BJP MLA BM Sukumar Shetty : ಬೈಂದೂರು ಬಿಜೆಪಿ ಶಾಸಕ ಬಿಎಂ ಸುಕುಮಾರ ಶೆಟ್ಟಿ ಉಚ್ಚಾಟನೆ

ಬೆಂಗಳೂರು : ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಬಿಎಂ ಸುಕುಮಾರ ಶೆಟ್ಟಿ (BJP MLA BM Sukumar Shetty) ಅವರನ್ನು ಬಿಜೆಪಿ ಪಕ್ಷ ಆರು ವರ್ಷಗಳ ಕಾಲ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿ ಆದೇಶಿಸಿದೆ. ಈ ಕುರಿತು ಬಿಜೆಪಿ ರಾಜ್ಯ ಶಿಸ್ತು ಸಮಿತಿಯ ಅಧ್ಯಕ್ಷ ಲಿಂಗರಾಜ್‌ ಪಾಟೀಲ್‌ ಆದೇಶ ಹೊರಡಿಸಿದ್ದಾರೆ ಎಂಬ ಸುದ್ದಿ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆದೇಶಶ ಪ್ರತಿಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ದ ಶಾಸಕ ಬಿಎಂ ಸುಕುಮಾರ ಶೆಟ್ಟಿ ಅವರು ಕೆಲಸ ಮಾಡಿರುವ ಕುರಿತು ದಾಖಲೆ ದೊರಕಿದೆ. ಕಾಂಗ್ರೆಸ್‌ ಅಭ್ಯರ್ಥಿಗೆ ಹಣ ಒದಗಿಸಿರುವ ದಾಖಲೆ ಲಭ್ಯವಾದ ಹಿನ್ನೆಲೆಯಲ್ಲಿ ಪಕ್ಷದ ಶಿಸ್ತನ್ನು ಉಲ್ಲಂಘಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಶಿಸ್ತು ಕ್ರಮಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಬೈಂದೂರು ಶಾಸಕ ಸುಕುಮಾರ ಶೆಟ್ಟಿ (BJP MLA BM Sukumar Shetty) ಅವರನ್ನು ಅಮಾನತ್ತು ಮಾಡಿರುವ ಕುರಿತು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಅವರು ನೋಟೀಸ್‌ ಜಾರಿ ಮಾಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸುಕುಮಾರ ಶೆಟ್ಟಿ ಅವರು ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕುವಂತೆ ಅನೇಕರಿಗೆ ಕರೆ ಮಾಡಿದ್ದರು. ಹಲವರಿಗೆ ಕಾಂಗ್ರೆಸ್‌ ಪರ ಕೆಲಸ ಮಾಡುವಂತೆ ಹಣವನು ಒದಗಿಸಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲದೇ ಕಾಂಗ್ರೆಸ್‌ ಅಭ್ಯರ್ಥಿ ಗೋಪಾಲ ಪೂಜಾರಿ ಅವರಿಗೆ ಎರಡು ಕೋಟಿ ರೂಪಾಯಿ ನೀಡಿದ್ದಾರೆ ಎನ್ನುವ ಕುರಿತು ಆಡಿಯೋ ದಾಖಲೆ ದೊರಕಿವೆ. ಅಷ್ಟೇ ಅಲ್ಲದೇ ಮತದಾನದ ಬಳಿಕ ಕ್ಷೇತ್ರದಲ್ಲಿ ಬಿಜೆಪಿ ಸೋಲುವ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಕುರಿತು ಮಂಡಲದ ಅಧ್ಯಕ್ಷ ದೀಪಕ್‌ ಶೆಟ್ಟಿ ಅವರು ಜಿಲ್ಲಾಧ್ಯಕ್ಷರ ಗಮನಕ್ಕೆ ತಂದಿದ್ದು, ಇದೀಗ ಶಿಸ್ತು ಸಮಿತಿ ಶಾಸಕರನ್ನು ಉಚ್ಚಾಟಿಸುವ ಮೂಲಕ ಶಿಸ್ತು ಕ್ರಮಕೈಗೊಂಡಿದೆ ಎಂಬ ಸಂದೇಶವನ್ನು ಹೊಂದಿರುವ ಆದೇಶ ಪ್ರತಿ ಹರಿದಾಡುತ್ತಿದೆ. ಇದೀಗ ಶಾಸಕ ಸುಕುಮಾರ ಶೆಟ್ಟಿ ಅವರ ಉಚ್ಚಾಟನೆ ಸುದ್ದಿಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಅವರು ಸ್ಪಷ್ಟನೆಯನ್ನು ನೀಡಿದ್ದು, ಇದೊಂದು ಸುಳ್ಳು ಆದೇಶ ಪ್ರತಿ ಎಂದಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಬೈಂದೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಬಿಎಂ ಸುಕುಮಾರ ಶೆಟ್ಟಿ ಅವರ ಬದಲು ಗುರುರಾಜ್‌ ಗಂಟಿಹೊಳೆ ಅವರನ್ನು ಕಣಕ್ಕೆ ಇಳಿಸಿತ್ತು. ಇದರ ಬೆನ್ನಲ್ಲೇ ಸುಕುಮಾರ ಶೆಟ್ಟಿ ಅವರು ಪಕ್ಷದ ವಿರುದ್ದ ಮುನಿಸಿಕೊಂಡಿದ್ದರು. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಸುಕುಮಾರ ಶೆಟ್ಟಿ ಅವರು ಪ್ರಚಾರ ನಡೆಸಿರಲಿಲ್ಲ. ಬೈಂದೂರು ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೋಪಾಲ ಪೂಜಾರಿ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಗುರುರಾಜ್‌ ಗಂಟಿಹೊಳೆ ಅವರನ್ನು ಕಣಕ್ಕೆ ಇಳಿದಿದ್ದು, ನಾಡಿದ್ದು ಮತದಾನದ ಫಲಿತಾಂಶ ಹೊರಬೀಳಬೇಕಾಗಿದೆ.

ಇದನ್ನೂ ಓದಿ : Karnataka exit poll 2023 : ಚುನಾವಣೋತ್ತರ ಸಮೀಕ್ಷೆ, ಕರ್ನಾಟಕದಲ್ಲಿ ಯಾರಿಗೆ ಎಷ್ಟು ಸ್ಥಾನ ? ಯಾವ ಪಕ್ಷಕ್ಕೆ ಅಧಿಕಾರ ?

ಇದನ್ನೂ ಓದಿ : ಶಾಸಕ ಸಿ.ಟಿ ರವಿ ಆರೋಗ್ಯದಲ್ಲಿ ಏರುಪೇರು : ದಿಢೀರ್‌ ಆಸ್ಪತ್ರೆಗೆ ದಾಖಲು

Byndoor BJP MLA BM Sukumar Shetty expelled

Comments are closed.