೊರಟಂತಿದೆ.

BJP-JDS alliance Damaged in BMS Trust scandal CM Siddaramaiah ready to order probe

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular