ಬೆಂಗಳೂರು : ರಾಜ್ಯದಲ್ಲಿ ರವಿವಾರದಿಂದ ಮತ್ತೆ ಪಾದಯಾತ್ರೆ ಪರ್ವ ಆರಂಭವಾಗಲಿದೆ. ಕೊರೋನಾ ಮೂರನೇ ಅಲೆಯ ಕಾರಣಕ್ಕೆ ಸ್ಥಗಿತಗೊಂಡಿದ್ದ ಪಾದಯಾತ್ರೆ ಯನ್ನು ಕಾಂಗ್ರೆಸ್ ಮತ್ತೆ ಆರಂಭಿಸುತ್ತಿದೆ. ಈ ಮಧ್ಯೆ ಕಾಂಗ್ರೆಸ್ ಪಾದಯಾತ್ರೆಗೆ ಮುನ್ನವೇ ಬಿಜೆಪಿ ವಾಗ್ದಾಳಿ ಆರಂಭಿಸಿದ್ದು ಟ್ವೀಟ್ ವಾರ್ (BJP tweet war) ಮೂಲಕ ಡಿಕೆಶಿಯವರ ವಿರುದ್ಧ ಸಿದ್ಧರಾಮಯ್ಯನವರನ್ನು ಕೆಣಕುವ ಕೆಲಸ ಮಾಡಿದೆ.
ಮೇಕೆದಾಟು ನೀರಿನ ಯೋಜನೆಗಾಗಿ ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆಯನ್ನು ಸುಳ್ಳಿನ ಜಾತ್ರೆ ಎಂದು ಕರೆದಿರುವ ಬಿಜೆಪಿ, ಭಯದ ನಡುವೆಯೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಸುಳ್ಳಿನ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕಾಗಿದೆ ಎಂದು (BJP tweet war) ಟ್ವೀಟ್ ಮಾಡಿದೆ. ಕಾಂಗ್ರೆಸ್ ನಾಯಕರುಗಳಾಗಿರುವ ಸಿದ್ಧರಾಮಯ್ಯ ಮತ್ತು ಡಿಕೆಶಿ ನಡುವೆ ಪರಸ್ಪರ ಎಲ್ಲವೂ ಸರಿ ಇಲ್ಲ ಅನ್ನೋದು ರಾಜ್ಯಕ್ಕೆ ಗೊತ್ತಿರುವ ಸಂಗತಿ. ಆದರೂ ಡಿಕೆಶಿ ಆಯೋಜಿಸಿರುವ ಪಾದಯಾತ್ರೆಯಲ್ಲಿ ಡಿಕೆಶಿ ಪಾಲ್ಗೊಂಡಿದ್ದಾರೆ.
ರವಿವಾರದ ಯಾತ್ರೆಯಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ಇದು ತೋರಿಕೆಗೆ. ಸಿದ್ಧರಾಮಯ್ಯನವರು ಪಕ್ಷದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿಲ್ಲ ಎಂಬ ಆರೋಪ ಬರಬಾರದೆಂಬ ಕಾರಣಕ್ಕೆ ಸಿದ್ಧು ಕೈಜೋಡಿಸುತ್ತಿದ್ದಾರೆ ಎನ್ನಲಾಗ್ತಿದೆ. ಇದನ್ನೇ ಪ್ರಮುಖವಾಗಿಟ್ಟುಕೊಂಡು ಟ್ವೀಟ್ ವಾರ್ (BJP tweet war) ನಡೆಸುತ್ತಿರೋ ಬಿಜೆಪಿ ” ಮೇಕೆದಾಟು ಪಾದಯಾತ್ರೆಯಿಂದ ಡಿ.ಕೆ.ಶಿವಕುಮಾರ್ ಅವರು ದೆಹಲಿಯ ನಾಯಕರಿಗೆ ಹತ್ತಿರ ಆಗಬಹುದೆಂಬ ಭಯ ಸಿದ್ಧರಾಮಯ್ಯನವರನ್ನು ಕಾಡುತ್ತಿದೆ. ಈ ಭಯದ ನಡುವೆಯೂ ಮೇಕೆದಾಟು ಎಂಬ ಸುಳ್ಳಿನ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕಾಗಿದೆ. ಉದರ ನಿಮಿತ್ತಂ ಬಹುಕೃತ ವೇಷಂ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಮೇಕೆದಾಟು ಪಾದಯಾತ್ರೆಯಿಂದ @DKShivakumar ಅವರು ದೆಹಲಿಯ ನಾಯಕರಿಗೆ ಹತ್ತಿರ ಆಗಬಹುದೆಂಬ ಭಯ @siddaramaiah ಅವರಿಗೆ ಕಾಡುತ್ತಿದೆ.
— BJP Karnataka (@BJP4Karnataka) February 26, 2022
ಈ ಭಯದ ನಡುವೆಯೂ ಮೇಕೆದಾಟು ಪಾದಯಾತ್ರೆ ಎಂಬ #ಸುಳ್ಳಿನಜಾತ್ರೆ ಯಲ್ಲಿ ಪಾಲ್ಗೊಳ್ಳಬೇಕಾಗಿದೆ.
