ಚುನಾವಣೆ ಹೊತ್ತಿನಲ್ಲಿ ಬಾಂಬೆ ಬುಕ್ ಬಾಂಬ್ : ಪುಸ್ತಕದಲ್ಲಿದೆ 17 ಶಾಸಕರು ರಂಗೀನ್ ಕಹಾನಿ !

ಬೆಂಗಳೂರು : (Bombay Return Day Book ) : ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಮುಂಬೈ ಪೊಲಿಟಿಕ್ಸ್ ಗೆ ಅದರದ್ದೇ ಆದ ಮಹತ್ವವಿದೆ. ಒಂದು ಸರಕಾರ ಉರುಳಿಸಿ ಮತ್ತೊಂದು ಸರ್ಕಾರದ ರಚನೆಗೆ ಕಾರಣವಾದ ಬಾಂಬೆ ಪೊಲಿಟಿಕ್ಸ್ ಬಗ್ಗೆ ಅಷ್ಟೇ ಕಲರ್ ಫುಲ್ ಕತೆಗಳು ಕೂಡ ಇದೆ. ಈಗ ಈ ಎಲ್ಲ ಕತೆಗಳನ್ನೂ ಒಗ್ಗೂಡಿಸಿ ಬಾಂಬೆ ಡೈರಿ ಎಂಬ ಪುಸ್ತಕ ಬಿಡುಗಡೆಯಾಗಲಿದ್ದು, ಈ ಪುಸ್ತಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸುವ ನೀರಿಕ್ಷೆ ಇದೆ. ಹೌದು ಅಂತೂ ಇಂತೂ ಕರ್ನಾಟಕದ ಶಾಸಕರುಗಳ ಬಾಂಬೆ ಕಲರ್ ಫುಲ್ ಕತೆಗೊಂದು ಅಧಿಕೃತ ಮುದ್ರೆ ಸಿಗೋ ಕಾಲ ಸನ್ನಿಹಿತವಾಗಿದೆ. ಕರ್ನಾಟಕದಲ್ಲಿ ಅಸ್ತಿತ್ವದಲ್ಲಿದ್ದ ಸಮ್ಮಿಶ್ರ ಸರ್ಕಾರವನ್ನು ಬುಡಮೇಲು ಮಾಡಲು ಮುಂಬೈಗೆ ತೆರಳಿದ್ದ 17 ಶಾಸಕರ ಕತೆಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಲೇಖರೊಬ್ಬರು ಸಿದ್ಧವಾಗಿದ್ದಾರೆ.

ಇದರ ಫಲವಾಗಿ ಬಾಂಬೆ ರಿಟರ್ನ್ ಡೇಸ್’ ಸೆನ್ಸ್‌ಲೆಸ್ ಪಾಲಿಟ್ರಿಕ್ಸ್ ಎಂಬ ಪುಸ್ತಕ ಬಿಡುಗಡೆ ಸಿದ್ದತೆ ನಡೆದಿದೆ. ಚುನಾವಣೆ ಹೊತ್ತಿನಲ್ಲಿ ಈ ಪುಸ್ತಕ ಬಿಡುಗಡೆಯಾದಲ್ಲಿ ರಾಜಕೀಯ ನಾಯಕರ ಅಸಲಿ ಕತೆಗಳು ಬಯಲಿಗೆ ಬರಲಿದ್ದು, ಮುಂದಿನ ಚುನಾವಣೆ ಹಾಗೂ ಮತದಾನದ ಮೇಲೂ ಇದರ ಪ್ರಭಾವ ಬೀಳೋದು ಖಚಿತ ಎನ್ನಲಾಗ್ತಿದೆ. ಮೈಸೂರು ಮೂಲದ ಲೇಖಕವೀರಭದ್ರಪ್ಪ ಬಿಸ್ಲಳ್ಳಿ ಈ ಪುಸ್ತಕ ಬರೆದಿದ್ದಾರೆ. ಸಾಹಿತಿ, ಹಿರಿಯ ಪತ್ರಕರ್ತರಾಗಿರೋ ವಿ.ವೀರಭದ್ರಪ್ಪ ಬಿಸ್ಲಳ್ಳಿ ಬರೆದಿರುವ 200 ಪುಟಗಳ ಪುಸ್ತಕ ಇದಾಗಿದ್ದು, ಇದರಲ್ಲಿ ೧೭ ಶಾಸಕರ ರಂಗೀನ ಕತೆಗಳು ಓದುಗರಿಗೆ ಸಿಗಲಿದೆ ಎನ್ನಲಾಗ್ತಿದೆ.

