ಜೆಡಿಎಸ್‌ – ಬಿಜೆಪಿ ಮೈತ್ರಿಗೆ ಪ್ರತಿಯಾಗಿ ಆಪರೇಷನ್‌ ಅಸ್ತ್ರ ಪ್ರಯೋಗಿಸಿದ ಡಿಕೆ ಶಿವಕುಮಾರ್‌

ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ (Loka Sabha Election 2024)ಜೆಡಿಎಸ್ ಬಿಜೆಪಿ ಮೈತ್ರಿ (JDS - BJP Alliance) ಘೋಷಿಸಿದೆ. ಈ ಮೈತ್ರಿಗೆ ಟಕ್ಕರ್ ಕೊಡಲು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಆಪರೇಷನ್‌ ಅಸ್ತ್ರ ಪ್ರಯೋಗಿಸಿದ್ದಾರೆ.

ಬೆಂಗಳೂರು : ರಾಜ್ಯದಲ್ಲಿ ಲೋಕಸಭಾ ಚುನಾವಣೆಯ (Loka Sabha Election 2024) ಹೆಸರಿನಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ (JDS – BJP Alliance) ಘೋಷಿಸಿದೆ. ಆ ಮೂಲಕ ಕಾಂಗ್ರೆಸ್ ನ್ನು ಹಿಮ್ಮೆಟ್ಟಿಸುವುದೇ ತಮ್ಮ ಗುರಿ ಎಂದು ಮೈತ್ರಿ ಪಕ್ಷಗಳ ನಾಯಕರು ಹೇಳಿಕೊಂಡಿದ್ದಾರೆ. ಹೀಗಾಗಿ ಈ ಮೈತ್ರಿಗೆ ಟಕ್ಕರ್ ಕೊಡಲು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar)  ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಿದ್ದು, ಮೈತ್ರಿಗೆ ಡಿಕೆಶಿ ಆಫರೇಶನ್ ಹಸ್ತದ ಮೂಲಕ ಉತ್ತರ ನೀಡಲು ಮುಂದಾಗಿದ್ದಾರೆ.

ಒಂದು ಕಾಲದಲ್ಲಿ ಹಾವು ಮುಂಗುಸಿಯಂತೆ ಕಚ್ಚಾಡಿದ್ದ ಬಿಎಸ್‌ ಯಡಿಯೂರಪ್ಪ, ಎಚ್‌ಡಿ ಕುಮಾರಸ್ವಾಮಿ ಮೈತ್ರಿ ಹೆಸರಲ್ಲಿ ಕೈಕುಲುಕಿದ್ದಾರೆ. ಕಾಂಗ್ರೆಸ್ ಹಿಮ್ಮೆಟ್ಟಿಸಲು ಈ ಮೈತ್ರಿ ಎಂದು ಕಾರ್ಯಕರ್ತರ ಮನವೊಲಿಸುವ ಪ್ರಯತ್ನವೂ ನಡೆದಿದೆ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಿಗೆ ಮಗ್ಗುಲ‌ ಮುಳ್ಳಾಗಿರೋದಂತು ನಿಜ.

Karnataka Politics DK Shivakumar master plan for JDS-BJP alliance
Image Credit to Original Source

ಬಿಜೆಪಿಯ ಸಾಂಪ್ರದಾಯಿಕ ಓಟುಗಳ ಜೊತೆಗೆ ಮತ್ತೊಮ್ಮೆ ‌ಮೋದಿ ಎನ್ನುವ ಸ್ಲೋಗನ್ ಕೂಡ ಒಂದಷ್ಟು ಮತಬೇಟೆಯಾಡಲಿದೆ. ಇದರೊಂದಿಗೆ ಜೆಡಿಎಸ್ ಕೈ ಜೋಡಿಸಿರೋದು ಜೆಡಿಎಸ್ ನ ಮತಗಳ ಜೊತೆಗೆ ಒಕ್ಕಲಿಗರು ಸೇರಿದಂತೆ ಬೇರೆ ಬೇರೆ ಸಮುದಾಯದ ಓಟ್ ಶೇರಿಂಗ್ ಮಾಡಲಿದೆ. ಇದರಿಂದ ಕಾಂಗ್ರೆಸ್ ಗೆ ಹೊಡೆತ ಬೀಳಲಿದೆ.