ಉದರ ನಿಮಿತ್ತಂ ಬಹುಕೃತ ವೇಷಂ!!!#ಕಾಂಗ್ರೆಸ್ಕಲಹ
ಸಿದ್ದು ಚಾಮುಂಡೇಶ್ವರಿ ಸೋಲನ್ನು ಕೆಣಕಿರುವ ಬಿಜೆಪಿ, ಚಾಮುಂಡೇಶ್ವರಿಯಲ್ಲಿ ಸೋತ ಸಿದ್ಧರಾಮಯ್ಯನವರಿಗೆ ಹಳೆ ಮೈಸೂರು ಪ್ರಾಂತ್ಯದಲ್ಲಿ ತಮ್ಮ ಪ್ರಭಾವ ಮಾಸುತ್ತಿರುವುದು ತಿಳಿಯುತ್ತಿದೆ. ಮೇಕೆದಾಟು ಪ್ರಹಸನದಲ್ಲಿ ಲಾಭವಾಗುವುದು ಡಿ.ಕೆ.ಶಿವಕುಮಾರ್ ಅವರಿಗೆ ಎಂದು ಸಿದ್ಧರಾಮಯ್ಯನವರಿಗೆ ತಿಳಿದಿದೆ. ಸಿದ್ಧರಾಮಯ್ಯ ಅವರೇ, ಇದು ನಿಮಗೆ ಬಿಸಿ ತುಪ್ಪವಾಗಿ ಪರಿಣಮಿಸಿದೇ ಅಲ್ವೇ? ಇದು # ಕಾಂಗ್ರೆಸ್ ಕಲಹ ಎಂಬ ಹ್ಯಾಶ್ ಟ್ಯಾಗ್ (BJP tweet war) ಜೊತೆ ಟ್ವೀಟ್ ಮಾಡಿದೆ.
ಚಾಮುಂಡೇಶ್ವರಿಯಲ್ಲಿ ಸೋತ ಸಿದ್ದರಾಮಯ್ಯ ಅವರಿಗೆ, ಹಳೆ ಮೈಸೂರು ಪ್ರಾಂತ್ಯದಲ್ಲಿ ತಮ್ಮ ಪ್ರಭಾವ ಮಾಸುತ್ತಿರುವುದು ತಿಳಿದಿದೆ.
— BJP Karnataka (@BJP4Karnataka) February 26, 2022
ಮೇಕೆದಾಟು ಪಾದಯಾತ್ರೆ ಪ್ರಹಸನದಲ್ಲಿ ಲಾಭವಾಗುವುದು @DKShivakumar ಅವರಿಗೆ ಎಂದು ಸಿದ್ದರಾಮಯ್ಯಗೆ ತಿಳಿದಿದೆ.
ಸಿದ್ದರಾಮಯ್ಯ ಅವರೇ, ಇದು ನಿಮಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ ಅಲ್ವೇ?#ಕಾಂಗ್ರೆಸ್ಕಲಹ
ಕರ್ನಾಟಕದ ಕಾಂಗ್ರೆಸ್ ಮನೆಯಲ್ಲಿ ಈಗ ಮನೆಯೊಂದು ಮೂರು ಬಾಗಿಲು ಎಂದು ಬಿಜೆಪಿ ಟೀಕಿಸಿದ್ದು, ದೆಹಲಿ ಪ್ರವಾಸದ ಮೂಲಕ ಈ ಆಂತರಿಕ ಕಲಹಕ್ಕೆ ತೇಪೆ ಹಚ್ಚುವ ಕೆಲಸ ನಡೆದಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ. ದೆಹಲಿಯಲ್ಲಿ ವರಿಷ್ಠರ ಮುಂದೆಯೇ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸಿದ್ಧರಾಮಯ್ಯ ಹೇಳಿರೋದೇ ಇವರ ಆಂತರಿಕ ಕಚ್ಚಾಟಕ್ಕೆ ಸಾಕ್ಷಿ ಎಂದು ಬಿಜೆಪಿ ಟ್ವಿಟರ್ (BJP tweet war) ಮೂಲಕವೇ ಕುಟುಕಿದೆ.
ಇದನ್ನೂ ಓದಿ : ಶಿವಮೊಗ್ಗ ಹರ್ಷ ಕೊಲೆ ಪ್ರಕರಣ : ವರದಿ ಕೇಳಿದ ಬಿಜೆಪಿ ಹೈಕಮಾಂಡ್
ಇದನ್ನೂ ಓದಿ : ಮೃತ ಹರ್ಷ ತಾಯಿಗೆ ಬಿಜೆಪಿ ಟಿಕೇಟ್ : ಈಶ್ವರಪ್ಪ, ಯಡಿಯೂರಪ್ಪ ಎದೆಯಲ್ಲಿ ನಡುಕ
( BJP tweet war Against Congress, Siddaramaiah’s march to reduce influence of DK Sivakumar )