ಬೆಂಗಳೂರು : ಸದಾ ಒಂದಿಲ್ಲೊಂದು ಹೋರಾಟದಲ್ಲಿ ಮುಂಚೂಣಿಯಲ್ಲಿರೋ ಕಾಳಿ ಮಠದ ಋಷಿಕುಮಾರ್ ಸ್ವಾಮಿಜೀಗೆ (Rishikumara swamiji) ಆಘಾತವೊಂದು ಎದುರಾಗಿದ್ದು, ದೇವಾಲಯದ ಪೂಜೆಗೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ ಕಾಳಿಮಠದ ಋಷಿಕುಮಾರ್ ಸ್ವಾಮೀಜಿಯವರನ್ನು ಅಡ್ಡ ಹಾಕಿದ ತಂಡವೊಂದು ಋಷಿಕುಮಾರ ಸ್ವಾಮೀಜಿ ಕನ್ನಡಕ್ಕೆ ಹಾಗೂ ಕುವೆಂಪು ಅವರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಸ್ವಾಮೀಜಿ ಮುಖಕ್ಕೆ ಮಸಿ ಬಳಿದಿದೆ.
ಕಾಳಿ ಸೇನೆಯ ಮೂಲಕ ಗುರುತಿಸಿಕೊಂಡ ಹಿಂದೂಪರ ಹೋರಾಟಗಾರ ಕಾಳಿ ಮಠದ ಋಷಿಕುಮಾರ್ ಸ್ವಾಮೀಜಿ ಮಲ್ಲೇಶ್ವರಂನ ಗಂಗಮ್ಮನ ಗುಡಿ ದೇವಾಲಯಕ್ಕೆ ಪೂಜೆಗೆ ಆಗಮಿಸಿದ್ದರು. ಈ ವೇಳೆ ಕೆಲ ಕನ್ನಡಪರ ಕಾರ್ಯಕರ್ತರು ಕಾಳಿ ಸ್ವಾಮೀಜಿಯವರ ಮೇಲೆ ಮುಗಿಬಿದ್ದಿದ್ದು, ಸ್ವಾಮೀಜಿ ತಮ್ಮ ಭಾಷಣದಲ್ಲಿ ಕುವೆಂಪು, ಕನ್ನಡಪರ ಸಂಘಟನೆಗಳ ಮೇಲೆ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಲ ದಿನಗಳ ಹಿಂದೆ ಕರವೇ ಬಣ ಬಂದ್ ಗೆ ಕರೆ ನೀಡಿತ್ತು. ಈ ವೇಳೆ ಮಾತನಾಡಿದ ಋಷಿಕುಮಾರ್ ಸ್ವಾಮೀಜಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರನ್ನು ಗುಂಡಿಟ್ಟುಕೊಲ್ಲಬೇಕು ಎಂದು ಹೇಳಿದ್ದರು ಎನ್ನಲಾಗಿದೆ. ಇದೇ ವಿಚಾರಕ್ಕೆ ಕನ್ನಡ ಪರ ವೇದಿಕೆಯ ಕಾರ್ಯಕರ್ತರು ಸ್ವಾಮೀಜಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕನ್ನಡ ಪರ ಹೋರಾಟಗಾರರನ್ನು ಗುಂಡಿಕ್ಕಿ ಕೊಲ್ಲಿ ಎಂದಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಇದಲ್ಲದೇ ವಾಹಿನಿಯೊಂದರಲ್ಲಿ ಸಂದರ್ಶನ ನೀಡುವ ವೇಳೆ ಮಾತನಾಡಿದ್ದ ಋಷಿಕುಮಾರ್ ಸ್ವಾಮೀಜಿ ಕುವೆಂಪು ಅವರ ಶಾಂತಿಯ ತೋಟದಲ್ಲಿ ಕಲ್ಲು ಮುಳ್ಳುಗಳಿವೆ ಅದನ್ನೆಲ್ಲ ಸ್ವಚ್ಛಗೊಳಿಸುತ್ತೇವೆ ಎಂದಿದ್ದರು. ಇದಲ್ಲದೇ ಇನ್ನೊಂದು ಸಂದರ್ಭದಲ್ಲಿ ಕೆಂಪೇಗೌಡರ ಬಗ್ಗೆಯೂ ಋಷಿಕುಮಾರ್ ಸ್ವಾಮೀಜಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.
ಇದೇ ಕಾರಣಕ್ಕೆ ಕನ್ನಡಪರ ಸಂಘಟನೆಗಳು ಋಷಿಕುಮಾರ್ ಸ್ವಾಮೀಜಿ ವಿರುದ್ಧ ತಿರುಗಿ ಬಿದ್ದಿದ್ದು ಕಾಳಿಮಠದ ಋಷಿಕುಮಾರ್ ಸ್ವಾಮೀಜಿಯವರ ಜೊತೆ ವಾಗ್ವಾದ ಮಾಡಿದ ಬಳಿಕ ಸ್ವಾಮೀಜಿಯವರ ಮುಖಕ್ಕೆ ಮಸಿ ಬಳಿದಿದ್ದಾರೆ. ಇದರಿಂದ ಕೆಲಕಾಲ ಗಂಗಮ್ಮನ ಗುಡಿ ದೇವಾಲಯದ ಎದುರು ಉದ್ವಿಘ್ನ ಸ್ಥಿತಿ ಎದುರಾಗಿತ್ತು. ಬಳಿಕ ಮಧ್ಯಪ್ರವೇಶಿಸಿದ ಸಾರ್ವಜನಿಕರು ಕಾಳಿಮಠದ ಋಷಿಕುಮಾರ್ ಸ್ವಾಮೀಜಿಯವರನ್ನು ಸಮಾಧಾನ ಪಡಿಸಿ ಸ್ಥಳದಿಂದ ಕಳುಹಿಸಿದ್ದಾರೆ.
ಆದರೆ ಈ ಬಗ್ಗೆ ಮಲ್ಲೇಶ್ವರಂ ಸೇರಿದಂತೆ ನಗರದ ಯಾವುದೇ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಈ ದಾಳಿ ಬಳಿಕವೂ ರೊಚ್ಚಿಗೆದ್ದ ಕಾಳಿಮಠದ ಋಷಿಕುಮಾರ್ ಮತ್ತೆಕರವೇ ಕಾರ್ಯಕರ್ತರಿಗೆ ಸವಾಲು ಹಾಕಿದ್ದು, ನೀವು ಗಂಡಸರಾದರೇ ನಾನು ಹೇಳಿದ್ದನ್ನು ಸಾಬೀತು ಪಡಿಸಿ ಎಂದು ಸವಾಲು ಹಾಕಿದ್ದಾರೆ.
ಇದನ್ನೂ ಓದಿ : ನಾನು ಸಮಾಧಿ ಸ್ಥಿತಿಯಲ್ಲಿದ್ದೇನೆ : ಸಾವಿನ ವದಂತಿಗೆ ಸ್ವಾಮಿ ನಿತ್ಯಾನಂದ ಸ್ಪಷ್ಟನೆ
ಇದನ್ನೂ ಓದಿ : ಕೆ.ಎಲ್ ರಾಹುಲ್ & ಆಥಿಯಾ ಶೆಟ್ಟಿ ವಿವಾಹಕ್ಕೆ ಅಸ್ತು ಎಂದ ಸುನೀಲ್ ಶೆಟ್ಟಿ
Black inked on face of Rishikumara swamiji Kalimata In Bangalore