ಇದನ್ನೂ ಓದಿ : ಹಾದಿ ಬೀದಿಯಲ್ಲಿ ಪಕ್ಷದ ವಿಚಾರ ಚರ್ಚೆ ಬೇಡ: ರಾಜ್ಯ ಕಾಂಗ್ರೆಸ್ಸಿಗರಿಗೆ ಹೈಕಮಾಂಡ್ ಚಾಟಿ

ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ನಾಲ್ಕು ಗ್ಯಾರಂಟಿ ಗಳನ್ನು ಜಾರಿಗೊಳಿಸಿ ಜನ ಬೆಂಬಲ ಪಡೆದುಕೊಂಡಿದೆ. ಆದರೆ ಈ ಜನಬೆಂಬಲದ ಮೇಲೆ ಜೆಡಿಎಸ್ ಹಾಗೂ ಬಿಜೆಪಿ ಪ್ರಭಾವ ಬೀರಲು ಹೆಚ್ಚು ಹೊತ್ತು ಬೇಕಿಲ್ಲ. ಹೀಗಾಗಿ ಸಹಜವಾಗಿಯೇ ಕಾಂಗ್ರೆಸ್ ಗೆ ಓಟ್ ಶೇರಿಂಗ್ ಭೀತಿ ಎದುರಾಗಿದೆ. ಆದರೆ ಈ ಭಾರಿ ವಿಧಾನಸಭಾ ಚುನಾವಣೆಯ ಗೆಲುವಿನಲ್ಲಿ ರಣತಂತ್ರ ಹೂಡಿ ಗೆದ್ದ ಡಿಕೆಶಿ ಲೋಕಸಭೆ ಚುನಾವಣೆಯ ಗೆಲುವನ್ನು ಹೈಕಮಾಂಡ್ ಮುಡಿಗೆ ಅರ್ಪಿಸಿ ಸಿಎಂ ಸ್ಥಾನ ಕೇಳೋ ಪ್ಲ್ಯಾನ್ ನಲ್ಲಿದ್ದಾರೆ.

ಈ ಕನಸಿಗೆ ಅಡ್ಡಿಯಾಗ್ತಿರೋ ಮೈತ್ರಿಗೆ ಡಿಕೆಶಿ ಅಸಮಧಾನಗೊಂಡಿದ್ದು, ಮೈತ್ರಿಗೆ ಮದ್ದರೆಯುವಂತಹ ಪ್ಲ್ಯಾನ್ ವೊಂದನ್ನು ಸಿದ್ಧಪಡಿಸಿದ್ದಾರೆ. ಆ ಮೂಲಕ ಓಟ್ ಶೇರಿಂಗ್ ತಡೆಯೋದು ಮಾತ್ರವಲ್ಲ ಬಿಜೆಪಿಗೆ ಚುನಾವಣೆಯ ಹೊತ್ತಿನಲ್ಲಿ ಶಾಕ್ ಕೊಡೋದು ಕೂಡ ಡಿಕೆಶಿ ಪ್ಲ್ಯಾನ್.

ಇದನ್ನೂ ಓದಿ : ಸಿಎಂ ಇಬ್ರಾಹಿಂ ಪಾಲಿಗೆ ಬಿಸಿತುಪ್ಪವಾದ ಮೈತ್ರಿ: ಜೆಡಿಎಸ್ ಬಿಡೋಕಾಗಲ್ಲ,ಕಾಂಗ್ರೆಸ್ ಸೇರೋಕಾಗಲ್ಲ !

ಇದಕ್ಕಾಗಿ ಸಖತ್ ಗ್ರೌಂಡ್ ವರ್ಕೌಟ್ ಬಳಿಕ‌ ಡಿಕೆಶಿ ಪ್ಲ್ಯಾನ್ ಸಿದ್ಧಪಡಿಸಿದ್ದಾರೆ. ಈಗಾಗಲೇ ಬಿಜೆಪಿಯಲ್ಲಿ‌ ಕಳೆದ. ಸರ್ಕಾರದಲ್ಲಿ ಅಧಿಕಾರ ವಂಚಿತರಾಗಿ ಅಸಮಧಾನಗೊಂಡವರು, ವಿಧಾನಸಭಾ ಚುನಾವಣೆಯತ ಟಿಕೇಟ್ ವಂಚಿತರಾಗಿ ಅಸಮಧಾನಗೊಂಡವರು, ಪಕ್ಷದ ನಾಯಕರ ಧೋರಣೆಯಿಂದ ಅಸಮಧಾನಗೊಂಡವರು, ನಿರ್ಲಕ್ಷ್ಯಗೊಳಗಾದವರು ಹೀಗೆ ನಾನಾ ಕಾರಣಕ್ಕೆ ಪಕ್ಷದ ಮೇಲೆ ಮುನಿಸಿಕೊಂಡವರ ತಂಡವೇ ಇದೆ.