ಮೈಸೂರು ಮೂಲದ ಸಾಹಿತಿ ವಿ.ವೀರಭದ್ರಪ್ಪ ಬಿಸ್ಲಳ್ಳಿ ಬರೆದಿರೋ ಈ ಪುಸ್ತಕವನ್ನು ಬಸವನಗುಡಿ ಸುಜಯ್ ಪಬ್ಲಿಕೇಷನ್ಸ್‌ನಲ್ಲಿ ಮುದ್ರಿಸಲಾಗಿದ್ದು, ಮೈಸೂರು ವಿಶ್ವಯ್ಯ ಬುಕ್‌ಹೌಸ್‌ಗೆ ಮಾರಾಟದ ಅನುಮತಿ ನೀಡಲಾಗಿದೆ. ಸದ್ಯದಲ್ಲೇ ಪುಸ್ತಕ ಬಿಡುಗಡೆದ ಸಿದ್ದತೆಗಳು ಆರಂಭವಾಗಿವೆ.ಆಪರೇಷನ್ ಕಮಲಕ್ಕೆ ಒಳಗಾಗಿ ಬಾಂಬೆ ಸೇರಿದ್ದ ಹದಿನೇಳು ಮಂದಿ ಶಾಸಕರು ಅಲ್ಲಿ ಏನೆಲ್ಲ ಮಾಡಿದ್ರು, ಮುಂಬೈನ ಖಾಸಗಿ ಹೊಟೇಲ್‌ನಲ್ಲಿ ಕಳೆದ ದಿನಗಳು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದೇಗೆ, ಸಿದ್ದು ಡಿಕೆಶಿ ಪಾತ್ರ, ಜಾರಕಿಹೊಳಿ ರಾಜೀನಾಮೆ ಪ್ರಕರಣ, ಬಿಎಸ್‌ವೈ ರಾಜೀನಾಮೆ ಹೀಗೆ ಹಲವಾರು ಸಂಗತಿಗಳ ಬಗ್ಗೆ ಉಲ್ಲೇಖಿಸಲಾಗಿದೆ.

ಆದರೆ (Bombay Return Day Book ) ಪುಸ್ತಕ ರಾಜಕೀಯ ಅಂಶಗಳನ್ನು ಒಳಗೊಂಡಿದೆ ಎಂದು ಮೇಲ್ನೋಟಕ್ಕೆ ಅನ್ನಿಸಿದ್ದರೂ ಪುಸ್ತಕದ ಮುಖಪುಟ ವಿನ್ಯಾಸ ಹಲವು ಅನುಮಾನ ಮೂಡಿಸಿದ್ದು, ಇದು ಬಾಂಬೆಗೆ ತೆರಳಿದ್ದ ಶಾಸಕರ ಇನ್ನೊಂದು ಮುಖವನ್ನು ಬಿಚ್ಚಿಡುವಂತಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚಿಸಲಾಗುತ್ತಿದೆ. ಅಲ್ಲದೇ ಈ ಪುಸ್ತಕ ಬಿಡುಗಡೆ ವಿಚಾರ ಹೊರಬೀಳುತ್ತಿದ್ದಂತೆ ಬಾಂಬೆ ರಿಟರ್ನ್ ಶಾಸಕರ ಎದೆಯಲ್ಲಿ ನಡುಕ ಆರಂಭವಾಗಿದೆ ಎಂಬ ಮಾಹಿತಿಯೂ ಇದೆ. ಒಟ್ಟಿನಲ್ಲಿ ಸದ್ಯ ಕರ್ನಾಟಕ ರಾಜಕೀಯದಲ್ಲಿ ಬುಕ್ ಬಾಂಬ್ ಸದ್ದು ಮಾಡಿದೆ.

ಇದನ್ನೂ ಓದಿ : ಕಾಂಗ್ರೆಸ್ ಟಿಕೇಟ್ ಹಂಚಿಕೆಯಲ್ಲೇ ಅಪಸ್ವರ : ಬಂಡಾಯದ ಸೂಚನೆ ಕೊಟ್ಟ ಎಂ.ಬಿ.ಪಾಟೀಲ್

ಇದನ್ನೂ ಓದಿ : ಬಿಜೆಪಿಗೆ ಬಿಸಿತುಪ್ಪವಾದ ಸೋಮಣ್ಣ ಮುನಿಸು: ಸ್ವತಃ ಸಂಧಾನಕ್ಕಿಳಿದ ಸಿಎಂ ಬೊಮ್ಮಾಯಿ

Comments are closed.