Karnataka Politics DK Shivakumar master plan for JDS-BJP alliance
Image Credit to Original Source

ಇವರನ್ನೆಲ್ಲ ಕಾಂಗ್ರೆಸ್ ಗೆ ಸೆಳೆಯಲು ಖುದ್ದು ಡಿಕೆಶಿ ಕಣಕ್ಕಿಳಿದಿದ್ದಾರೆ. ವಿಧಾನಸಭಾ ಕ್ಷೇತ್ರವಾರು ಇಂತಹ ನಾಯಕರ ಪಟ್ಟಿ ತಯಾರಿಸಿರುವ ಡಿಕೆಶಿ ಸಮಯಸಿಕ್ಕಾಗಲೆಲ್ಲ ನಾಯಕರನ್ನು ಭೇಟಿ ಮಾಡಿ ತಮ್ಮ ಪಕ್ಷಕ್ಕೆ ಆಹ್ವಾನಿಸುತ್ತಿದ್ದಾರೆ. ಮಾತ್ರವಲ್ಲ ಪಕ್ಷಾತೀತವಾಗಿ ಸ್ವಯಂ ವರ್ಚಸ್ಸುಹೊಂದಿರುವ ಹಾಗೂ ಮತಕೊಡಿಸುವ ಸಾಮರ್ಥ್ಯ ಇರುವ ನಾಯಕರನ್ನು ಡಿಕೆಶಿ ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವ ಕೆಲಸ ಆರಂಭಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರು ಬಂದ್‌ : ಶಾಲೆ ರಜೆ ಘೋಷಣೆ, ವಿವಿ ಪರೀಕ್ಷೆಗಳು ಮುಂದೂಡಿಕೆ

ಕೆಲವರನ್ನು ಖುದ್ದು ಡಿಕೆಶಿ ಆಹ್ವಾನಿಸಿದ್ರೇ ಇನ್ನೂ ಕೆಲವರಿಗಾಗಿ ತಮ್ಮ ಡಿ.ಕೆ.ಸುರೇಶ್ ರನ್ನು ಮುಂದಕ್ಕೆ ಬಿಟ್ಟಿದ್ದಾರಂತೆ. ಒಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಸ್ಥಾನ ಗೆಲ್ಲುವ ಕನಸೊಂದನ್ನೇ ಇಟ್ಟುಕೊಂಡು ಡಿಕೆಶಿ ಕಣಕ್ಕಿಳಿದಿದ್ದಾರೆ. ಸಿದ್ದರಾಮಯ್ಯನವರು ಅಧಿಕಾರ ನಡೆಸಬಹುದು, ಆದರೆ ಪಕ್ಷಕ್ಕಾಗಿ ಅವರೆಂದೂ ದುಡಿದಿಲ್ಲ ಎಂಬುದು ಕಾಂಗ್ರೆಸ್ ವಲಯದಲ್ಲಿ ಸದಾ ಕೇಳಿಬರುವ ಮಾತು.

ಈ ಮಾತನ್ನು ಸಾಬೀತುಪಡಿಸುವಂತೆ ಡಿಕೆಶಿ ಪಕ್ಷಕ್ಕಾಗಿ ಹೊಸ ಹೊಸ ಪ್ಲ್ಯಾನ್ ಮಾಡಿ ಚುನಾವಣೆಗೆ ಸಜ್ಜಾಗುತ್ತಿದ್ದು, ಗೆದ್ದು ಬಂದರೇ ಡಿಕೆಶಿ ಕನಸು ಈಡೇರುತ್ತಾ, ಈ ರಣತಂತ್ರಗಳಿಗೆ ಹೈಕಮಾಂಡ್ ಬೆಲೆ ನೀಡುತ್ತಾ ಅನ್ನೋದು ಸದ್ಯದ ಕುತೂಹಲ

Karnataka Politics DK Shivakumar master plan for JDS-BJP alliance

Comments are closed.